ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅವರು ಸೂಪರ್ ಹಿಟ್ ಸಿನಿಮಾ 'ವಾರ್' ಸೀಕ್ವೆಲ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಹ್ಯಾಂಡ್ಸಮ್ ಸ್ಟಾರ್ ಹೃತಿಕ್ ರೋಷನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈ ವಿಚಾರವನ್ನು ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಖಚಿತಪಡಿಸಿದ್ದಾರೆ.
ದೇಶಾದ್ಯಂತ ಆರ್ಆರ್ಆರ್ ತಾರೆಯ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳಲ್ಲಿ ಈ ಕ್ರೇಜಿ ಕಾಂಬೋ ಬಗ್ಗೆ ಭಾರೀ ಕುತೂಹಲ ಮೂಡಿದೆ. 'ವಾರ್ 2' ನಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರ ಹೇಗಿರಲಿದೆ? ಎಂಬ ಬಗ್ಗೆ ಅಭಿಮಾನಿಗಳು ಊಹಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ನ ಆದಿತ್ಯ ಚೋಪ್ರಾ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರಿಂದ ನಟಿಸಲು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂಬ ವರದಿಗಳಿವೆ.
ಆದ್ರೀಗ ಜೂ. ಎನ್‌ಟಿಆರ್ ಸಿನಿಮಾ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. 'ವಾರ್ 2'ಕ್ಕೂ ಮುನ್ನ ಜೂ. ಎನ್‌ಟಿಆರ್ ಮತ್ತೊಂದು ಚಿತ್ರದ ಮೂಲಕ ಬಾಲಿವುಡ್‌ಗೆ ಮೊದಲ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳೂ ಕೂಡ ಕೇಳಿಬರುತ್ತಿವೆ. ಆದಿತ್ಯ ಚೋಪ್ರಾ ನಿರ್ಮಿಸುತ್ತಿರುವ ಸಲ್ಮಾನ್ ಖಾನ್ ಅವರ 'ಟೈಗರ್ 3'ನಲ್ಲಿ ಆರ್ಆರ್ಆರ್ ಸ್ಟಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಸಿನಿಮಾದ ಜೂ. ಎನ್‌ಟಿಆರ್ ಪಾತ್ರವನ್ನು ಪರಿಚಯಿಸಿದ ನಂತರ ವಾರ್ 2 ಮುಂದುವರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಆ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಬಾಲಿವುಡ್ ಸಿನಿಮಾ ಮೂಲಕವೂ ಇವರಿಗೆ ದೊಡ್ಡ ಯಶಸ್ಸು ಸಿಗಲಿದೆ ಎನ್ನುತ್ತಾರೆ ಅಭಿಮಾನಿಗಳು.
ಜೂ. ಎನ್‌ಟಿಆರ್ ದಕ್ಷಿಣದ ಜೊತೆಗೆ ಉತ್ತರದಲ್ಲೂ ಫುಲ್ ಕ್ರೇಜ್ ಹೊಂದಿರುವ ಕಾರಣ ಆದಿತ್ಯ ಚೋಪ್ರಾ 'ಟೈಗರ್ 3' ಸಿನಿಮಾದಲ್ಲಿ ಅವರನ್ನು ಪರಿಚಯಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಇದು ಸಾಧ್ಯವಾದರೆ, ಟೈಗರ್ 3 ಸಿನಿಮಾ ಸೌತ್ನಲ್ಲಿಯೂ ಒಳ್ಳೆ ಬ್ಯುಸಿನೆಸ್ ಮಾಡಲಿದೆ ಎಂಬ ವಿಶ್ವಾಸ ಇದೆ. ವಾರ್ 2 ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ.
ಇದನ್ನೂ ಓದಿ: ಶ್ರೇಯಸ್ ಮಂಜು ಅಭಿನಯದ 'ವಿಷ್ಣು ಪ್ರಿಯ' ಸಿನಿಮಾ ಟೀಸರ್ ಬಿಡುಗಡೆ
ಈ ಚಿತ್ರಕ್ಕೂ ಮುನ್ನ ಕೊರಟಾಲ ನಿರ್ದೇಶನದ 'ಎನ್‌ಟಿಆರ್ 30' ಸಿನಿಮಾ ಪೂರ್ಣಗೊಳಿಸಲಿದ್ದಾರೆ. ಇದೊಂದು ಸಖತ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಲಿದೆ. ಆರ್ಆರ್ರ್ ನಂತಹ ನಂತಹ ದೊಡ್ಡ ಹಿಟ್ ಸಿನಿಮಾ ನಂತರ ಜೂ. ಎನ್‌ಟಿಆರ್ ನಟಿಸುತ್ತಿರುವ ಚಿತ್ರವಿದು. ಹೀಗಾಗಿ ಅಭಿಮಾನಿಗಳ ಕುತೂಹಲ ಬೆಟ್ಟದಷ್ಟಿದೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕ ನಟಿ. ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದೆ.
ಇದನ್ನೂ ಓದಿ: SCAM 1770 ಪೋಸ್ಟರ್ ರಿಲೀಸ್: ನೀವು ನೋಡಲೇಬೇಕಾದ ಸಿನಿಮಾ ಎಂದ ನಿರ್ದೇಶಕ
ಆರ್ಆರ್ಆರ್ ಚಿತ್ರದ ಸೂಪರ್ ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಆಸ್ಕರ್ 2023 ಬಳಿಕ ಜೂನಿಯರ್ ಎನ್ಟಿಅರ್, ರಾಮ್ಚರಣ್, ನಿರ್ದೇಶಕ ರಾಜಮೌಳಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಹಿನ್ನೆಲೆ ಇವರ ಮುಂದಿನ ಚಿತ್ರಗಳ ಮೇಲೆ ಕುತೂಹಲ ಹೆಚ್ಚಾಗಿದೆ.