ETV Bharat / entertainment

ದಂಗಲ್‌ ಖ್ಯಾತಿಯ ನಿತೇಶ್‌ ತಿವಾರಿ ನಿರ್ದೇಶನದ ಬವಾಲ್‌ ಸೆಟ್‌ಗೆ ಬಂದ ಜಾನ್ವಿ ಕಪೂರ್‌, ವರುಣ್‌ ಧವನ್‌ - ವರುಣ್‌ ಧವನ್‌

ನಿತೇಶ್ ತಿವಾರಿ ಅವರ ಮುಂದಿನ ಚಿತ್ರ ಬವಾಲ್‌ನಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಚಿತ್ರ ತಂಡವನ್ನು ಸೇರಿಕೊಂಡಿದ್ದಾರೆ. ಇನ್‌ಸ್ಟಾದಲ್ಲಿ ಈ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

Janhvi Kapoor, Varun Dhawan come together for Nitesh Tiwari's next
ದಂಗಲ್‌ ಖ್ಯಾತಿಯ ನಿತೇಶ್‌ ತಿವಾರಿ ನಿರ್ದೇಶನದ ಬವಾಲ್‌ ಸೆಟ್‌ಗೆ ಬಂದ ಜಾನ್ವಿ ಕಪೂರ್‌, ವರುಣ್‌ ಧವನ್‌
author img

By

Published : Mar 31, 2022, 8:20 AM IST

Updated : Mar 31, 2022, 11:11 AM IST

ಮುಂಬೈ: ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಹಾಗೂ ವರುಣ್‌ ಧವನ್‌ ದಂಗಲ್‌ ಚಿತ್ರದ ಖ್ಯಾತ ನಿರ್ದೇಶಕ ನಿತೇಶ್‌ ತಿವಾರಿ ನಿರ್ದೇಶನದ ಬವಾಲಿ ಚಿತ್ರದ ಸೆಟ್‌ಗೆ ಹಾಜರಾಗಿದ್ದಾರೆ. ಈ ಬಗ್ಗೆ ಜಾಲತಾಣಗಳಲ್ಲಿ ಇಬ್ಬರೂ ಮಾಹಿತಿ ಹಂಚಿಕೊಂಡಿದ್ದಾರೆ.

ದಂಗಲ್‌ ಖ್ಯಾತಿಯ ನಿತೇಶ್‌ ತಿವಾರಿ ನಿರ್ದೇಶನದ ಬವಾಲ್‌ ಸೆಟ್‌ಗೆ ಬಂದ ಜಾನ್ವಿ ಕಪೂರ್‌, ವರುಣ್‌ ಧವನ್‌

ನನ್ನ ಮುಂದಿನ ಚಿತ್ರವನ್ನು ಘೋಷಿಸಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ. ಶೀಘ್ರದಲ್ಲೇ ಜಾನ್ವಿ ಕಪೂರ್ ಅವರೊಂದಿಗೆ ಸ್ಕ್ರೀನ್‌ ಹಂಚಿಕೊಳ್ಳಲಿದ್ದೇನೆ. ಚಿತ್ರದ ಶೀರ್ಷಿಕೆ ಬವಾಲ್ ಎಂದು ವರುಣ್ ಧವನ್‌ ಮತ್ತು ಜಾನ್ವಿ ಕಪೂರ್‌ ತಮ್ಮ ಇನ್‌ಸ್ಟಾಗ್ರಾಮ್ ಘೋಷಿಸಿಕೊಂಡಿದ್ದಾರೆ.

ಅಬ್ ಹೋಗಾ ಬವಾಲ್ 2023ರ ಏಪ್ರಿಲ್ 7 ರ ಶುಭ ಶುಕ್ರವಾರದಂದು ಥಿಯೇಟರ್‌ಗಳಲ್ಲಿ ಜಾನ್ವಿ ಕಪೂರ್‌ ಜೊತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಸಾಜಿದ್ ನಾಡಿಯಾದ್ವಾಲಾ, ನಿತೇಶ್‌ ತಿವಾರಿ ಅವರ ಅದ್ಭುತ ಜೋಡಿಯೊಂದಿಗೆ ನನ್ನ ಮುಂದಿನದನ್ನು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ ಎಂದು ವರುಣ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

ಮತ್ತೊಂದೆಡೆ ಜಾನ್ವಿ ಕಪೂರ್‌, ಎರಡು ಅತ್ಯುತ್ತಮವಾದ ಸಾಜಿದ್ ನಾಡಿಯಾದ್ವಾಲಾ, ನಿತೇಶ್‌ ತಿವಾರಿ ಅವರೊಂದಿಗೆ ಕೈಜೋಡಿಸುತ್ತಿದ್ದೇನೆ. ನನ್ನ ಮುಂದಿನ ಸಿನಿಮಾ ಬವಾಲ್‌ ವರುಣ್‌ ಅವರೊಂದಿಗೆ ನಟಿಸುತ್ತಿರುವುದನ್ನು ಘೋಷಿಸಲು ತುಂಬಾ ಕೃತಜ್ಞಳಾಗಿದ್ದೇನೆ ಹಾಗೂ ಸಂತೋಷಪಡುತ್ತೇನೆ. 2023ರ ಏಪ್ರಿಲ್‌ 7 ರಂದು ನಿಮ್ಮನ್ನು ಚಿತ್ರಮಂದಿರಗಳಲ್ಲಿ ನೋಡೋಣ ಎಂದಿದ್ದಾರೆ.

ಬವಾಲ್‌ ಚಿತ್ರಕ್ಕೂ ಮುನ್ನ ವರುಣ್ ಧವನ್ ಮುಂದಿನ ಚಿತ್ರ 'ಜಗ್ ಜಗ್ ಜೀಯೋ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ನೀತು ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರವು 2022ರ ಜೂನ್ 24 ಬಿಡುಗಡೆಯಾಗಲಿದೆ. ಇದರ ಜೊತೆಗೆ ಕೃತಿ ಸನನ್ ಜೊತೆಗೆ 'ಭೇದಿಯಾ' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಜಾನ್ವಿ 'ಗುಡ್ ಲಕ್ ಜೆರ್ರಿ' ಮತ್ತು 'ದೋಸ್ತಾನಾ 2' ಸೇರಿದಂತೆ ಕೆಲವು ಕುತೂಹಲಕಾರಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಕರಣ್ ಜೋಹರ್ ಅವರ ಪ್ಯಾಶನ್ ಪ್ರಾಜೆಕ್ಟ್ 'ತಖ್ತ್'ನಲ್ಲೂ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಕರೀನಾ ಕಪೂರ್, ವಿಕ್ಕಿ ಕೌಶಲ್, ಅನಿಲ್ ಕಪೂರ್, ಭೂಮಿ ಪೆಡ್ನೇಕರ್, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ದುಲ್ಕರ್ ಸಲ್ಮಾನ್ ಅಭಿನಯದ ಸಿನಿಮಾ 'ಹೇ ಸಿನಾಮಿಕ' ಮಾ.31ಕ್ಕೆ ಒಟಿಟಿಯಲ್ಲಿ ರಿಲೀಸ್​

Last Updated : Mar 31, 2022, 11:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.