ETV Bharat / entertainment

'ಜವಾನ್'​ ಜಬರ್ದಸ್ತ್​ ಕಲೆಕ್ಷನ್​.. 12ನೇ ದಿನ 500 ಕೋಟಿ ಗಡಿ ದಾಟಲಿದೆ ಶಾರುಖ್​ ಸಿನಿಮಾ

author img

By ETV Bharat Karnataka Team

Published : Sep 18, 2023, 6:49 PM IST

Jawan box office collection day 12: ಇಂದು 'ಜವಾನ್'​ ಸಿನಿಮಾ ಅತೀ ಹೆಚ್ಚು ಕಲೆಕ್ಷನ್​ನೊಂದಿಗೆ 500 ಕೋಟಿ ರೂಪಾಯಿ ಕ್ಲಬ್​ ಸೇರುವ ನಿರೀಕ್ಷೆಯಿದೆ.

Jawan box office collection day 12
'ಜವಾನ್'​ ಜಬರ್ದಸ್ತ್​ ಕಲೆಕ್ಷನ್​

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್ ಖಾನ್​​ ನಟನೆಯ ಬಹುನಿರೀಕ್ಷಿತ 'ಜವಾನ್​' ಸಿನಿಮಾ ಬಿಡುಗಡೆಯಾದ 10 ದಿನಗಳ ನಂತರವೂ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆ್ಯ ಕ್ಷನ್​ ಥ್ರಿಲ್ಲರ್​ ಚಿತ್ರವು ಭಾರತದ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿ ಗಡಿ ದಾಟುವ ಅಂಚಿನಲ್ಲಿದೆ. ಅದಾಗ್ಯೂ 12ನೇ ದಿನಕ್ಕೆ ಕಲೆಕ್ಷನ್​ನಲ್ಲಿ ಕೊಂಚ ಕುಸಿತ ಕಂಡರೂ ಸಹ 500 ಕೋಟಿ ಕ್ಲಬ್ ಸೇರುವುದು ಮಾತ್ರ ಪಕ್ಕಾ ಎನ್ನಲಾಗಿದೆ. ​

ಸಿನಿ ಉದ್ಯಮದ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಜವಾನ್​ ಸಿನಿಮಾ ಭಾರತದಲ್ಲಿ 11 ದಿನಗಳಲ್ಲಿ ಸುಮಾರು 477.3 ಕೋಟಿ ರೂಪಾಯಿ ಗಳಿಸಿದೆ. 12ನೇ ದಿನವಾದ ಇಂದು ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 14 ಕೋಟಿ ರೂಪಾ​ಯಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಆ ಪ್ರಕಾರವಾಗಿ ಚಿತ್ರದ ಪ್ರಸ್ತುತ ಒಟ್ಟು ಮೊತ್ತ 491.63 ಕೋಟಿ ರೂಪಾಯಿಯಾಗಿದೆ. ಒಟ್ಟಾರೆಯಾಗಿ ನೋಡುವುದಾದರೆ, ಚಿತ್ರವು ಇಂದು ಭಾರತದಲ್ಲಿ 500 ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ.

'ಜವಾನ್'​ ಸಿನಿಮಾವನ್ನು 300 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಿಸಲಾಗಿದೆ. ಚಿತ್ರವೂ ಎಲ್ಲರನ್ನೂ ಮೆಚ್ಚಿಸಿದೆ. ರಾಷ್ಟ್ರ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಶಾರುಖ್​ ಖಾನ್​ ಅವರಿಗೆ ಮಾತ್ರವಲ್ಲದೇ, ಜವಾನ್​ ಸಿನಿಮಾ ವಿಜಯ್​ ಸೇತುಪತಿ ಮತ್ತು ನಯನತಾರಾ ಅವರಿಗೂ ಒಂದೊಳ್ಳೆ ಹೆಸರನ್ನು ತಂದುಕೊಟ್ಟಿದೆ.

11ನೇ ದಿನದ ಕಲೆಕ್ಷನ್​: 'ಜವಾನ್​' ಸಿನಿಮಾದ ಕಲೆಕ್ಷನ್ ಸ್ವಲ್ಪವೂ ನಿಂತಿಲ್ಲ. ಭಾನುವಾರ (ಸೆಪ್ಟೆಂಬರ್​ 17) ವೀಕೆಂಡ್​ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರ ವೀಕ್ಷಿಸಿದ್ದಾರೆ. ದೇಶಾದ್ಯಂತ 36.52 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಮೂಲಕ ಚಿತ್ರವು ಒಟ್ಟು 477.28 ಕೋಟಿ ರೂಪಾಯಿ ಸಂಗ್ರಹಿಸಿದೆ. ವಿಶ್ವದಾದ್ಯಂತ ಒಟ್ಟು 840 ಕೋಟಿಗೂ ಹೆಚ್ಚು ಕಲೆಕ್ಷನ್​ ಆಗಿದೆ. 800 ಕೋಟಿ ರೂಪಾಯಿ ಗಳಿಸಿದ ಏಕೈಕ ಹಿಂದಿ ಚಿತ್ರ ಇದಾಗಿದೆ.

  • " class="align-text-top noRightClick twitterSection" data="">

ಸಿನಿ ವ್ಯವಹಾರ ವಿಶ್ಲೇಷಕ ರಮೇಶ್​ ಬಾಲಾ ಪ್ರಕಾರ, ಜವಾನ್​ ಸಾವಿರ ಕೋಟಿ ರೂ. ಕ್ಲಬ್​ ಸೇರಿದರೆ, ಹಿಂದಿ ಚಿತ್ರರಂಗಕ್ಕೆ ಇದೊಂದು ಅಪರೂಪದ ಘಟನೆ ಆಗಲಿದೆ. ಏಕೆಂದರೆ, ಶಾರುಖ್​ ಅವರ ಈ ಹಿಂದಿನ ಸಿನಿಮಾ ಪಠಾಣ್​ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,000 ಕೋಟಿ ರೂ. ವ್ಯವಹಾರ ನಡೆಸಿದೆ. ಜವಾನ್​ ಸಿನಿಮಾ ಕೂಡ ಸಾವಿರ ಕೋಟಿ ರೂ. ಸಂಪಾದನೆ ಮಾಡಿದ್ರೆ, ಒಂದೇ ವರ್ಷದಲ್ಲಿ ಓರ್ವ ನಟನ ಎರಡೂ ಸಿನಿಮಾಗಳು ಬ್ಲಾಕ್​ಬಸ್ಟರ್​ ಹಿಟ್​ ಆದಂತಾಗುತ್ತದೆ. ಶಾರುಖ್​ ನಟನೆಯ ಮತ್ತೊಂದು ಸಿನಿಮಾ 'ಡಂಕಿ' ಕೂಡ ಇದೇ ಸಾಲಿನ ಕ್ರಿಸ್​ಮಸ್​ ಸಂದರ್ಭ ತೆರೆಕಾಣಲಿದೆ.

ಶಾರುಖ್​ ಹಾಗೂ ಗೌರಿ ದಂಪತಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​​ ಜವಾನ್​ ಚಿತ್ರಕ್ಕೆ ಬಂಡವಾಳ ಹೂಡಿದೆ. ಸೆಪ್ಟೆಂಬರ್​ 7 ರಂದು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಯಿತು. ಕಿಂಗ್​ ಖಾನ್​ ಜೊತೆ ಸೌತ್​ ಲೇಡಿ ಸೂಪರ್​ಸ್ಟಾರ್ ನಯನತಾರಾ ಮತ್ತು ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್​ ನಟಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 400, ವಿಶ್ವದಲ್ಲಿ 700: ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡುತ್ತಾ 'ಜವಾನ್'​​?!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.