ಫೇರ್‌ಫ್ಯಾಕ್ಸ್ (ವರ್ಜೀನಿಯಾ): ಮಾಜಿ ಪತ್ನಿ ಆಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆಯಲ್ಲಿ ಜಾನಿ ಡೆಪ್ ಪರವಾಗಿ ನ್ಯಾಯಾಧೀಶರು ಬುಧವಾರ ತೀರ್ಪು ನೀಡಿದ್ದಾರೆ. ಡೆಪ್ ಅವರಿಗೆ ನಷ್ಟ ಪರಿಹಾರವಾಗಿ 10.35 ಮಿಲಿಯನ್ ಯುಎಸ್ ಡಾಲರ್ ನೀಡಬೇಕು ಎಂದು ಹೇಳಿರುವ ಪೀಠ, ಹರ್ಡ್ ಪರವಾಗಿಯೂ ಮಾತನಾಡಿದೆ. ಹರ್ಡ್ ಅವರಿಗೆ ಪರಿಹಾರವಾಗಿ 2 ಮಿಲಿಯನ್ ಯುಎಸ್ ಡಾಲರ್ ನೀಡುವಂತೆ ಸೂಚಿಸಿದೆ.
ಆಂಬರ್ ಹರ್ಡ್ 2018ರಲ್ಲಿ 'ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯಲ್ಲಿ ಕೌಟುಂಬಿಕ ದೌರ್ಜನ್ಯದ ಕುರಿತು ಲೇಖನ ಬರೆದಿದ್ದರು. ತಾನು ಕೌಟುಂಬಿಕ ದೌರ್ಜನ್ಯಕ್ಕೊಳಗಾದವರನ್ನು ಪ್ರತಿನಿಧಿಸುವ ವ್ಯಕ್ತಿಯೆಂಬತೆ ಬಿಂಬಿಸಿಕೊಂಡಿದ್ದರೂ ಎಲ್ಲಿಯೂ ಜಾನಿ ಡೆಪ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಆದರೆ ಇದನ್ನು ಯಾರು ನೋಡಿದರೂ ಜಾನಿ ಡೆಪ್ ಅವರಿಗೆ ಹೇಳಿರುವಂತೆ ಭಾಸವಾಗುತ್ತಿತ್ತು. ಹಾಗಾಗಿ ಜಾನಿ ಡೆಪ್ ಅವರು ಮಾಜಿ ಪತ್ನಿ ವಿರುದ್ಧ 50 ಮಿಲಿಯನ್ ಯುಎಸ್ ಡಾಲರ್ ಮಾನನಷ್ಟ ಮೊಕದ್ದಮೆ ಹಾಕಿದ್ದರು.
ಡೆಪ್ ಅವರ ಪರ ವಕೀಲರು ಹರ್ಡ್ ಅವರು ಮಾಡಿರುವ ನಿಂದನೆ ಆರೋಪಗಳು ಸುಳ್ಳು ಎಂದು ಹೇಳಿರುವುದು ಹರ್ಡ್ ಅವರಿಗೆ ಮಾನಹಾನಿಯಾಗಿದೆ ಎಂದು ದೂರಿ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಇಬ್ಬರು ಪರಸ್ಪರ ಮಾನನಷ್ಟ ಮೊಕದ್ದಮೆ ಹೂಡಿದ್ದು, ಇಬ್ಬರ ಪರ ಕೋರ್ಟ್ ತೀರ್ಪು ನೀಡಿದೆ. ಆದರೆ ಜಾನಿ ಡೆಪ್ ಅವರಿಗೆ ಹೆಚ್ಚು ಹಾಗೂ ಆಂಬರ್ ಹರ್ಡ್ಗೆ ಕಡಿಮೆ ಪರಿಹಾರವನ್ನು ಸೂಚಿಸಿದೆ.
"ಪೈರೇಟ್ಸ್ ಆಫ್ ದಿ ಕೆರಿಬಿಯನ್" ಸರಣಿಯ ಚಿತ್ರದಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪ್ಯಾರೋ ಪಾತ್ರದಲ್ಲಿ ಜಾನಿ ಡೆಪ್ ಪ್ರಸಿದ್ಧಿ ಪಡೆದಿದ್ದರು. 2011ರಲ್ಲಿ ಜಾನಿ ಡೆಪ್ ಜೊತೆ 'ದಿ ರಮ್ ಡೈರಿ' ಸಿನಿಮಾದಲ್ಲಿ ಆಂಬರ್ ಹರ್ಡ್ ಅಭಿನಯಿಸಿದ್ದರು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಒಂದೇ ವರ್ಷದಲ್ಲಿ ಇವರಿಬ್ಬರ ಮಧ್ಯೆ ಕಲಹ ಏರ್ಪಟ್ಟು ಎರಡನೇ ವರ್ಷದಲ್ಲೇ ವಿಚ್ಛೇದನ ಪಡೆದಿದ್ದರು. ಇಬ್ಬರೂ ಬಾಲಿವುಡ್ನ ತಾರೆಗಳಾದ ಕಾರಣ ಈ ಕೌಟುಂಬಿಕ ಕಲಹದ ಪ್ರಕರಣದ ತೀರ್ಪು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು.
ನ್ಯಾಯಾಧೀಶರ ತಂಡ ನನಗೆ ಮರುಜನ್ಮ ನೀಡಿದೆ ಎಂದು ತೀರ್ಪನ್ನು ಬಣ್ಣಿಸಿರುವ ನಟ ಜಾನಿ ಡೆಪ್ ಬ್ರಿಟನ್ನಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ನೋಡಿದ್ದಾರೆ. ಈ ತೀರ್ಪಿನಿಂದ ಸಂತೋಷಗೊಂಡಿರುವ ಜಾನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಿಸಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನದತ್ತ ಬಹುಭಾಷಾ ತಾರೆ.. ಭಾವಿ ಪತಿಯನ್ನು ಪರಿಚಯಿಸಿದ ನಟಿ ಪೂರ್ಣಾ