ETV Bharat / entertainment

ಜೂಹಿ ಚಾವ್ಲಾ, ಆರ್ ಮಾಧವನ್​​ಗೆ 'ಚಾಂಪಿಯನ್ಸ್ ಆಫ್ ಚೇಂಜ್' ಪ್ರಶಸ್ತಿ - ನಟ ಆರ್ ಮಾಧವನ್

ನಟಿ ಜೂಹಿ ಚಾವ್ಲಾ ಹಾಗೂ ನಟ ಆರ್. ಮಾಧವನ್ ಅವರಿಗೆ ದೆಹಲಿಯಲ್ಲಿ 2021ರ 'ಚಾಂಪಿಯನ್ ಆಫ್ ಚೇಂಜ್' ಪ್ರಶಸ್ತಿ ನೀಡಿ ಗೌರವಿಸಲಾಯಿತು.

R Madhavan and  Juhi Chawla
ಆರ್ ಮಾಧವನ್ ಹಾಗೂ ಜೂಹಿ ಚಾವ್ಲಾ
author img

By

Published : Feb 27, 2023, 9:34 AM IST

ನವದೆಹಲಿ: ಬಾಲಿವುಡ್ ನಟಿ ಜೂಹಿ ಚಾವ್ಲಾ ಮತ್ತು ನಟ ಆರ್. ಮಾಧವನ್ ಅವರಿಗೆ ಭಾನುವಾರ ನವದೆಹಲಿಯಲ್ಲಿ 'ಚಾಂಪಿಯನ್ಸ್ ಆಫ್ ಚೇಂಜ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಜೂಹಿ ಚಾವ್ಲಾ ಮತ್ತು ಮಾಧವನ್ ಈ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಮಾರಂಭದ ಕೆಲವು ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ನಟಿ ಜೂಹಿ ಚಾವ್ಲಾ ಹಾಗೂ ಮಾಧವನ್ ಕೃತಜ್ಞತೆ ಸಲ್ಲಿಸಿದ್ದಾರೆ.

ನಟಿ ಜೂಹಿ ಚಾವ್ಲಾ ಭಾನುವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, 'ಪ್ರತಿಯೊಬ್ಬ ಚಾಂಪಿಯನ್‌ನ ಹಿಂದೆ ಅವನನ್ನು ಚಾಂಪಿಯನ್ ಆಗಲು ಸಿದ್ಧಪಡಿಸುವ ತಂಡವಿದೆ. ನನ್ನ ಜೀವನವನ್ನು ಸ್ಪರ್ಶಿಸಿದ, ನನಗೆ ಕಲಿಯಲು, ಬೆಳೆಯಲು ಮತ್ತು ಸಮಾಜಕ್ಕಾಗಿ ನಾನು ಸಾಧ್ಯವಿರುವ ರೀತಿಯಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ಧಾರೆ. ಜೂಹಿ ಅವರ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ರವೀನಾ ಟಂಡನ್ ಅಭಿನಂದನೆ ಸಲ್ಲಿಸಿದ್ದಾರೆ. ಗೌರವಾನ್ವಿತ ಮತ್ತು ವಿನಮ್ರ..ಎಂದು ಖ್ಯಾತ ಗಾಯಕಿಯರಾದ ಅಲ್ಕಾ ಯಾಗ್ನಿಕ್, ಮನೀಶಾ ಕೊಯಿರಾಲ ಮೊದಲಾದವರು ಶುಭ ಹಾರೈಸಿದ್ದಾರೆ. ಅಲ್ಲದೇ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು "ಅಭಿನಂದನೆಗಳು ಅರ್ಹವಾಗಿವೆ" ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು, ಈ ಸ್ಮರಣೀಯ ಕ್ಷಣವನ್ನು ಮಾಧವನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. "ತುಂಬಾ ಧನ್ಯವಾದಗಳು. ದೇವರ ಕೃಪೆ" ಎಂದು ಶೀರ್ಷಿಕೆ ನೀಡಿದ್ದಾರೆ..' ನಟನ ಈ ಪೋಸ್ಟ್‌ಗೆ ಹಾಸ್ಯನಟ ಜಾಕಿರ್ ಖಾನ್, ಬಾಲಿವುಡ್ ನಟಿ ಶಮಿತಾ ಶೆಟ್ಟಿ, ರೋಹಿತ್ ರಾಯ್ ಮತ್ತು ಇತರ ಕಲಾವಿದರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿ: ಚಾಂಪಿಯನ್ಸ್ ಆಫ್ ಚೇಂಜ್ ಎಂಬುದು ಗಾಂಧಿಯ ಮೌಲ್ಯಗಳು, ಸಮುದಾಯ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಭಾರತೀಯ ಪ್ರಶಸ್ತಿಯಾಗಿದೆ. ಇದನ್ನು 2011ರಲ್ಲಿ ಸ್ಥಾಪಿಸಲಾಯಿತು. ಚಾಂಪಿಯನ್ಸ್ ಆಫ್ ಚೇಂಜ್ (COC) ಎಂಬುದು ಸಮುದಾಯ ಸೇವೆ, ಸಾಮಾಜಿಕ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಾಷ್ಟ್ರೀಯ ಏಕತೆಯಂತಹ ಭಾರತೀಯ ಮೌಲ್ಯಗಳನ್ನು ಉತ್ತೇಜಿಸಲು ನೀಡುವ ಭಾರತೀಯ ಪ್ರಶಸ್ತಿಯಾಗಿದೆ. ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಭಾರತದ ಮಾಜಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಅಥವಾ ದೇಶದ ಯಾವುದೇ ಪ್ರಮುಖ ರಾಜಕೀಯ ವ್ಯಕ್ತಿಯಿಂದ ನೀಡಲಾಗುತ್ತದೆ.

ಭಾರತೀಯ ಆರ್ಥಿಕತೆಯ ಇಂಟರ್ಯಾಕ್ಟಿವ್ ಫೋರಮ್ ಆನ್ ಇಂಡಿಯನ್ ಎಕಾನಮಿ (IFIE) ನಿಂದ ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದು ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಮೀಸಲಾಗಿರುವ ಲಾಭರಹಿತ ಕಂಪನಿಯಾಗಿದೆ. IFIE ವಾರ್ಷಿಕವಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ-ಮಟ್ಟದಲ್ಲಿ ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಯನ್ನು ಆಯೋಜಿಸುತ್ತದೆ.

ನಂದನ್ ಝಾ ಅವರು ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಗಳ ಸಂಸ್ಥಾಪಕರು ಮತ್ತು ಸಂಘಟಕರು. ಮತ್ತು ಇವರು 'ಇಂಟರಾಕ್ಟಿವ್ ಫೋರಮ್ ಆನ್ ಇಂಡಿಯನ್ ಎಕಾನಮಿ' ಅಧ್ಯಕ್ಷರಾಗಿದ್ದಾರೆ. ಪ್ರಶಸ್ತಿಯು ಪ್ರಮಾಣಪತ್ರ ಮತ್ತು ಚಿನ್ನದ ಪದಕವನ್ನು ಒಳಗೊಂಡಿದೆ. ಇದನ್ನು ನಾಲ್ಕು ವರ್ಗಗಳಲ್ಲಿ ನೀಡಲಾಗಿದೆ. ಅವುಗಳೆಂದರೆ: - ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಅತ್ಯುತ್ತಮ ಕೊಡುಗೆ, ಸ್ವಚ್ಛ ಭಾರತ್ ಅಭಿಯಾನದಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿ ಪಡೆದ ಹೇಮಾ ಮಾಲಿನಿ, ಸುಶ್ಮಿತಾ ಸೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.