ಹೈದರಾಬಾದ್ : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾದ ದಿನದಿಂದ ಹೊಸ ಹೊಸ ದಾಖಲೆ ಬರೆಯುತ್ತಿದೆ. ಇದೀಗ 9 ನೇ ದಿನದ ಕಲೆಕ್ಷನ್ ವಿವರ ಹೊರಬಿದ್ದಿದ್ದು, ಜಾಗತಿಕವಾಗಿ 660 ಕೋಟಿ ರೂ. ಗಳಿಕೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲಿನತ್ತ ಹೆಜ್ಜೆ ಹಾಕುತ್ತಿದೆ.
- " class="align-text-top noRightClick twitterSection" data="">
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್‌ನ ವರದಿಯ ಪ್ರಕಾರ, " ಮೊದಲ ದಿನವೇ ಚಿತ್ರಮಂದಿರಗಳಲ್ಲಿ ತೆರೆಕಂಡ ಜವಾನ್ ಸಿನಿಮಾವು ದೇಶದ ಬಾಕ್ಸ್ ಆಫೀಸ್‌ನಲ್ಲಿ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಎರಡನೇ ದಿನದಲ್ಲಿ 53.23 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರು ಮತ್ತು ನಾಲ್ಕನೇ ದಿನದಲ್ಲಿ ಕ್ರಮವಾಗಿ 77.83 ಕೋಟಿ ರೂ. ಮತ್ತು 80 ಕೋಟಿ ರೂ. ಸಂಗ್ರಹಿಸಿದೆ. ಆದರೆ, ನಂತರದ ದಿನಗಳಲ್ಲಿ ಕೊಂಚ ಕುಸಿತ ಕಂಡಿದ್ದು, ಐದನೇ ದಿನದಂದು 28 ರಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ 9 ದಿನಗಳ ಒಟ್ಟು ಮೊತ್ತವು 408.27 ಕೋಟಿ ರೂಪಾಯಿ ಆಗಿದೆಯಂತೆ.
ಇದನ್ನೂ ಓದಿ : ಬಾಕ್ಸ್ ಆಫೀಸ್‌ನಲ್ಲಿ 8 ದಾಖಲೆ ಬರೆದ ಶಾರುಖ್ ಖಾನ್ರ ' ಜವಾನ್ ' ಸಿನಿಮಾ..
ಇನ್ನೊಂದೆಡೆ, ಮೊದಲ ದಿನದಿಂದಲೂ ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುವಲ್ಲಿ ಚಿತ್ರತಂಡವು ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ, ಕಲೆಕ್ಷನ್ ವಿಚಾರದಲ್ಲಿ ಸಹ ತನ್ನ ಓಟ ಮುಂದುವರೆಸಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.
ಇದನ್ನೂ ಓದಿ : ಭಾರತದಲ್ಲಿ ₹300 ಕೋಟಿ ಕ್ಲಬ್ ಸೇರಿದ 'ಜವಾನ್' ; ಐದನೇ ದಿನದ ಕಲೆಕ್ಷನ್ ಎಷ್ಟು?
ಅಟ್ಲಿ ನಿರ್ದೇಶನದ ಜವಾನ್ ಸಿನಿಮಾವು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಬಿಡುಗಡೆ ಅಗಿತ್ತು. ನಾಯಕ ಶಾರುಖ್ ಖಾನ್ ಜೊತೆಗೆ ನಟಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಸಂಜಯ್ ದತ್ ಅವರು ಅತಿಥಿ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಸಿನಿಮಾವನ್ನು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದೆ.
ಇದನ್ನೂ ಓದಿ : ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್ ಖಾನ್ : ನಿರ್ದೇಶಕ ಸಂಜಯ್ ಗುಪ್ತಾ !