ETV Bharat / entertainment

ಜೂಲಿಯೆಟ್ 2 ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ - ashwini puneeth rajkumar

ಹೊಸ ಪ್ರತಿಭೆಗಳ ಜೂಲಿಯೆಟ್ 2 ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅನಾವರಣಗೊಳಿಸಿದ್ದಾರೆ.

ಜೂಲಿಯೆಟ್ 2 ಟೀಸರ್  ಜೂಲಿಯೆಟ್ 2 ಸಿನಿಮಾ  ಜೂಲಿಯೆಟ್ ಕನ್ನಡ ಸಿನಿಮಾ  ಅಶ್ವಿನಿ ಪುನೀತ್ ರಾಜ್‌ಕುಮಾರ್  ಈಟಿವಿ ಭಾರತ ಕನ್ನಡ  etv bharata kannada  Juliet 2 movie teaser  Juliet 2 movie  kannada Juliet movie  ashwini puneeth rajkumar  ಜೂಲಿಯೆಟ್ 2 ಕಥೆ
ಜೂಲಿಯೆಟ್ 2 ಟೀಸರ್
author img

By

Published : Jan 24, 2023, 5:40 PM IST

Updated : Jan 24, 2023, 7:37 PM IST

ಜೂಲಿಯೆಟ್ 2 ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಕನ್ನಡ ಚಿತ್ರರಂಗದ ನಗು ಮುಖದ‌ ಒಡೆಯನಾಗಿ, ಕೋಟ್ಯಂತರ ಅಭಿಮಾನಿಗಳ ಮನೆ ಮಾತಾಗಿರುವ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹೊಸಬರ ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಪತಿ ಮಾಡಿದ್ದ ಒಳ್ಳೆ ಕೆಲಸಗಳನ್ನು ಮುಂದುವರಿಸಿದ್ದಾರೆ. ಕನ್ನಡ ಚಿತ್ರರಂಗ ದೊಡ್ಡ ಮಟ್ಟದ ಬೆಳೆಯಬೇಕು ಎಂದು ಹಂಬಲಿಸುತ್ತಿದ್ದ ಅಪ್ಪು ನಮ್ಮನ್ನಗಲಿ ಒಂದು ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಅಪ್ಪು ಅಗಳಿಲಿಕೆಯ ನಂತರ ಅವರ ಸಿನಿಮಾ ಸಂಸ್ಥೆಯ ಜವಾಬ್ದಾರಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತು ಕೆಲಸ ಮುಂದುವರೆಸಿದ್ದಾರೆ.

ಹೊಸಬರ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಬೆಂಬಲ: ಹೌದು, ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಕಂಟೆಂಟ್ ಜೊತೆಗೆ ಟ್ಯಾಲೆಂಟ್‌ ಇರುವ ಹೊಸ ಪ್ರತಿಭೆಗಳ ಆಗಮನ ಆಗುತ್ತಿದೆ. ಇದೀಗ ಫ್ರೆಶ್ ಕಂಟೆಂಟ್ ಇಟ್ಟುಕೊಂಡು ಹೊಸಬರ ತಂಡವೊಂದು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದೆ. ತನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಜೂಲಿಯೆಟ್‌ 2 ಚಿತ್ರಕ್ಕೆ ಬೆನ್ನೆಲುಬಾಗಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿಂತಿದ್ದಾರೆ‌.

ಜೂಲಿಯೆಟ್ 2 ಟೀಸರ್​ ರಿಲಿಸ್: ದೊಡ್ಮನೆಯ ಕಿರಿಮಗ ಪುನೀತ್ ರಾಜ್‍ಕುಮಾರ್ ಬದುಕಿದ್ದ ವೇಳೆ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಅವರ ಬ್ಯಾನರ್‌ನಲ್ಲಿ ಹೊಸಬರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಈಗ ಅದೇ ಸಂಸ್ಕೃತಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮುಂದುವರಿಸಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ, ಹೊಸಬರ ನಟನೆಯ ಜೂಲಿಯೆಟ್ 2 ಚಿತ್ರದ ಟೀಸರ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ, ನಿಮ್ಮ ಚಿತ್ರ ಸಿನಿಮಾ ಪ್ರೇಕ್ಷಕರ ಪ್ರೀತಿ ಗಳಿಸಲಿ ಅಂತಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  • " class="align-text-top noRightClick twitterSection" data="">

ಜೂಲಿಯೆಟ್ 2 ಕಥೆ: ಇನ್ನೂ ಕಳೆದ ಸಾಲಿನಿಂದ ಕನ್ನಡ ಚಿತ್ರಗಳು ಭಾರತೀಯ ಸಿನಿಮಾ ರಂಗದಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಕಥೆ ಹಾಗೂ ಮೇಕಿಂಗ್ ವಿಚಾರದಲ್ಲಿ ಕನ್ನಡದ ಚಿತ್ರಗಳದ್ದೇ ಮೇಲುಗೈ. ಈಗ ಅಂಥದ್ದೇ ಮತ್ತೊಂದು ಕನ್ನಡ ಸಿನಿಮಾ ಜೂಲಿಯಟ್​ 2 ಭಾರೀ ಸದ್ದು ಮಾಡುತ್ತಿದೆ. ಪ್ರೇಮಂ ಪೂಜ್ಯಂ ಚಿತ್ರದ ನಾಯಕಿ ಬೃಂದಾ ಆಚಾರ್ಯ ಅಭಿನಯದ ವಿಭಿನ್ನ ಸಿನಿಮಾ ಇದು. 'ಜೂಲಿಯೆಟ್' ಹೆಸರೇ ಹೇಳುವಂತೆ ಸಿನಿಮಾ ಸಂಪೂರ್ಣವಾಗಿ ನಟಿ ಬೃಂದಾ ಅವರ ಪಾತ್ರದ ಸುತ್ತ ಸುತ್ತುತ್ತದೆ. ಪಟ್ಟಣದಿಂದ ಹಳ್ಳಿಗೆ ಸೇರುವ ನಾಯಕಿಯ ಬದುಕಲ್ಲಿ ನಡೆಯುವ ಘಟನೆ, ಶಾರದೆಯಂತೆ ಶಾಂತರೂಪಿಯಾದ ನಾಯಕಿ ಹೇಗೆ ರಣಚಂಡಿ ಆಗುತ್ತಾಳೆ ಅನ್ನೋದು ಜೂಲಿಯೆಟ್ 2 ಚಿತ್ರದ ಕಥೆ.

ಇದನ್ನೂ ಓದಿ: ಪಠಾಣ್​ ಬಿಡುಗಡೆಗೆ ಕ್ಷಣಗಣನೆ: ಕೆಜಿಎಫ್ ದಾಖಲೆ ಮುರಿಯಲಿದೆಯಾ ಶಾರುಖ್​ ಸಿನಿಮಾ?!

ಈ ಚಿತ್ರದ ಟೀಸರ್ ನೋಡ್ತಿದ್ರೆ ನೀವು ಬೆಚ್ಚಿಬೀಳೋದು ಗ್ಯಾರೆಂಟಿ. ಪ್ರತೀ ಫ್ರೇಮ್ ಕೂಡ ನಿಮ್ಮನ್ನು ಹಿಡಿದಿಡುತ್ತೆ. ಇದೊಂದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ವಿರಾಟ್ ಬಿ ಗೌಡ ನಿರ್ದೇಶನ ಮಾಡಿದ್ದಾರೆ. ಇಲ್ಲಿನ ಹೈಲೆಟ್ಸ್ ಅಂದ್ರೆ ಟೆಕ್ನಿಕಲ್ ಟೀಂ. ಸಚಿನ್ ಬಸ್ರೂರ್ ಅವರ ಬಿಜಿಎಂ ಹಾಗು ಶ್ಯಾಂಟೋ ವಿ ಆಂಟೋ ಕ್ಯಾಮರಾ ವರ್ಕ್, ದಿನೇಶ್ ಆಚಾರ್ಯ ಅವರ ವಿಎಫೆಕ್ಸ್ ಚಿತ್ರವನ್ನು ಸುಂದರಗೊಳಿಸಿದೆ. ಇನ್ನೂ ಬೃಂದಾ ಆಚಾರ್ಯ ಜೊತೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ 'ಲವ್ ಬರ್ಡ್ಸ್'ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಬೆಂಬಲ

ವಿಶೇಷ ಅಂದ್ರೆ ಜೂಲಿಯೆಟ್ ಎರಡು ಭಾಗದಲ್ಲಿ ಸಿದ್ಧವಾಗಿದೆ. ಆ ಪೈಕಿ ಎರಡನೇ ಭಾಗ ಮೊದಲು ಬಿಡುಗಡೆಯಾಗಲಿರುವುದು ಈ ಚಿತ್ರತಂಡದ ವಿಶೇಷ. ಇಷ್ಟೇ ಅಲ್ಲ ಚಿತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್​ನಲ್ಲಿ ಪಂಚ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿರೋ ಜೂಲಿಯೆಟ್ 2 ಚಿತ್ರವನ್ನು ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶ ಸೇರಿದಂತೆ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಟೀಸರ್‌ನಿಂದಲೇ ಗಮನ ಸೆಳೆಯುತ್ತಿರೋ ಜೂಲಿಯೆಟ್ 2 ಚಿತ್ರತಂಡ ಸದ್ಯದಲ್ಲೇ ಈ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.

Last Updated : Jan 24, 2023, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.