ETV Bharat / entertainment

ನನ್ನ ಜೀವನದ ಅತ್ಯುತ್ತಮ ಕ್ಷಣ.. ಆಸ್ಕರ್​ ಬಗ್ಗೆ ಜೂ. ಎನ್​ಟಿಆರ್​ ಹರ್ಷ - ನಾಟು ನಾಟು ಹಾಡು ಆಸ್ಕರ್​

ಆಸ್ಕರ್​ 2023 ಸಮಾರಂಭದ ಬಳಿಕ ನಟ ಜೂ. ಎನ್​ಟಿಆರ್ ಹೈದರಾಬಾದ್​ಗೆ ವಾಪಸಾಗಿದ್ದು, ಪ್ರಶಸ್ತಿ ಪಡೆದಿದ್ದು 'ನನ್ನ ಜೀವನದ ಅತ್ಯುತ್ತಮ ಕ್ಷಣ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Jr NTR reacts on Oscar
ಆಸ್ಕರ್​ ಬಗ್ಗೆ ಜೂ ಎನ್​ಟಿಆರ್​ ಹರ್ಷ
author img

By

Published : Mar 15, 2023, 12:35 PM IST

Updated : Mar 15, 2023, 12:50 PM IST

ಆಸ್ಕರ್​ ಬಗ್ಗೆ ಜೂ ಎನ್​ಟಿಆರ್​ ಮಾತನಾಡಿರುವುದು..

ದೇಶದಲ್ಲೀಗ ಆಸ್ಕರ್​​ ಗೌರವದ ಸಂಭ್ರಮ ನೆಲೆಸಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದ್ದು, ಚಿತ್ರತಂಡ ದೇಶಕ್ಕೆ ವಾಪಸಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರ್‌ಆರ್‌ಆರ್‌ ಸಲುವಾಗಿ 95ನೇ ಆಸ್ಕರ್‌ನ ರೆಡ್ ಕಾರ್ಪೆಟ್ ಮೇಲೆ ಜೂನಿಯರ್ ಎನ್‌ಟಿಆರ್ ಹೆಜ್ಜೆ ಹಾಕಿದ್ದು, ಸಮಾರಂಭದ ಬಳಿಕ ಮಂಗಳವಾರ ತಡರಾತ್ರಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಅದ್ಧೂರಿ ಸ್ವಾಗತ ಕೋರಿದರು.

ನನ್ನ ಜೀವನದ ಅತ್ಯುತ್ತಮ ಕ್ಷಣ: ಮಾಧ್ಯಮಗಳೊಂದಿಗೆ ಮಾತನಾಡಿದ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ನನ್ನ ಜೀವನದ "ಅತ್ಯುತ್ತಮ ಕ್ಷಣ" ಎಂದು ಹರ್ಷ ವ್ಯಕ್ತಪಡಿಸಿದರು. ಸಿನಿ ಪ್ರೇಕ್ಷಕರು, ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರೀತಿ ಇಲ್ಲದಿದ್ದರೆ ಈ ಗೆಲುವು ಸಾಧ್ಯವಿರಲಿಲ್ಲ. ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ವೀಕ್ಷಿಸಿದ್ದು ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ. ನನಗೆ ಆರ್​ಆರ್​ಆರ್​ ಬಗ್ಗೆ ಬಹಳ ಹೆಮ್ಮೆ ಇದೆ. ನಮ್ಮ ಚಿತ್ರದ ಮೇಲೆ ಪ್ರೀತಿಯನ್ನು ಧಾರೆಯೆರೆದ ಪ್ರತಿಯೊಬ್ಬ ಭಾರತೀಯನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಪ್ರೇಕ್ಷಕರಿಂದ ಪಡೆದ ಪ್ರೀತಿಯಿಂದಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದೇವೆ. ಅಲ್ಲದೇ ಜಾಗತಿಕವಾಗಿ, ಹಾಗೆಯೇ ಚಿತ್ರರಂಗದಿಂದಲೂ ಸಾಕಷ್ಟು ಪ್ರೀತಿ, ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.

ನಟ ಜೂನಿಯರ್​ ಎನ್​ಟಿಆರ್​ ಅವರೊಂದಿಗೆ ಇದ್ದ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಮಾತನಾಡಿ, ಇದು ಅತ್ಯುತ್ತಮ ಭಾವನೆ ಮತ್ತು ಇದೊಂದು ದೊಡ್ಡ ಪ್ರಯಾಣ ಎಂದು ಹೇಳಿದರು. ಆಸ್ಕರ್ ಬಳಿಕ ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಅವರು ನನ್ನನ್ನು ತಬ್ಬಿಕೊಂಡಾಗ ಬಹಳ ಖುಷಿ ಆಯಿತು. ನಾನು ಬಹಳ ಆಶೀರ್ವದಿಸಲ್ಪಟ್ಟಿದ್ದೇನೆ ಎಂದು ನಾಟು ನಾಟು ಡ್ಯಾನ್ಸ್ ಮಾಸ್ಟರ್ ತಮ್ಮ ಸಂತಸ ಹಂಚಿಕೊಂಡರು.

'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು 'ದಿ ಎಲಿಫೆಂಟ್ ವಿಸ್ಪರರ್ಸ್' 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ' ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಗೆಲುವುಗಳು ವಿಶ್ವ ಶ್ರೇಷ್ಠ ಪ್ರಶಸ್ತಿಗಳ ವಿಚಾರದಲ್ಲಿ ಭಾರತದ ನೀರಸ ಪ್ರದರ್ಶನದ ಅಂತ್ಯವೆಂದೇ ಹೇಳಬಹುದು. ಭಾರತೀಯ ಚಿತ್ರೋದ್ಯಮ ವಿಶೇಷವಾಗಿ ದಕ್ಷಿಣ ಮನೋರಂಜನಾ ಕ್ಷೇತ್ರ ಈ ಮೂದಲಿಗಿಂತಲೂ ಅತಿ ಹೆಚ್ಚು ಉತ್ಸಾಹದಲ್ಲಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ''ನಾವು ಗೆದ್ದೆವು'' - ಭಾರತದ ಆಸ್ಕರ್​ ಸಾಧನೆಯನ್ನು ಕೊಂಡಾಡಿದ ನಟ ಅಮಿತಾಭ್​ ಬಚ್ಚನ್

'ನಾಟು ನಾಟು' ಆಸ್ಕರ್‌ನಲ್ಲಿ 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ನಾಮನಿರ್ದೇಶನಗೊಂಡ ಮೊದಲ ತೆಲುಗು ಹಾಡು. ಈ ಯಶಸ್ಸಿನ ಅಲೆಯಲ್ಲಿ ಭಾರತ, ವಿಶೇಷವಾಗಿ ಟಾಲಿವುಡ್​ ಚಿತ್ರರಂಗವಿದೆ. ಅತಿ ದೊಡ್ಡ ಸಮಾರಂಭದಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ, ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಪ್ರಮುಖ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಸೇರಿದಂತೆ ಹಲವರು ಸಹ ಉಪಸ್ಥಿತರಿದ್ದರು.

ಇದನ್ನೂ ಓದಿ: 'ಭಾರತ ಅಂದ್ರೆ ಕೇವಲ ಹಿಂದಿ, ಬಾಲಿವುಡ್ ಮಾತ್ರವಲ್ಲ': ಆಸ್ಕರ್‌ ಸಾಧನೆ ಮೆಚ್ಚಿ ನಟಿ ರಮ್ಯಾ ಟ್ವೀಟ್‌

Last Updated : Mar 15, 2023, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.