ETV Bharat / entertainment

Jawan: ಎಸ್​ಆರ್​ಕೆ ನಟನೆಯ ಜವಾನ್​ ಕ್ರೇಜ್​ - 15 ನಿಮಿಷದೊಳಗೆ ಮೊದಲ ದಿನದ ಟಿಕೆಟ್​ ಸೇಲ್! - Jawan latest news

Jawan: ಜವಾನ್​ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ.

Jawan advance tickets
ಜವಾನ್ ಟಿಕೆಟ್
author img

By ETV Bharat Karnataka Team

Published : Aug 27, 2023, 8:12 PM IST

ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಜವಾನ್​​. ಆ್ಯಕ್ಷನ್​ ಪ್ಯಾಕ್ಡ್ ಜವಾನ್ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಮುಂಗಡ ಟಿಕೆಟ್​ ಬುಕಿಂಗ್​ ಪ್ರಕ್ರಿಯೆ ಆರಂಭಗೊಂಡಿದ್ದು, ಅಭಿಮಾನಿಗಳು ಸಿನಿಮಾ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಎಸ್​ಆರ್​ಕೆ ಮುಖ್ಯಭೂಮಿಕೆಯ ಸಿನಿಮಾ ಮುಂಗಡ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಇದು ನಟನ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಬಾಲಿವುಡ್‌ ಸೂಪರ್​ ಸ್ಟಾರ್ ಶಾರುಖ್ ಖಾನ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಸಂಭ್ರಮಾಚರಣೆಗೆ ಕಾರಣರಾಗಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಜವಾನ್ ಬಿಡುಗಡೆ ಹೊಸ್ತಿಲಲ್ಲಿದೆ. ಮುಂಗಡ ಟಿಕೆಟ್​ ಬುಕಿಂಗ್​ ಪ್ರಕ್ರಿಯೆ ಆರಂಭಗೊಂಡಿದೆ. ಸಿನಿಮಾ ತೆರೆಕಾಣುವ ಮೊದಲ ದಿನದ ಟಿಕೆಟ್‌ಗಳು (ಹಲವು ಚಿತ್ರಮಂದಿರಗಳ ಟಿಕೆಟ್​ಗಳು) ಕೇವಲ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಜವಾನ್​ ಮತ್ತು ಎಸ್​ಆರ್​ಕೆ ಕ್ರೇಜ್​ ಬಗ್ಗೆ ನಿಮಗೆ ವಿಶೇಷವಾಗಿ ಹೇಳಬೇಕಿಂದಿಲ್ಲ. ಆದ್ರೆ 15 ನಿಮಿಷಗಳಲ್ಲಿ ಟಿಕೆಟ್ಸ್ ಸೋಲ್ಡ್ ಔಟ್ ಆಗಿರೋದನ್ನು ನೋಡಿದ್ರೆ ಚಿತ್ರ ಸೂಪರ್​ ಹಿಟ್​ ಆಗಲಿದೆ ಎಂದು ಅಭಿಮಾನಿಗಳು ತಿಳಿಸುತ್ತಿದ್ದಾರೆ.

ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರವು ಸಾಗರೋತ್ತರ ಪ್ರದೇಶ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮುಂಗಡ ಟಿಕೆಟ್​ ಬುಕಿಂಗ್‌ನಲ್ಲಿ ಈಗಾಗಲೇ 1.2 ಕೋಟಿ ರೂ.ಗಳನ್ನು ಗಳಿಸಿದೆ. ಹೆಚ್ಚುವರಿಯಾಗಿ, ಯುಎಇ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್‌ ಪ್ರೊಸೆಸ್​ ಪ್ರಾರಂಭವಾಗಿದೆ. ಆದಾಗ್ಯೂ, ಭಾರತದಲ್ಲಿ ಕಡಿಮೆ ಸಂಖ್ಯೆಯ ಚಿತ್ರಮಂದಿರಗಳು ಮುಂಗಡ ಟಿಕೆಟ್​ ಖರೀದಿಸಲು ಅನುಮತಿಸಿವೆ.

ಜವಾನ್‌ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಎಸ್‌ಆರ್‌ಕೆ ಮುಖ್ಯಭೂಮಿಕೆಯ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನತಾರಾ, ಸಾನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಬ್ಲಾಕ್​ ಬಸ್ಟರ್ ಸಿನಿಮಾ ಪಠಾಣ್​ನಲ್ಲಿ ಎಸ್​ಆರ್​ಕೆ ಜೊತೆ ನಾಯಕ ನಟಿಯಾಗಿ ಸ್ಕ್ರೀನ್​ ಶೇರ್ ಮಾಡಿರುವ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ONAM 2023: ಅವಳಿ ಮುದ್ದು ಮಕ್ಕಳೊಂದಿಗೆ ವಿಘ್ನೇಶ್​ ಶಿವನ್​-ನಯನತಾರ ದಂಪತಿಯ ಓಣಂ ಸಂಭ್ರಮ!

ಇತ್ತೀಚಿನ ವರದಿಯೊಂದರ ಪ್ರಕಾರ, ಶಾರುಖ್​ ಖಾನ್ ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಾರುಖ್​​ ಅವರ ಕೊನೆಯ ಪಠಾಣ್​ ಸಿನಿಮಾ 1,000 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಇವರು 730 ಮಿಲಿಯನ್​ ಮೌಲ್ಯದ ಆಸ್ತಿ ಹೊಂದಿದ್ದಾರೆಂದು ವರದಿಯೊಂದು ತಿಳಿಸಿದೆ. ನಟನ ಮುಂದಿನ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ಸುಮಲತಾ ಬರ್ತಡೇ ಪಾರ್ಟಿ: ಒಂದೇ ವೇದಿಕೆಯಲ್ಲಿ ದರ್ಶನ್ ಸುದೀಪ್, ರಾಜಿ ಸಂಧಾನದ ಕುರಿತು ಅಭಿಮಾನಿಗಳ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.