ETV Bharat / entertainment

ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾದಲ್ಲಿ ಚಿನ್ನಾರಿಮುತ್ತ: ಜೋಗ್ 101 ಫಸ್ಟ್ ಲುಕ್ ರಿವೀಲ್​ - Vijay Raghavendra movies

Jog 101 First Look: ನಟ ವಿಜಯ ರಾಘವೇಂದ್ರ ನಟನೆಯ ಜೋಗ್ 101 ಫಸ್ಟ್ ಲುಕ್ ಅನಾವರಣಗೊಂಡಿದೆ.

Jog 101 First Look
ವಿಜಯ ರಾಘವೇಂದ್ರ ಜೋಗ್ 101 ಫಸ್ಟ್ ಲುಕ್ ರಿವೀಲ್
author img

By ETV Bharat Karnataka Team

Published : Aug 31, 2023, 5:05 PM IST

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಹಾಗೂ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅಭಿನಯಿಸಿ‌ ಕನ್ನಡಿಗರ ಮನಗೆದ್ದಿರುವ ನಟ ವಿಜಯ ರಾಘವೇಂದ್ರ. ರಾಘು ಚಿತ್ರದ ಬಳಿಕ ವಿಜಯ ರಾಘವೇಂದ್ರ ಅವರು ಜೋಗ್ 101 ಶೀರ್ಷಿಕೆಯುಳ್ಳ ಸಿನಿಮಾವನ್ನು ಮಾಡುತ್ತಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ. ಚಿತ್ರದ ಮೊದಲ ನೋಟ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾ ವೀಕ್ಷಿಸುವ ಕಾತರ ಹೆಚ್ಚಿಸಿದೆ.

ಜೋಗ್ 101 ಬಿಡುಗಡೆಗೆ ಸಿದ್ಧತೆ: ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ "ಜೋಗ್ 101" ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಸಿನಿಮಾ ಯಶಸ್ಸಿಗೆ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ಹೆಜ್ಜೆಯಾಗಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಸಹ ಬರಲಿದೆ.

Jog 101 First Look
ಜೋಗ್ 101 ಫಸ್ಟ್ ಲುಕ್ ರಿವೀಲ್

ನಟ ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ "ಜೋಗ್ 101" ಚಿತ್ರದ ತಾರಾಬಳಗದಲ್ಲಿದ್ದಾರೆ. ಅವಿನಾಶ್ ಆರ್ ಬಾಸೂತ್ಕರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಹಾಗೂ ಮನ್ವರ್ಷಿ ನವಲಗುಂದ ಬರೆದಿದ್ದಾರೆ. ರಘು ದೀಕ್ಷಿತ್ ಮತ್ತು ಸಂಚಿತ್ ಹೆಗ್ಡೆ ದನಿ ನೀಡಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಈ ಜೋಗ್ 101 ಚಿತ್ರಕ್ಕಿದೆ.

ಸೆವೆನ್ ಸ್ಟಾರ್ ಪಿಕ್ಚರ್ಸ್ ಲಾಂಛನದಲ್ಲಿ ರಘು (ರಾಘವೇಂದ್ರ ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕನ್ನಡಿಗ ಈ ಚಿತ್ರದ ನಿರ್ದೇಶಕರು. ಸದ್ಯ ಜೋಗ್ 101 ಫಸ್ಟ್ ಲುಕ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಶೀಘ್ರದಲ್ಲೇ ಈ‌ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​ ಹಾಕಿಕೊಂಡಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಮೈಸೂರು ಸ್ವಚ್ಛತಾ ರಾಯಭಾರಿಯಾಗಿ ನಟ ಮಂಡ್ಯ ರಮೇಶ್​ ಆಯ್ಕೆ

'ರಾಘು' ನಟ ವಿಜಯ ರಾಘವೇಂದ್ರ ಅವರ ಕೊನೆಯ ಚಿತ್ರ. ಯುವ ನಿರ್ದೇಶಕ ಎಂ. ಆನಂದ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ರಾಘು ಚಿತ್ರದ ಬಳಿಕ ಬರುತ್ತಿರುವ ವಿಜಯ ರಾಘವೇಂದ್ರ ಅವರ ಸಿನಿಮಾವಿದು. ಪತ್ನಿ ಅಗಲಿಕೆಯ ನೋವಲ್ಲಿರುವ ವಿಜಯ ರಾಘವೇಂದ್ರ ಇದೀಗ ತಮ್ಮ ಕೆಲಸದ ಕಡೆ ಗಮನ ಹರಿಸಿದ್ದಾರೆ. ಪರದೆ ಮೇಲೆ ಚಿನ್ನಾರಿಮುತ್ತನನ್ನು ಕಣ್ತುಂಬಿಕ್ಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: 'ಜವಾನ್'​ ಟ್ರೇಲರ್​ ರಿಲೀಸ್:​ ಮತ್ತೊಂದು ಹಿಟ್​ ಸಿನಿಮಾ ನಿರೀಕ್ಷೆಯಲ್ಲಿ ಶಾರುಖ್‌ ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.