ವಿಕ್ರಮಾದಿತ್ಯ ಮೋಟ್ವಾನೆ (Vikramaditya Motwane) ನಿರ್ದೇಶನದ ಅಮೆಜಾನ್ ಸೀರಿಸ್ "ಜುಬ್ಲಿ" ಏಪ್ರಿಲ್ 7 ರಂದು ಮೊದಲ ಎಪಿಸೋಡ್ ಪ್ರದರ್ಶನಗೊಳ್ಳಲಿದೆ ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರೈಮ್ ವಿಡಿಯೋ ಇಂದು ಪ್ರಕಟಿಸಿದೆ. 10 ಎಪಿಸೋಡ್ಗಳ ಕಾಲ್ಪನಿಕ ನಾಟಕವನ್ನು ವಿಕ್ರಮಾದಿತ್ಯ ಅವರು ನಿರ್ದೇಶಿಸಿದ್ದಾರೆ. ಅತುಲ್ ಸಬರ್ವಾಲ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
- " class="align-text-top noRightClick twitterSection" data="">
ಭಾರತೀಯ ಸಿನಿಲೋಕದ ಸೀರಿಸ್: ಭಾರತೀಯ ಚಿತ್ರರಂಗ ಕುರಿತ ಸೀರಿಸ್ ಇದಾಗಿದೆ. ರಿಲಯನ್ಸ್ ಎಂಟರ್ಟೈನ್ಮೆಂಟ್ ಮತ್ತು ಫ್ಯಾಂಟಮ್ ಸ್ಟುಡಿಯೋಸ್ ಸಹಯೋಗದೊಂದಿಗೆ ಆಂದೋಲನ್ ಫಿಲ್ಮ್ಸ್ ಈ ಸಿರಿಸ್ ಅನ್ನು ನಿರ್ಮಿಸಿದೆ. ಪ್ರೊಸೆನ್‌ಜಿತ್ ಚಟರ್ಜಿ, ಅದಿತಿ ರಾವ್ ಹೈದರಿ, ಅಪರ್ ಶಕ್ತಿ ಖುರಾನಾ, ವಾಮಿಕಾ ಗಬ್ಬಿ, ಸಿದ್ದಾಂತ್ ಗುಪ್ತಾ, ನಂದೀಶ್ ಸಂಧು ಮತ್ತು ರಾಮ್ ಕಪೂರ್ ಈ ಸೀರಿಸ್ನಲ್ಲಿ ನಟಿಸಿದ್ದಾರೆ.
ಸಿನಿಮಾಗಳನ್ನು ಸೆಲೆಬ್ರೇಟ್ ಮಾಡುವ ಸೀರಿಸ್: 'ಜುಬ್ಲಿ' ಸಿನಿಮಾಗಳ ಮ್ಯಾಜಿಕ್ ಅನ್ನು ಆಚರಿಸುವ ಸೀರಿಸ್ ಆಗಿದೆ. ನಮಗಾಗಿ ತೆರೆಯ ಮೇಲೆ ಕಥೆ ತರಲು ಪ್ರಯತ್ನಿಸುವ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ಕೊಡುವ ಗೌರವ. ಮೂರು ಯುವ ಪ್ರತಿಭೆಗಳು ಚಲನಚಿತ್ರೋದ್ಯಮದ ಭಾಗವಾಗಲು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ, ಮುಂದಿನ ಪಯಣದ ಕುರಿತ ಕಥೆ ಇದು ಎಂದು ಇಂಡಿಯಾ ಒರಿಜಿನಲ್ಸ್, ಪ್ರೈಮ್ ವಿಡಿಯೋ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ತಿಳಿಸಿದ್ದಾರೆ.
ಇದನ್ನೂ ಓದಿ : ಟಾಲಿವುಡ್ ಪವರ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ಕಬ್ಜ ನಿರ್ದೇಶಕ ಆರ್ ಚಂದ್ರು?!
ಚಲನಚಿತ್ರೋದ್ಯಮದ ಸುವರ್ಣ ಯುಗ... ಈ ಜುಬ್ಲಿ ಕಥೆಯು ಪ್ರೀತಿ, ಅಸೂಯೆ, ವಿಶ್ವಾಸಘಾತುಕತನ, ಎಲ್ಲವನ್ನೂ ಪಡೆಯುವ ಮಹತ್ವಾಕಾಂಕ್ಷೆಗಳಂತಹ ವಿಚಾರಗಳಿಂದ ತುಂಬಿದೆ. ವಿಕ್ರಮಾದಿತ್ಯ ಮೋಟ್ವಾನೆ ಅವರ ಪ್ರತಿಭೆ ಮತ್ತು ಅಮಿತ್ ತ್ರಿವೇದಿ ಸಂಯೋಜಿಸಿದ ಭಾವಪೂರ್ಣ ಸಂಗೀತವು 1940 ಮತ್ತು 1950ರ ದಶಕದ ಹಿಂದಿ ಚಲನಚಿತ್ರೋದ್ಯಮದ ಭವ್ಯವಾದ ಸುವರ್ಣ ಯುಗಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ಜುಬ್ಲಿ ನಾವು ಅತ್ಯಂತ ಹೆಮ್ಮೆಪಡುವ, ಆನಂದಿಸುವ ಸರಣಿಯಾಗಿದೆ. ಈ ಸೀರಿಸ್ ರಿಲೀಸ್ಗೆ ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಅಪರ್ಣಾ ಪುರೋಹಿತ್ ತಿಳಿಸಿದರು.
ಇದನ್ನೂ ಓದಿ : ಸ್ವರಾ ಭಾಸ್ಕರ್ - ಫಹಾದ್ ಅಹ್ಮದ್ ಆರತಕ್ಷತೆ: ರಾಹುಲ್ ಗಾಂಧಿ, ಜಯಾ ಬಚ್ಚನ್ ಸೇರಿದಂತೆ ಗಣ್ಯರು ಭಾಗಿ
ಎರಡು ಭಾಗಗಳಲ್ಲಿ ತೆರೆಗೆ... ಜುಬ್ಲಿ ಸೀರಿಸ್ ಪ್ರೈಮ್ ವಿಡಿಯೋದಲ್ಲಿ ಎರಡು ಭಾಗಗಳಲ್ಲಿ ಅನಾವರಣ ಆಗಲಿದೆ. ಭಾಗ ಒಂದು (ಒಂದರಿಂದ ಐದು ಎಪಿಸೋಡ್‌ಗಳು) ಏಪ್ರಿಲ್ 7 ರಂದು ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ ಮತ್ತು ಭಾಗ ಎರಡು (ಆರರಿಂದ ಹತ್ತು ಎಪಿಸೋಡ್‌ಗಳು) ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. 'ಜುಬ್ಲಿ' ಸೀರಿಸ್ ಐಡಿಯಾ ಸಹಾಯಕ ನಿರ್ದೇಶಕನಾಗಿ ಚಲನ ಚಿತ್ರೋದ್ಯಮದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಾಗಿನಿಂದ ನನ್ನಲ್ಲಿತ್ತು. ಸಿನಿಮಾ ಯುಗದ ಆಚರಣೆಯೇ ಜುಬ್ಲಿ ಸೀರಿಸ್ ಎಂದು ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ (Vikramaditya Motwane) ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Mrs Chatterjee vs Norway: ನನ್ನ ರಾಣಿ ಮಿಂಚಿದ್ದಾರೆಂದ ಶಾರುಖ್ ಖಾನ್