ETV Bharat / entertainment

ಪ್ರಶಾಂತ್​ ನೀಲ್, ಜೂ. ಎನ್‌ಟಿಆರ್ ಕಾಂಬಿನೇಶನ್​ನ ಸಿನಿಮಾಗೆ ಮುಹೂರ್ತ ನಿಗದಿ - ನೀಲ್ ಎನ್‌ಟಿಆರ್

ಜೂ. ಎನ್‌ಟಿಆರ್ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಶನ್​ನಲ್ಲಿ ಸಿನಿಮಾ ಮೂಡಿ ಬರಲಿದೆ. 2024ರ ಏಪ್ರಿಲ್​ನಲ್ಲಿ ಸಿನಿಮಾ ಸೆಟ್ಟೇರಲಿದೆ.

Jr NTR movie with Prashant Neel
ಪ್ರಶಾಂತ್​ ನೀಲ್, ಜೂ. ಎನ್‌ಟಿಆರ್ ಸಿನಿಮಾ
author img

By ETV Bharat Karnataka Team

Published : Oct 5, 2023, 4:33 PM IST

Updated : Oct 5, 2023, 5:01 PM IST

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಆರ್‌ಆರ್‌ಆರ್'ನ ನಾಯಕ ನಟ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಜೂನಿಯರ್ ಎನ್​​​ಟಿಆರ್ ತಮ್ಮ 31ನೇ ತೆಲುಗು ಚಿತ್ರವನ್ನು ಘೋಷಿಸಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕನ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ.

ಹೌದು, ಈ ಮೊದಲೇ ವರದಿ ಮಾಡಿದಂತೆ ಜೂನಿಯರ್ ಎನ್​​ಟಿಆರ್​ ಅವರ 31ನೇ ಸಿನಿಮಾವನ್ನು ಮೆಗಾ ಬ್ಲಾಕ್‌ ಬಸ್ಟರ್ ಚಿತ್ರಗಳಾದ 'ಕೆಜಿಎಫ್', 'ಕೆಜಿಎಫ್​ 2' ಮತ್ತು ಬಿಡುಗಡೆಗೆ ಸಜ್ಜಾಗಿರುವ 'ಸಲಾರ್' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಸ್ಯಾಂಡಲ್​​ವುಡ್​ ಸ್ಟಾರ್ ಡೈರೆಕ್ಟರ್ ಜೊತೆ ಟಾಲಿವುಡ್​ ಸೂಪರ್​ ಸ್ಟಾರ್​ ಕೈ ಜೋಡಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಆಗಲಿದ್ದು, ಇಂದು ಸಿನಿಮಾ ಆರಂಭದ ಕುರಿತು ಘೋಷಣೆ ಆಗಿದೆ. 2024ರ ಏಪ್ರಿಲ್​ನಲ್ಲಿ ಸಿನಿಮಾ ಸೆಟ್ಟೇರಲಿದೆ. ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್ ಸದ್ಯ ಸಲಾರ್​ ಸಲುವಾಗಿ ಸುದ್ದಿಯಲ್ಲಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​​ ಮುಖ್ಯಭೂಮಿಕೆಯ 'ಸಲಾರ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಚಿತ್ರ ಡಿಸೆಂಬರ್ 22ರಂದು ವಿಶ್ವಾದ್ಯಂತ ಥಿಯೇಟರ್​​ಗಳಲ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್ ಕಿಂಗ್ ಖಾನ್​ ಶಾರುಖ್ ಅಭಿನಯದ ಡಂಕಿ ಚಿತ್ರಕ್ಕೆ ಪೈಪೋಟಿ ನೀಡಲಿದ್ದಾರೆ. ಹೌದು, ಡಂಕಿ ಕೂಡ ಡಿಸೆಂಬರ್ 22 ರಂದು ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ.

2014ರಲ್ಲಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಪ್ರಶಾಂತ್​​ ನೀಲ್, 2018ರಲ್ಲಿ ಬಿಡುಗಡೆಯಾದ 'ಕೆಜಿಎಫ್ ಚಾಪ್ಟರ್ 1' ಮೂಲಕ ಹೆಚ್ಚು ಜನಪ್ರಿಯರಾದರು. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 1' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಐದು ವರ್ಷಗಳ ನಂತರ, 2022ರಲ್ಲಿ ಬಂದ ಕೆಜಿಎಫ್ 2 ಚಿತ್ರ ವಿಶ್ವಾದ್ಯಂತ 1,200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಚಿತ್ರಗಳ ಮೂಲಕ ಪ್ರಶಾಂತ್​ ನೀಲ್, ರಾಕಿಂಗ್​ ಸ್ಟಾರ್ ಯಶ್​ ಜನಪ್ರಿಯತೆ ನೂರು ಪಟ್ಟು ಹೆಚ್ಚಾಯಿತು. ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಸಿನಿಮಾಗಳಿವು. ನೀಲ್ ಅವರ ಅದ್ಭುತ ಕೆಲಸ ನೋಡಿ ಜೂನಿಯರ್ ಎನ್​​ಟಿಆರ್ ಕೈ ಜೋಡಿಸಿದ್ದಾರೆ. ಎನ್​ಟಿಆರ್​ 31 ಸಿನಿಮಾ ಹೈ ಆ್ಯಕ್ಟೇನ್​​ ಚಿತ್ರವಾಗಲಿದೆ ಎಂಬುದು ಚಿತ್ರತಂಡ ಮತ್ತು ಅಭಿಮಾನಿಗಳ ವಿಶ್ವಾಸ.

ಇದನ್ನೂ ಓದಿ: ಧೋನಿಯನ್ನು ಬಿಗಿದಪ್ಪಿ ಮುತ್ತಿಕ್ಕಿದ ರಣ್​ವೀರ್​​; ಕ್ಯಾಪ್ಟನ್‌ ಕೂಲ್‌ ಜೊತೆ ರಾಮ್ ​​ಚರಣ್

ನಿನ್ನೆಯಷ್ಟೇ ಜೂನಿಯರ್ ಎನ್‌ಟಿಆರ್ ಅವರ ಮುಂಬರುವ ಚಿತ್ರ 'ದೇವರ' ಕುರಿತು ಅಪ್​ಡೇಟ್ಸ್ ಹೊರಬಿದ್ದಿದೆ. ನಿರ್ದೇಶಕ ಕೊರಟಾಲ ಶಿವ ಮಾತನಾಡಿ, ದೇವರ ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗವು 2024ರ ಏಪ್ರಿಲ್​ 5ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ವಿಡಿಯೋ: ಸಲ್ಮಾನ್ ಖಾನ್ ​- ಅರಿಜಿತ್ ಸಿಂಗ್ ಮನಸ್ತಾಪ ಅಂತ್ಯ?; ನಟನ ಮನೆ ಬಳಿ ಕಾಣಿಸಿಕೊಂಡ ಗಾಯಕ!

ಇದಲ್ಲದೇ ಯಶ್ ರಾಜ್ ಫಿಲ್ಮ್ಸ್​​ ನಿರ್ಮಾಣದ 'ವಾರ್ 2' ಮೂಲಕ ಜೂನಿಯರ್ ಎನ್​ಟಿಆರ್ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ. ಹೃತಿಕ್ ರೋಷನ್ ಅಭಿನಯದ ವಾರ್ 2 ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಲ್ಮಾನ್ ಖಾನ್​​ ಅವರ ಟೈಗರ್ 3 ಚಿತ್ರದಲ್ಲಿ ಕೂಡ ಜೂನಿಯರ್ ಎನ್​​ಟಿಆರ್ ಕಾಣಿಸಿಕೊಳ್ಳಲಿದ್ದಾರೆ.

Last Updated : Oct 5, 2023, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.