ETV Bharat / entertainment

ಆಸ್ಕರ್​​ ವೇದಿಕೆಯಲ್ಲಿ RRR​ ಭಾರತವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ: ಜೂ.ಎನ್​​ಟಿಆರ್​ - ramcharan

ಆಸ್ಕರ್ 2023 ಬಗ್ಗೆ ಉತ್ಸುಕರಾಗಿರುವ ಬಗ್ಗೆ ನಟ ಜೂ.ಎನ್​​ಟಿಆರ್ ಮಾತನಾಡಿದ್ದಾರೆ. ​

Jr NTR
ಜೂ ಎನ್​​ಟಿಆರ್​
author img

By

Published : Mar 10, 2023, 1:35 PM IST

ಪ್ರತಿಷ್ಟಿತ ಆಸ್ಕರ್​ ಸಮಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಆರ್‌ಆರ್‌ಆರ್ ಚಿತ್ರತಂಡ ಲಾಸ್ ಏಂಜಲೀಸ್​ಗೆ ತೆರಳಿದೆ. ಸದ್ಯ ಭಾರತ ಸೇರಿದಂತೆ ವಿಶ್ವ ಸಿನಿ ರಂಗದ ಕಣ್ಣು ಪ್ರತಿಷ್ಟಿತ​ ಪ್ರಶಸ್ತಿ ಮೇಲೆ ನೆಟ್ಟಿದೆ.

ಭಾರತದ ಖ್ಯಾತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆ್ಯಕ್ಷನ್​​ ಚಿತ್ರ 'ಆರ್‌ಆರ್‌ಆರ್‌'ನ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ನಟ ರಾಮ್​ಚರಣ್ ಮತ್ತು ನಿರ್ದೇಶಕ ರಾಜಮೌಳಿ ಮೊದಲು ಲಾಸ್​ ಏಂಜಲೀಸ್​ಗೆ ತೆರಳಿದರೆ, ನಟ ಜೂನಿಯರ್ ಎನ್​ಟಿಆರ್​ ನಂತರ ತಮ್ಮ ಚಿತ್ರತಂಡವನ್ನು ಸೇರಿಕೊಂಡಿದ್ದರು.

ರಾಷ್ಟ್ರವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ...: ಜೂನಿಯರ್ ಎನ್​ಟಿಆರ್​ ಸೇರಿದಂತೆ ಆರ್​ಆರ್​ಆರ್​ ತಂಡ 95ನೇ ಅಕಾಡೆಮಿ ಪ್ರಶಸ್ತಿ ಬಗ್ಗೆ ಬಹಳಾನೇ ಉತ್ಸುಕರಾಗಿದ್ದಾರೆ. ವಿಶೇಷ ದಿನದ ಕುರಿತು ಮಾತನಾಡಿದ ಜೂನಿಯರ್ ಎನ್‌ಟಿಆರ್, ಮಾರ್ಚ್ 13 (ಭಾರತದ ಕಾಲಮಾನ ಪ್ರಕಾರ) ರಂದು ಅಮರಿಕದ ರೆಡ್ ಕಾರ್ಪೆಟ್‌ ಮೇಲೆ ಆರ್‌ಆರ್‌ಆರ್ ತಂಡವು ರಾಷ್ಟ್ರವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ ಎಂದು ತಿಳಿಸಿದರು.

ಜೂನಿಯರ್ ಎನ್‌ಟಿಆರ್ ಬೆವರ್ಲಿ ಹಿಲ್ಸ್‌ನಿಂದ ತಮ್ಮ ಚಿತ್ರವನ್ನು ಹಂಚಿಕೊಂಡಾಗಿನಿಂದ, ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು #ManofthemassesJrNTR ಎಂದು ಟ್ರೆಂಡಿಂಗ್ ಮಾಡುತ್ತಿದ್ದು, ಆಸ್ಕರ್​ ಪ್ರಶಸ್ತಿ ಬಗ್ಗೆ ಬಹಳ ಉತ್ಸಾಹ ತೋರಿದ್ದಾರೆ. ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಆಸ್ಕರ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದನ್ನು ನೋಡಲು ಎದುರು ನೋಡುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಕೂಡ ಇತ್ತೀಚೆಗೆ ಲಾಸ್​​ ಏಂಜಲೀಸ್​ನ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಈ ಬಗ್ಗೆ ಬಹಳ ರೋಮಾಂಚನಗೊಂಡಿದ್ದೇನೆ, ಇಡೀ ರಾಷ್ಟ್ರವನ್ನು ತನ್ನ ಹೃದಯದಲ್ಲಿಟ್ಟುಕೊಂಡು ಮುನ್ನಡೆಯುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಜೂನಿಯರ್ ಎನ್​ಟಿಆರ್​ ಅಥವಾ ಕೋಮರಂ ಭೀಮ್ ಆಸ್ಕರ್​ 2023 ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ರೆಡ್ ಕಾರ್ಪೆಟ್​ ಮೇಲೆ ಭಾರತ ಹೆಜ್ಜೆ ಹಾಕಲಿದೆ. ನಾವು ಇಡೀ ರಾಷ್ಟ್ರವನ್ನು ನಮ್ಮ ಹೃದಯದಲ್ಲಿಡಿದು ಸಾಗಲಿದ್ದೇವೆ. ನಾನು ಆ ಕ್ಷಣ ನೋಡಲು ಎದುರು ನೋಡುತ್ತಿದ್ದೇನೆ'' ಎಂದು ಹೇಳಿದರು. ಸೂಪರ್​​ ಹಿಟ್ ನಾಟು ನಾಟು ಹಾಡಿನ ಸಂಗೀತ ಸಂಯೋಜಕ ಎಂಎಂ ಕೀರವಾಣಿ, ಗಾಯಕರಾದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಅವರನ್ನು ಸಹ ಆಸ್ಕರ್ ವೇದಿಕೆಯಲ್ಲಿ ವೀಕ್ಷಿಸಲು ಎದುರು ನೋಡುತ್ತಿರುವುದಾಗಿ ನಟ ತಿಳಿಸಿದರು.

ಇದನ್ನೂ ಓದಿ: RRR​ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರಾ ರಾಜಮೌಳಿ?

ಪ್ರಯಾಣ ಬೆಳೆಸಿದ ದೀಪಿಕಾ ಪಡುಕೋಣೆ: ಇತ್ತ ಆಸ್ಕರ್​ 2023 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾಗಲು ನಟಿ ದೀಪಿಕಾ ಪಡುಕೋಣೆ ಸಹ ಅಮೆರಿಕ್ಕೆ ತೆರಳಿದ್ದಾರೆ. ಇವರು ವೇದಿಕೆಯಲ್ಲಿ ವಿಜೇತರಿಗೆ ಪ್ರಶಸ್ತಿ ಹಸ್ತಾಂತರಿಸಲಿದ್ದಾರೆ. ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ಅವರನ್ನು ಬೀಳ್ಕೊಡಲು ಪತಿ, ನಟ ರಣ್​ವೀರ್​ ಸಿಂಗ್​ ಸಹ ಆಗಮಿಸಿದ್ದರು.

ಇದನ್ನೂ ಓದಿ: ಪ್ರತಿಷ್ಟಿತ ಆಸ್ಕರ್​ ಸಮಾರಂಭಕ್ಕೆ ಕ್ಷಣಗಣನೆ: ಅಮೆರಿಕಕ್ಕೆ ತೆರಳಿದ ದೀಪಿಕಾ ಪಡುಕೋಣೆ

ನಾಟು ನಾಟು ಲೈವ್​ ಶೋ: ಆಸ್ಕರ್​ ವೇದಿಕೆಯಲ್ಲಿ ಪ್ರಶಸ್ತಿಗೆ ನಾಮಿನೇಟ್​ ಅಗಿರುವ ನಾಟು ನಾಟು ಹಾಡಿನ ಪ್ರದರ್ಶನ ಕೂಡ ಇರಲಿದೆ. ಗಾಯಕರಾದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಈ ಹಾಡನ್ನು ಹಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.