ETV Bharat / entertainment

Netflix event: 'ಹಾರ್ಟ್ ಆಫ್ ಸ್ಟೋನ್' ಬಿಡುಗಡೆಗೆ ಸಜ್ಜು.. ಬ್ರೆಜಿಲ್​ನಲ್ಲಿ ಆಲಿಯಾ ಭಟ್ ಹವಾ!

author img

By

Published : Jun 17, 2023, 3:52 PM IST

ಸಾಹೊ ಪೌಲೊದಲ್ಲಿ ನಡೆಯುತ್ತಿರುವ ನೆಟ್​ಫ್ಲಿಕ್ಸ್​​ ಟುಡುಮ್​ 2023ರಲ್ಲಿ ಆಲಿಯಾ ಭಟ್​, ಗಾಲ್​ ಗಡೊಟ್​ ಮತ್ತು ಜಿಮಿ ಡೊರ್ನನ್ ಭಾಗವಹಿಸಿದ್ದಾರೆ.

Alia Bhatt
ಆಲಿಯಾ ಭಟ್​

ಬಾಲಿವುಡ್​ ನಟಿ ಆಲಿಯಾ ಭಟ್​ ಪ್ರಸ್ತುತ ತಮ್ಮ ಮುಂಬರುವ ಆ್ಯಕ್ಷನ್ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರಲ್ಲಿ ಗಾಲ್​ ಗಡೋಟ್​ ಮತ್ತು ಜಿಮಿ ಡೊರ್ನನ್ ಕೂಡ ನಟಿಸಿದ್ದಾರೆ. ಸಾವೊ ಪೌಲೊದಲ್ಲಿ ನಡೆಯುತ್ತಿರುವ ನೆಟ್​ಫ್ಲಿಕ್ಸ್​​ ಟುಡುಮ್​ 2023ರಲ್ಲಿ ಭಾಗವಹಿಸಲು ಈ ಮೂವರು ಇತ್ತೀಚೆಗೆ ಬ್ರೆಜಿಲ್‌ಗೆ ತೆರಳಿದ್ದಾರೆ. ಶನಿವಾರದಂದು ಗಾಲ್ ಗಡೋಟ್ ಈವೆಂಟ್‌ನ ಒಂದು ನೋಟವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿರುವ ನಟ, "ಸೆಟಪ್- ದಿ ಶಾಟ್. ವಾಹ್! ಒಬ್ರಿಗಾಡಾ, ಬ್ರೆಜಿಲ್!!" ಎಂದು ಕ್ಯಾಪ್ಶನ್​ ಬರೆದಿದ್ದಾರೆ. ದೃಶ್ಯದಲ್ಲಿ ಗಾಲ್ ಗಡೋಟ್, ಆಲಿಯಾ ಭಟ್​ ಮತ್ತು ಜಿಮಿ ಡೊರ್ನನ್ ಜೊತೆಯಾಗಿ ವೇದಿಕೆಯಲ್ಲಿರುವುದನ್ನು ಕಾಣಬಹುದು. ಈ ಸಮಾರಂಭದಲ್ಲಿ ಅಭಿಮಾನಿಗಳು ಮೂವರಿಗೆ ಜೈಕಾರ ಹಾಕುತ್ತಿರುವುದು ಕೇಳಿಬಂತು.

ಆಲಿಯಾ ಭಟ್​ ಬೂದು ಬಣ್ಣದ ಫಾರ್ಮಲ್​ ಡ್ರೆಸ್​ ಧರಿಸಿದ್ದರು. ಬಾಸ್​ ಲೇಡಿಯಂತೆ ಕಾಣಿಸುತ್ತಿದ್ದರು. ಕೂದಲನ್ನು ಫೋನಿಟೇಲ್​ ಹಾಕಿ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಮತ್ತೊಂದೆಡೆ, ಗಾಲ್ ಕಪ್ಪು ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಲೈಟ್​ ಮೇಕಪ್​ ಜೊತೆಗೆ ಕೂದಲನ್ನು ಫ್ರೀ ಬಿಟ್ಟಿದ್ದರು.

ಇದನ್ನೂ ಓದಿ: 140 ಕೋಟಿ ಬಾಚಿದ 'ಆದಿಪುರುಷ್​': ಮೊದಲ ದಿನವೇ 100 ಕೋಟಿ ಗಡಿ ದಾಟಿದ ಪ್ರಭಾಸ್​​ರ ಮೂರನೇ ಸಿನಿಮಾ

ಆಲಿಯಾ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಮರು ಹಂಚಿಕೊಂಡಿದ್ದಾರೆ. ಜೊತೆಗೆ "ಇದು ಮೊದಲ ದಿನ, ನಾಳೆ ಬ್ರೆಜಿಲ್​ ನೋಡೋಣ" ಎಂದು ಕ್ಯಾಪ್ಶನ್​ ಬರೆದಿದ್ದಾರೆ. ನಟಿ ಮತ್ತೊಂದು ಫೋಟೋವನ್ನು ಶೇರ್​ ಮಾಡಿದ್ದಾರೆ. ಗುಲಾಬಿ ಬಣ್ಣದ ಸ್ಟೈಲಿಶ್​ ಡ್ರೆಸ್​ನಲ್ಲಿ ಕ್ಯೂಟ್​ ಪೋಸ್​ ನೀಡಿದ್ದಾರೆ. ಈ ಫೋಟೋಗಳು ಇಂಟರ್ನ್​ನೆಟ್​ಗೆ ಕಿಚ್ಚು ಹಚ್ಚಿವೆ.

ಜೂನ್ 16 ರಿಂದ ಜೂನ್ 18 ರವರೆಗೆ ಸಾವೊ ಪಾಲೊದಲ್ಲಿ ನೆಟ್‌ಫ್ಲಿಕ್ಸ್ ಟುಡಮ್ 2023 ಕಾರ್ಯಕ್ರಮಕ್ಕೆ ಹಾಜರಾಗಲು ಆಲಿಯಾ ಬ್ರೆಜಿಲ್‌ನಲ್ಲಿದ್ದಾರೆ. ಅವರು ನೆಟ್‌ಫ್ಲಿಕ್ಸ್‌ನ ಸಾಹಸ ಚಿತ್ರ ಹಾರ್ಟ್ ಆಫ್ ಸ್ಟೋನ್‌ನ ಸದಸ್ಯರಲ್ಲಿ ಒಬ್ಬರಾಗಿ ಭಾಗವಹಿಸಿದ್ದಾರೆ. ಇದು ಅವರ ಹಾಲಿವುಡ್ ಚೊಚ್ಚಲ ಪ್ರವೇಶವಾಗಿದೆ. ಚಿತ್ರದಲ್ಲಿ ಆಲಿಯಾ ಭಟ್​, ಗಾಲ್ ಗಡೋಟ್, ಜಿಮಿ ಡೊರ್ನನ್ ಅಲ್ಲದೇ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ನಿರ್ಮಾಪಕ ಬೋನಿ ಕಪೂರ್ ಪುತ್ರಿ ಖುಷಿ ಕಪೂರ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ಇದ್ದಾರೆ. ಅವರು ಸಹ ಈ ಅದ್ಧೂರಿ ಸಮಾರಂಭದ ಭಾಗವಾಗಿದ್ದಾರೆ.

ಆಗಸ್ಟ್​ 11 ರಂದು ಬಿಡುಗಡೆ: ಚಿತ್ರವು ಆಗಸ್ಟ್ 11 ರಿಂದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ. ಇತ್ತೀಚೆಗೆ ಹಾರ್ಟ್ ಆಫ್ ಸ್ಟೋನ್ ತಯಾರಕರು ಅಧಿಕೃತ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಏತನ್ಮಧ್ಯೆ, ನಿರ್ದೇಶಕ ಕರಣ್ ಜೋಹರ್ ಅವರ ಮುಂದಿನ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್ ಜೊತೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್​ ಜುಲೈ 28ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'Adipurush' ಸಿನಿಮಾದ ಕೆಲ ದೃಶ್ಯ ಕತ್ತರಿಸುವಂತೆ ಕೋರಿ ಕೋರ್ಟ್​​ ಮೆಟ್ಟಿಲೇರಿದ ಹಿಂದೂ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.