ಜನಪ್ರಿಯ ನಟರಾದ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಶ್ರೀಯಾ ಶರಣ್ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಬ್ಜ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 100 ಕೋಟಿ ರೂಗೂ ಅಧಿಕ ಗಳಿಕೆ ಮಾಡಿದೆ. ಮಾರ್ಚ್ 17, 2023 ರಂದು ಬಿಡುಗಡೆಯಾದ ಪ್ಯಾನ್ ಇಂಡಿಯಾ ಆಕ್ಷನ್-ಥ್ರಿಲ್ಲರ್ ಇದೀಗ ಒಟಿಟಿ ಬಿಡುಗಡೆ ದಿನಾಂಕವನ್ನು ಸಹ ಲಾಕ್ ಮಾಡಿಕೊಂಡಿದೆ ಎಂದು ವರದಿಗಳು ಹೇಳುತ್ತಿವೆ.
ಮಾಹಿತಿ ಪ್ರಕಾರ, ಕಬ್ಜ ಚಲನಚಿತ್ರ ತಯಾರಕರು ಸಿನಿಮಾದ ಡಿಜಿಟಲ್ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಸಿನಿಮಾ ಏಪ್ರಿಲ್ 14 ರಿಂದ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆಯಂತೆ. ಕಬ್ಜ 140 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದ್ರೆ, ಈ ಬಗ್ಗೆ ನಿರ್ಮಾಪಕರು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
-
#Kabzaa | Amazon Prime | April 14th. pic.twitter.com/LYNzXxwfUW
— LetsCinema (@letscinema) March 27, 2023 " class="align-text-top noRightClick twitterSection" data="
">#Kabzaa | Amazon Prime | April 14th. pic.twitter.com/LYNzXxwfUW
— LetsCinema (@letscinema) March 27, 2023#Kabzaa | Amazon Prime | April 14th. pic.twitter.com/LYNzXxwfUW
— LetsCinema (@letscinema) March 27, 2023
ಜರ್ಮನಿಯ ಬರ್ಲಿನ್, ಮಲೇಷಿಯಾ, ಇಂಡೋನೇಷಿಯಾ, ಯು.ಕೆ, ಯು.ಎಸ್, ಆಸ್ಟ್ರೇಲಿಯಾ, ಮಸ್ಕತ್ ಹೀಗೆ ವಿಶ್ವದ ಅನೇಕ ಕಡೆಗಳಲ್ಲಿ ಸಿನಿಮಾ ತೆರೆ ಕಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಎರಡೇ ದಿನಗಳಲ್ಲಿ 100 ಕೋಟಿ ರೂಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ. ಇನ್ನೊಂದೆಡೆ, ಕಬ್ಜ 2ನೇ ಭಾಗದ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಚಿತ್ರವನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮತ್ತು ಸುಂದರವಾಗಿ ಚಿತ್ರೀಕರಿಸಲಾಗುವುದು ಎಂದು ನಿರ್ದೇಶಕ ಆರ್.ಚಂದ್ರು ಈಗಾಗಲೇ ತಿಳಿಸಿದ್ದಾರೆ.
ಇದನ್ನೂ ಓದಿ : 'ಕಬ್ಜ 2'ಗೆ ನಿರ್ದೇಶಕ ಆರ್ ಚಂದ್ರು ತಯಾರಿ: ಶಿವಣ್ಣನ ಜೊತೆ ಬಾಲಿವುಡ್ ನಟನ ಎಂಟ್ರಿ?
ಕಬ್ಜ ಸಿನಿಮಾ ಕಥೆ: ಗ್ಯಾಂಗ್‌ಸ್ಟರ್ ಕಥಾ ಹಂದರ ಒಳಗೊಂಡಿರುವ ಕಬ್ಜದಲ್ಲಿ ಉಪ್ಪಿ ಲಾಂಗ್ ಹಿಡಿದು ಮಾಸ್ ಅವತಾರ ತಾಳಿದ್ದಾರೆ. ಸುದೀಪ್, ಶಿವರಾಜ್ ಕುಮಾರ್ ಅವರ ಪಾತ್ರವೂ ಅಭಿಮಾನಿಗಳಿಗೆ ಖುಷಿ ನೀಡಿದೆ. 1960 - 1980ರಲ್ಲಿ ನಡೆಯುವ ಕಥೆಯನ್ನು ಕಬ್ಜ ಒಳಗೊಂಡಿದೆ. ಅಮರಾವತಿ ಎಂಬ ನಗರವು ಅಂಡರ್ ವರ್ಲ್ಡ್ ಅಧೀನದಲ್ಲಿರುತ್ತೆ. ಬಹದ್ದೂರ್ ಎಂಬ ರಾಜಮನೆತನದವರು ಈ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಲೆಕ್ಕಾಚಾರ ಹಾಕುತ್ತಿರುತ್ತಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಅಮರಾವತಿಯಲ್ಲಿ ಬಲಿಷ್ಠನಾದ ಕಲೀಲ್ ಎಂಬ ಡಾನ್ ಪಾಳೇಗಾರನಾಗಿರುತ್ತಾನೆ. ಪೈಲಟ್ ಆಗಬೇಕು ಅಂದುಕೊಂಡಿದ್ದ ಅರ್ಕೇಶ್ವರ ಅಂದ್ರೆ, ಉಪೇಂದ್ರ ಅಮರಾವತಿಗೆ ಏಕೆ ಎಂಟ್ರಿ ಕೊಡುತ್ತಾನೆ ಎನ್ನುವುದು ಸಿನಿಮಾದ ಕಥೆ.
ಇದನ್ನೂ ಓದಿ : 50 ದೇಶ, 5 ಭಾಷೆ: ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ 'ಕಬ್ಜ'
ರವಿ ಬಸ್ರೂರು ಸಂಗೀತ ಸಂಯೋಜಿಸಿರುವ ಸಾಹಸಮಯ ಕಬ್ಜ ಚಿತ್ರದಲ್ಲಿ ನಟಿ ಶ್ರೀಯಾ ಶರಣ್ ಮಿಂಚಿದ್ದಾರೆ. ಉಳಿದಂತೆ, ನವಾಬ್ ಷಾ, ತೆಲುಗು ನಟರಾದ ಪೊಸನಿ ಕೃಷ್ಣ ಮುರಳಿ, ಮುರಳಿ ಶರ್ಮ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ನೀನಾಸಂ ಅಶ್ವಥ್, ಕಾಮರಾಜನ್ ತಮ್ಮ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ : 'ಕಬ್ಜ'ದಲ್ಲಿ ಉಪ್ಪಿ ಬಲಗೈ ಬಂಟನಾಗಿ ಅನೂಪ್ ರೇವಣ್ಣ ರೀ ಎಂಟ್ರಿ