ETV Bharat / entertainment

ರಶ್ಮಿಕಾ, ಅಲ್ಲು ಅಭಿನಯದ 'ಪುಷ್ಪ 2'ನಲ್ಲಿ ಆರ್​ಆರ್​ಆರ್​ ಸ್ಟಾರ್ ಜೂ. ಎನ್​​ಟಿಆರ್ - ರಶ್ಮಿಕಾ ಮಂದಣ್ಣ

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2 ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ ಸೆಟ್​ಗೆ ಜೂನಿಯರ್ ಎನ್​​ಟಿಆರ್ ಭೇಟಿ ಕೊಟ್ಟಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

Jr NTR visits Pushpa 2 set
ಪುಷ್ಪ 2 ಸೆಟ್​ನಲ್ಲಿ ಜೂನಿಯರ್ ಎನ್​​ಟಿಆರ್
author img

By

Published : Apr 27, 2023, 2:06 PM IST

ಟಾಲಿವುಡ್​​ ಬಹುಬೇಡಿಕೆ ನಟ​ ಅಲ್ಲು ಅರ್ಜುನ್ ಮತ್ತು ನ್ಯಾಷನಲ್​ ಕ್ರಶ್​ ಖ್ಯಾತಿಯ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೂಲ್​​' ಚಿತ್ರೀಕರಣ ಭರದಿಂದ ಸಾಗುತ್ತಿದೆ. ​​ಈ ಶೂಟಿಂಗ್​ ಅಡ್ಡಕ್ಕೆ ಸೂಪರ್​​ ಹಿಟ್​ 'ಆರ್​ಆರ್​ಆರ್'​ ತಾರೆ ಜೂನಿಯರ್​ ಎನ್​​ಟಿಆರ್ ಎಂಟ್ರಿ ಕೊಟ್ಟಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Jr NTR visits Pushpa 2 set
ಅಲ್ಲು ಅರ್ಜುನ್ ಜೊತೆ ಜೂನಿಯರ್ ಎನ್​​ಟಿಆರ್

ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ 'ಪುಷ್ಪ : ದಿ ರೈಸ್‌' ಚಿತ್ರ 2021ರಲ್ಲಿ ಬಿಡುಗಡೆ ಅಗಿ ಧೂಳೆಬ್ಬಿಸಿತ್ತು. 'ಪುಷ್ಪ: ದಿ ರೈಸ್‌'ನ ಸೀಕ್ವೆಲ್​​ 'ಪುಷ್ಪ: ದಿ ರೂಲ್​​' ಈ ವರ್ಷ ತೆರೆಕಾಣಲಿರುವ ಬಹು ನಿರೀಕ್ಷಿತ ಚಿತ್ರ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಚಿತ್ರೀಕರಣ ಜೋರಾಗೆ ನಡೆಯುತ್ತಿದ್ದು ತಾರಾಗಣ ಈಗಾಗಲೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಸೂಪರ್‌ ಸ್ಟಾರ್ ಜೂನಿಯರ್ ಎನ್‌ಟಿಆರ್ ಇತ್ತೀಚೆಗೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾಣಿಸಿಕೊಂಡರು. ಅಲ್ಲು ಅರ್ಜುನ್ ಅವರ ಮುಂಬರುವ ಈ ಬಹುನಿರೀಕ್ಷಿತ ಚಿತ್ರ 'ಪುಷ್ಪ 2'ರ ಸೆಟ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿರುವುದು ಕಂಡು ಬಂದಿದೆ. ಪುಷ್ಪಾ ಸೆಟ್‌ನಿಂದ ಆರ್‌ಆರ್‌ಆರ್ ತಾರೆಯ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಜೂನಿಯರ್ ಎನ್‌ಟಿಆರ್ ಸೆಟ್‌ಗೆ ಏಕೆ ಭೇಟಿ ನೀಡಿದ್ದರು ಎಂಬುದು ಸ್ಪಷ್ಟವಾಗಿಲ್ಲ. 'ಪುಷ್ಪ: ದಿ ರೂಲ್​​'ನಲ್ಲಿ ನಟಿಸಲಿದ್ದಾರೋ ಅಥವಾ ಗೆಳೆಯ ಅಲ್ಲು ಅರ್ಜುನ್​ ಅವರನ್ನು ಭೇಟಿ ಆಗಲು ಭೇಟಿ ಕೊಟ್ಟಿದ್ದಾರೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಸುಕುಮಾರ್ ನಿರ್ದೇಶನದ ಪುಷ್ಪ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್ ಟ್ರಕ್ ಡ್ರೈವರ್ ಪಾತ್ರ ನಿರ್ವಹಿಸಿದ್ದಾರೆ. ಅವರು ಕೆಂಪು ಚಂದನವನ್ನು ಕಳ್ಳಸಾಗಣೆ ಮಾಡುವ ಪಾತ್ರ ನಿಭಾಯಿಸಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 'ಪುಷ್ಪ 2' ಕಥೆ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಸುತ್ತ ಸುತ್ತುತ್ತದೆ.

ಇದನ್ನೂ ಓದಿ: ಯಶ್​ ಸಿನಿಮಾ ಮಾಹಿತಿ ಕೊಡುವಂತೆ ರಾಧಿಕಾ ಪಂಡಿತ್​ರಲ್ಲಿ ಪಟ್ಟು ಹಿಡಿದ ಫ್ಯಾನ್ಸ್​​

ಈ ಹಿಂದೆಯೇ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಚಿತ್ರದ ಎರಡನೇ ಭಾಗವನ್ನು ಪುಷ್ಪ 2: ದಿ ರೂಲ್ ಎಂದು ಘೋಷಿಸಲಾಯಿತು. ಚಿತ್ರದ ಶೂಟಿಂಗ್​ ಅನ್ನು 2022ರ ಆಗಸ್ಟ್​ನಲ್ಲಿ ಹೈದರಾಬಾದ್‌ನಲ್ಲಿ ಪೂಜಾ ಸಮಾರಂಭದೊಂದಿಗೆ ಪ್ರಾರಂಭಿಸಲಾಯಿತು. ಮೊದಲ ಭಾಗದ ಬಿಡುಗಡೆಗೂ ಮುನ್ನ 'ಪುಷ್ಪ 2'ರ ಕೆಲವು ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಅದಾಗ್ಯೂ, ಸುಕುಮಾರ್ ಅವರು ಕಥೆಯನ್ನು ಬದಲಾಯಿಸಿದರು ಮತ್ತು ಇಡೀ ಚಿತ್ರದ ಶೂಟಿಂಗ್​​​ ಹೊಸದಾಗಿಯೇ ಆಗಲಿದೆ ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: ತಪ್ಪೇ ಮಾಡದೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಭಾರತದ ನಟಿ: ದೋಷಮುಕ್ತರಾಗಿ ದುಬೈ ಜೈಲಿನಿಂದ ಬಿಡುಗಡೆ

ಇನ್ನೂ ಜೂನಿಯರ್ ಎನ್​ಟಿಆರ್ ಪ್ರಸ್ತುತ ತಮ್ಮ ಮುಂದಿನ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್ ಅವರ ಚೊಚ್ಚಲ ತೆಲುಗು ಚಿತ್ರವಿದು. ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗಲಿದೆ. ಇನ್ನೂ ವಾರ್ 2ನಲ್ಲಿ ನಟ ಹೃತಿಕ್ ರೋಷನ್ ಜೊತೆ ಕೂಡ ಜೂ. ಎನ್​ಟಿಅರ್​ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದ ಮೂಲಕ ಜೂನಿಯರ್ ಎನ್‌ಟಿಆರ್ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇದೆಲ್ಲದರ ನಡುವೆ 'ಪುಷ್ಪ 2' ಸೆಟ್​ನಲ್ಲಿ ಜೂ. ಎನ್​​ಟಿಆರ್ ಕಾಣಿಸಿಕೊಂಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.