ETV Bharat / entertainment

ಪ್ರಿ ಆಸ್ಕರ್​ ಸಮಾರಂಭ.. ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡ ಜೂ.​ ಎನ್​ಟಿಆರ್​​ - ಈಟಿವಿ ಭಾರತ ಕನ್ನಡ

ಸೌತ್​ ಏಷ್ಯನ್​ ಎಕ್ಸಲೆನ್ಸ್​ ಪ್ರಿ ಆಸ್ಕರ್​ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ನೀಲಿ ಸೂಟ್​ ಧರಿಸಿ ಡ್ಯಾಪರ್​ ಲುಕ್​ನಲ್ಲಿ ಕಾಣಿಸಿಕೊಂಡರು..

Jr NTR looks dappe
ಜೂ.​ ಎನ್​ಟಿಆರ್
author img

By

Published : Mar 11, 2023, 12:01 PM IST

ಪ್ರತಿಷ್ಠಿತ ಆಸ್ಕರ್​ 2023 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ತೆಲುಗು ಸೂಪರ್​ಸ್ಟಾರ್​ ಜೂನಿಯರ್​ ಎನ್​ಟಿಆರ್​ ಅವರು​ ಕ್ಯಾಲಿಫೋರ್ನಿಯಾದಲ್ಲಿ ನಿನ್ನೆ ರಾತ್ರಿ ನಡೆದ ಸೌತ್​ ಏಷ್ಯನ್​ ಎಕ್ಸಲೆನ್ಸ್​ ಪ್ರಿ ಆಸ್ಕರ್​ ಸಮಾರಂಭಕ್ಕಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ನಟ ನೀಲಿ ಸೂಟ್​ ಧರಿಸಿ ಡ್ಯಾಪರ್​ ಲುಕ್​ನಲ್ಲಿ ಕಾಣಿಸಿಕೊಂಡರು. ಜೊತೆಗೆ ಅವರು ಹಾಲಿವುಡ್​ ಮತ್ತು ಬಾಲಿವುಡ್​ ಸೆಲೆಬ್ರಿಟಿಗಳೊಂದಿಗೆ ಪೋಸ್​ ನೀಡಿರುವ ಹಲವಾರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿವೆ. ಅಲ್ಲದೇ ನಟ ಈವೆಂಟ್​ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೂಪರ್​ಸ್ಟಾರ್​ ತಮ್ಮ ಒಂದು ನೋಟವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆಗೆ "ಜಸ್ಟ್​..:)" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಜೂನಿಯರ್​ ಎನ್​ಟಿಆರ್​ ಸಖತ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಟ್ವಿಟರ್​ನಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಫ್ಯಾನ್ಸ್​ #NTRAtOscars ಎಂಬ ಹ್ಯಾಶ್​ಟ್ಯಾಗ್ ಬರೆಯುತ್ತಿದ್ದಾರೆ. ಇಡೀ ಭಾರತವೇ ನಟ ಆಸ್ಕರ್​​ನ ರೆಡ್​ ಕಾರ್ಪೆಟ್​ ಮೇಲೆ ನಡೆಯುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಜೂ. ಎನ್​ಟಿಆರ್​, ಅಮೆರಿಕದ ರೆಡ್​ ಕಾರ್ಪೆಟ್​ ಮೇಲೆ ಆರ್​ಆರ್​ಆರ್​ ತಂಡವು ರಾಷ್ಟ್ರವನ್ನು ಹೃದಯಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಲಿದ್ದಾರಾ ರಾಮ್​​ಚರಣ್​, ಜೂ.ಎನ್​ಟಿಆರ್​?!

ಜೂನಿಯರ್ ಎನ್‌ಟಿಆರ್ ಕೂಡ ಇತ್ತೀಚೆಗೆ ಲಾಸ್​​ ಏಂಜಲೀಸ್​ನ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಈ ಬಗ್ಗೆ ಬಹಳ ರೋಮಾಂಚನಗೊಂಡಿದ್ದೇನೆ. ಇಡೀ ರಾಷ್ಟ್ರವನ್ನು ತನ್ನ ಹೃದಯದಲ್ಲಿಟ್ಟುಕೊಂಡು ಮುನ್ನಡೆಯುತ್ತೇನೆ ಎಂದು ಹೇಳಿಕೊಂಡಿದ್ದರು. "ಜೂನಿಯರ್ ಎನ್​ಟಿಆರ್​ ಅಥವಾ ಕೋಮರಂ ಭೀಮ್ ಆಸ್ಕರ್​ 2023 ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ರೆಡ್ ಕಾರ್ಪೆಟ್​ ಮೇಲೆ ಭಾರತ ಹೆಜ್ಜೆ ಹಾಕಲಿದೆ. ನಾವು ಇಡೀ ರಾಷ್ಟ್ರವನ್ನು ನಮ್ಮ ಹೃದಯದಲ್ಲಿಡಿದು ಸಾಗಲಿದ್ದೇವೆ. ನಾನು ಆ ಕ್ಷಣ ನೋಡಲು ಎದುರು ನೋಡುತ್ತಿದ್ದೇನೆ'' ಎಂದು ಅಭಿಮಾನದಿಂದ ನುಡಿದಿದ್ದರು.

ಈ ಸಂಜೆ ಮಜವಾಗಿತ್ತು.. ಇನ್ನು, ಬಾಲಿವುಡ್​ ನಟಿ ಪ್ರೀತಿ ಜಿಂಟಾ ಕೂಡ ಪ್ರಿ ಆಸ್ಕರ್​ ಸಮಾರಂಭದಲ್ಲಿ ಕಾಣಿಸಿಕೊಂಡರು. ಜೂನಿಯರ್​ ಎನ್​ಟಿಆರ್​ ಜೊತೆ ಫೋಟೋಗೆ ಪೋಸ್​ ನೀಡಿದರು. ಇನ್​ಸ್ಟಾಗ್ರಾಮ್​ನಲ್ಲಿ ಟಾಲಿವುಡ್​ ನಟನ ಜೊತೆಗಿನ ಸೆಲ್ಫಿಯನ್ನು ಫೋಸ್ಟ್​ ಹಾಕಿಕೊಂಡಿರುವ ಪ್ರೀತಿ, "ನಿನ್ನೆ ರಾತ್ರಿ ನಾನು ಭೇಟಿಯಾದ ಎಲ್ಲಾ ಆಸ್ಕರ್​ ನಾಮನಿರ್ದೇಶಿತರಿಗೆ ಅಭಿನಂದನೆಗಳು. ದಕ್ಷಿಣ ಏಷ್ಯಾದ ಎಲ್ಲಾ ಕಲಾವಿದರನ್ನು ಒಗ್ಗೂಡಿಸಿದ್ದಕ್ಕಾಗಿ ಪ್ರಿಯಾಂಕಾ ಚೋಪ್ರಾ ಮತ್ತು ಅಂಜುಲಾ ಆಚಾರ್ಯ ಅವರಿಗೆ ಧನ್ಯವಾದಗಳು. ಈ ಸಂಜೆ ತುಂಬಾ ಮಜವಾಗಿತ್ತು" ಎಂದು ಕ್ಯಾಪ್ಶನ್​ ಹಾಕಿಕೊಂಡಿದ್ದಾರೆ.

ಆಸ್ಕರ್ ಪ್ರಶಸ್ತಿ 2023ಕ್ಕೆ ಆಯ್ಕೆಯಾಗಿರುವ ದಕ್ಷಿಣ ಏಷ್ಯಾದ ನಾಮನಿರ್ದೇಶಿತ ತಾರೆಯರಿಗಾಗಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್‌ನಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ವಿಶೇಷ ಪಾರ್ಟಿಯನ್ನು ಆಯೋಜಿಸಿದ್ದರು.

ಇದನ್ನೂ ಓದಿ: ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಕ್ಷಣಗಣನೆ: ಆಸ್ಕರ್​ ವೇದಿಕೆ ಏರಲಿದ್ದಾರೆ ಭಾರತೀಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.