ETV Bharat / entertainment

ಬೇಸಿಗೆ ರಜೆ ಕಳೆಯಲು ಕುಟುಂಬದೊಂದಿಗೆ ವಿದೇಶಕ್ಕೆ ಹಾರಿದ ಜ್ಯೂ ಎನ್​ಟಿಆರ್​​ - ಸದ್ದು ಮಾಡಿದ್ದ ನಟ ಜ್ಯೂನಿಯರ್​ ಎನ್​ಟಿಆರ್​

ಹೆಂಡತಿ ಲಕ್ಷ್ಮಿ ಪ್ರಣತಿ, ಇಬ್ಬರು ಮುದ್ದು ಮಕ್ಕಳಾದ ಅಭಯ್​ ಮತ್ತು ಭಾರ್ಗವ್​ ಅವರ ಜೊತೆಗೆ ಬೇಸಿಗೆ ಪ್ರವಾಸಕ್ಕಾಗಿ ಹಾರಿದ್ದಾರೆ.

jr  NTR flew abroad with his family to spend summer vacation

author img

By

Published : May 29, 2023, 4:48 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಆರ್​ಆರ್​ಆರ್'​ ಚಿತ್ರದ ಮೂಲಕ ಸದ್ದು ಮಾಡಿದ್ದ ನಟ ಜ್ಯೂನಿಯರ್​ ಎನ್​ಟಿಆರ್​ ಇದೀಗ ತಮ್ಮ ಬಿಡುವಿಲ್ಲದ ಶೂಟಿಂಗ್​ ನಡುವೆ ಕುಟುಂಬಕ್ಕೆ ಸಮಯ ನೀಡಲು ಮುಂದಾಗಿದ್ದಾರೆ. ರಜೆ ಮೋಜು ಸವಿಯಲು ಮುಂದಾಗಿರುವ ಅವರು, ತಮ್ಮ ಮುದ್ದು ಕುಟುಂಬದ ಜೊತೆಗೆ ವಿದೇಶಿ ಪ್ರವಾಸಕ್ಕೆ ಮುಂದಾಗಿದ್ದಾರೆ.

ಹೆಂಡತಿ ಲಕ್ಷ್ಮಿ ಪ್ರಣತಿ, ಇಬ್ಬರು ಮುದ್ದು ಮಕ್ಕಳಾದ ಅಭಯ್​ ಮತ್ತು ಭಾರ್ಗವ್​ ಅವರ ಜೊತೆಗೆ ಬೇಸಿಗೆ ಪ್ರವಾಸಕ್ಕಾಗಿ ಹಾರಿದ್ದಾರೆ. ಇದಕ್ಕೆ ಮುನ್ನ ಹೈದ್ರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಅವರು ತಮ್ಮ ಎರಡನೇ ಮಗ ಭಾರ್ಗವ್​​ ಕೈ ಹಿಡಿದು ಹೆಜ್ಜೆ ಆಗಿದ್ದು, ಪಕ್ಕದಲ್ಲಿ ಮೊದಲ ಮಗ ಅಭಯ್​ ನೀಲಿ ಬಣ್ಣದ ಟೀ ಶರ್ಟ್​ ಧರಿಸಿ ಕಾಣಿಸಿಕೊಂಡಿದ್ದಾರೆ. ಇನ್ನು ಜ್ಯೂ ಎನ್​ಟಿಆರ್​​ ಕಪ್ಪು ಬಣ್ಣದ ಶರ್ಟ್​, ಜಾಕೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರ ಹಿಂದೆ ಪ್ರಣಿತಾ ಅವರು ಸರಳವಾದ ಬಿಳಿ ಟಾಪ್​ ಮತ್ತು ನೀಲಿ ಜೀನ್ಸ್​ನಲ್ಲಿ ಕಾಣಿಸಿದ್ದಾರೆ. ಇಷ್ಟೇ ಅಲ್ಲದೆ, ಏರ್​ಪೋರ್ಟ್​ನಲ್ಲಿ ತಮ್ಮ ಫೋಟೋ ತೆಗೆಯಲು ಮುಂದಾದ ಪ್ಯಾಪಾರಾಜಿಗಳಿಗೆ ನಗು ಚೆಲ್ಲಿದ್ದಾರೆ ನಟ

ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ: ಸದ್ಯ ಜೂನಿಯರ್​ ಎನ್​ಟಿಆರ್​ 'ದೇವರಾ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಎನ್​ಟಿಆರ್​ಗೆ ಜಾಹ್ನವಿ ಕಪೂರ್​ ಜೊತೆಗೆಯಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟ ಸೈಫ್​ ಆಲಿ ಖಾನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪೋಸ್ಟರ್​ ಇತ್ತೀಚೆಗೆ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಟ ಜ್ಯೂ ಎನ್​ಟಿಆರ್​​, ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಇದೊಂದು ರಕ್ತ ಸಿಕ್ತ ಕಥೆಯ ಆಕ್ಷ್ಯನ್​ ಚಿತ್ರ ಎಂಬುದನ್ನು ಪೋಸ್ಟರ್​ ಹೇಳುತ್ತಿತ್ತು. ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದ ನಟ ಎನ್​ಟಿಆರ್​ ಸಿನಿಮಾಗೆ ಅನೇಕ ಮಂದಿ ಶುಭಾಶಯ ತಿಳಿಸಿದ್ದರು. ಇದು ಅವರ 30ನೇ ಚಿತ್ರವಾಗಿದೆ.

ಇನ್ನು ಇದರ ಜೊತೆಗೆ ಜ್ಯೂ ಎನ್​ಟಿಆರ್​ ಅವರು 'ಎನ್​ಟಿಆರ್​ ಅವರ 31'ನೇ ಚಿತ್ರಕ್ಕೆ ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. 'ಕೆಜಿಎಫ್​' ಹಿಟ್​ ಆದ ಬೆನ್ನಲ್ಲೇ ನಿರ್ದೇಶಕರಿಗೆ ಬೇಡಿಕೆ ಹೆಚ್ಚಿತು. ಅದಾಗಲೇ 'ಸಲಾರ್'​ ನಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕ ಪ್ರಶಾಂತ್​ ನೀಲ್​, ಇದಾದ ಬಳಿಕ ತಮ್ಮ ಮುಂದಿನ ಚಿತ್ರವನ್ನು ನಟ ಜ್ಯೂ ಎನ್​ಟಿಆರ್​ ಜೊತೆಗೆ ಮಾಡುವುದಾಗಿ ಘೋಷಿಸಿದ್ದರು. ಸದ್ಯ ಈ ಚಿತ್ರಕ್ಕೆ 'ಎನ್​ಟಿಆರ್​ 31' ಎಂದು ಹೆಸರಿಸಲಾಗಿದ್ದು, ಈ ಚಿತ್ರ ಈ ವರ್ಷಾಂತ್ಯ ಅಥವಾ ಮುಂದಿನ ವರ್ಷ ಸೆಟ್​ ಏರುವ ಸಾಧ್ಯತೆ ಇದೆ. ಇದರ ಜೊತೆಗೆ ವಾರ್​ 2 ಚಿತ್ರದಲ್ಲಿ ನಟ ಹೃತಿಕ್​ ರೋಷನ್​ ಜೊತೆ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನ ಹೊಗಳಿದ ಶಾರುಖ್, ಅಕ್ಷಯ್: ಪ್ರಧಾನಿ ಮೋದಿ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.