ಬಾಲಿವುಡ್ ಬೊಂಬೆ ಜಾನ್ವಿ ಕಪೂರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅವರ 30 ನೇ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸ್ವತಃ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಜಾನ್ವಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಇಂದು ಬಿಟೌನಿ ಬೆಡಗಿ ಜಾನ್ವಿ ಕಪೂರ್ ಅವರು 26 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2018 ರಲ್ಲಿ ತೆರೆಕಂಡ 'ಧಡಕ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಈ ಚೆಲುವೆ ಈವರೆಗೆ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಬಾಲಿವುಡ್ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ ಇದೀಗ ಜಾನ್ವಿಗೆ ಬಹುದೊಡ್ಡ ಅವಕಾಶವೊಂದು ಒದಗಿ ಬಂದಿದೆ. ನಟಿ, ನಾನು ಜೂನಿಯರ್ ಎನ್ಟಿಆರ್ ಜೊತೆ ಅಭಿನಯಿಸಲು ಬಯಸುತ್ತೇನೆ ಎಂದು ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. ಅದರಂತೆ ಇದೀಗ ಎನ್ಟಿಆರ್ ಜೊತೆ ನಟಿಸುವ ಜಾನ್ವಿ ಕನಸು ಕೊನೆಗೂ ನನಸಾಗಿದೆ.
ಜೂನಿಯರ್ ಎನ್ಟಿಆರ್ ಅಭಿನಯದ ಈ ಹೊಸ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ 'ಎನ್ಟಿಆರ್ 30' ಎಂದೇ ಕರೆಯಲಾಗುತ್ತಿದೆ. ಆದರೆ ಸಿನಿಮಾಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿದೆ. ಜಾನ್ವಿ ಅವರ ಸಿನಿ ವೃತ್ತಿಯಲ್ಲಿ ಇದು ಬಹುದೊಡ್ಡ ಸಿನಿಮಾವಾಗಲಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಮುಂದಿನ ವರ್ಷ ಏಪ್ರಿಲ್ 5 ರಂದು ಸಿನಿಮಾ ತೆರೆಕಾಣಲಿದೆ.
ಇದನ್ನೂ ಓದಿ: ಮಸಾಲೆ ವ್ಯಾಪಾರದ ಕಡೆ ಇದ್ದ ಗಮನ.. ಹೀರೋ ಆಗುವ ಕನಸು ಕಂಡಿರಲಿಲ್ಲವಂತೆ ಟಾಲಿವುಡ್ ಸ್ಟಾರ್ ವೆಂಕಟೇಶ್
ಜಾನ್ವಿ ಕಪೂರ್ ಅವರು ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇಂಥ ಅವಕಾಶ ಪಡೆದಿರುವುದಕ್ಕೆ ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ನಟಿ ಜಾನ್ವಿ ಕಪೂರ್ ಸಿನಿಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಲಿದ್ದಾರಾ? ಎಂದು ಕಾದುನೋಡಬೇಕಿದೆ. ಇದಲ್ಲದೇ 'ಬವಾಲ್' ಹಾಗೂ 'ಮಿಸ್ಟರ್ ಅಂಡ್ ಮಿಸಸ್ ಮಾಹಿ' ಚಿತ್ರದಲ್ಲಿಯೂ ಜಾನ್ವಿ ಕಪೂರ್ ನಟಿಸಲಿದ್ದಾರೆ. ಮತ್ತೊಂದೆಡೆ ಎನ್ಟಿಆರ್ ಸೋಮವಾರ ಬೆಳಗ್ಗೆ ಆಸ್ಕರ್ ಪ್ರಶಸ್ತಿಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಅದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
-
Young tiger #jrntr off for oscars 💥😍@tarak9999 #RRRForOscars #NaatuNaatu pic.twitter.com/g4iRggJeBy
— ARTISTRYBUZZ (@ArtistryBuzz) March 6, 2023 " class="align-text-top noRightClick twitterSection" data="
">Young tiger #jrntr off for oscars 💥😍@tarak9999 #RRRForOscars #NaatuNaatu pic.twitter.com/g4iRggJeBy
— ARTISTRYBUZZ (@ArtistryBuzz) March 6, 2023Young tiger #jrntr off for oscars 💥😍@tarak9999 #RRRForOscars #NaatuNaatu pic.twitter.com/g4iRggJeBy
— ARTISTRYBUZZ (@ArtistryBuzz) March 6, 2023
ಜಾನು ಫಸ್ಟ್ ಲುಕ್ ಹಂಚಿಕೊಂಡ ಶಿಖರ್: ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆ ಅವರ ಮೊಮ್ಮಗ, ಶಿಖರ್ ಪಹಾರಿಯಾ ಮತ್ತು ನಟಿ ಜಾನ್ವಿ ಕಪೂರ್ ಪ್ರೇಮಿಗಳೆನ್ನುವ ವದಂತಿಗಳಿವೆ. ಇದೀಗ ಬಿಟೌನಿ ಬೆಡಗಿಯ ಜನ್ಮದಿನದಂದು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಶಿಖರ್ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಜಾನ್ವಿ ಅವರ ಪೋಸ್ಟ್ನ್ನು ಸ್ಟೋರಿ ಹಾಕಿಕೊಂಡಿರುವ ಶಿಖರ್, ಕಣ್ಣಲ್ಲಿ ಎರಡು ಹೃದಯಗಳಿರುವ ಎಮೋಜಿ ಮತ್ತು ಮೀನಿನ ಎಮೋಟಿಕಾನ್ ಅನ್ನು ಅದರಲ್ಲಿ ಸೇರಿಸಿದ್ದಾರೆ.
ಜಾನ್ವಿಗೆ ಸಹೋದರಿ ಖುಷಿ ವಿಶ್: ಜಾನ್ವಿ ಕಪೂರ್ ಹುಟ್ಟುಹಬ್ಬಕ್ಕೆ ಸಹೋದರಿ ಖುಷಿ ಕಪೂರ್ ಶುಭಾಶಯ ಕೋರಿದ್ದಾರೆ. ಖುಷಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಬಾಲ್ಯದ ನೆನಪುಗಳ ಫೋಟೋಗಳನ್ನು ಕೊಲಾಜ್ ಮಾಡಿ ಪೋಸ್ಟ್ ಮಾಡಿದ್ದಾರೆ. ಅದು ಅಕ್ಕ-ತಂಗಿಯರ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. "ನನ್ನ ಪಾರ್ಟ್ನರ್ಗೆ ಜನ್ಮದಿನದ ಶುಭಾಶಯಗಳು. ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ" ಎಂದು ಫೋಟೋಗೆ ಕ್ಯಾಪ್ಶನ್ ಹಾಕಿದ್ದಾರೆ.
ಇದನ್ನೂ ಓದಿ: ಶ್ರದ್ಧಾರೊಂದಿಗೆ ಸಿನಿಮಾ ಪ್ರಚಾರ ಮಾಡದ ರಣ್ಬೀರ್: ಪತ್ನಿ ಆಲಿಯಾ ಭಟ್ ಅಡ್ಡಿಯಾಗಿದ್ದಾರಾ?!