ETV Bharat / entertainment

ತಗ್ಗದ 'ಜೈಲರ್'​ ಹವಾ.. ಯಶಸ್ವಿಯಾಗಿ 600 ಕೋಟಿ ಕ್ಲಬ್​ ಸೇರಿದ ರಜನಿ ಸಿನಿಮಾ

author img

By ETV Bharat Karnataka Team

Published : Aug 28, 2023, 4:34 PM IST

Jailer enters 600cr club: ರಜನಿಕಾಂತ್​ ನಟನೆಯ 'ಜೈಲರ್​' ಸಿನಿಮಾ ಬಿಡುಗಡೆಯಾದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್​ ಸೇರಿದೆ.

Jailer
'ಜೈಲರ್'​

'ಜೈಲರ್​'.. ಸೂಪರ್​ ಹಿಟ್​ ಸೌತ್​ ಸಿನಿಮಾ. ಆಗಸ್ಟ್​ 10ರಂದು ಬಿಡುಗಡೆಯಾಗಿ, ಮೂರು ವಾರ ಕಳೆದರೂ ನಾನ್​ ಸ್ಟಾಪ್​ ಇಲ್ಲದೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯನ್ನು ಕಣ್ತುಂಬಿಕೊಳ್ಳಲು ಜನರು ಥಿಯೇಟರ್​ಗೆ ಮುಗಿಬೀಳುತ್ತಿದ್ದಾರೆ. ಈ ಕಾರಣಕ್ಕಾಗಿ ಚಿತ್ರವು ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ರಿಲೀಸ್​ ಆದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಈ ಮೂಲಕ ದಕ್ಷಿಣ ಭಾರತದ ಹಲವು ಬ್ಲಾಕ್​ಬಸ್ಟರ್​ ಚಿತ್ರಗಳ ಸಾಲಿನಲ್ಲಿ 'ಜೈಲರ್'​ ಸ್ಥಾನ ಪಡೆದುಕೊಂಡಿದೆ.

'ಜೈಲರ್' ಕಲೆಕ್ಷನ್​: 'ಜೈಲರ್' ಈ ಹಿಂದಿನ ಬಾಕ್ಸ್​ ಆಫೀಸ್​ ದಾಖಲೆಯನ್ನು ಮುರಿದಿದೆ. ರಜನಿ ಮುಖ್ಯಭೂಮಿಕೆಯ ಈ ಸಿನಿಮಾ ಜಗತ್ತಿನಾದ್ಯಂತ 600 ಕೋಟಿಗೂ ಹೆಚ್ಚು ಸಂಪಾದನೆ ಮಾಡುವಲ್ಲಿ ಯಶ ಕಂಡಿದೆ. ದೇಶೀಯ ಬಾಕ್ಸ್​ ಆಫೀಸ್​ನಲ್ಲಿ 315.95 ಕೋಟಿ ರೂಪಾಯಿ ಸೇರಿ ವಿಶ್ವದಾದ್ಯಂತ 607.29 ಕೋಟಿ ರೂಪಾಯಿ ಸಂಗ್ರಹಿಸಿದೆ. ಚಿತ್ರವು ಭಾನುವಾರ ಅಂದರೆ 18ನೇ ದಿನದಂದು ಭಾರತದ ಎಲ್ಲಾ ಭಾಷೆಗಳಲ್ಲಿ 7.5 ಕೋಟಿ ರೂ. ಗಳಿಸಿದೆ. ಜೈಲರ್​ 600 ಕೋಟಿ ಕ್ಲಬ್​ ಪ್ರವೇಶಿಸಿದ ಎರಡನೇ ತಮಿಳು ಚಿತ್ರವಾಗಿದೆ. ಇದಕ್ಕೂ ಮೊದಲು ರೋಬೋಟ್​ 2 ಚಿತ್ರ 600 ಕೋಟಿ ಕ್ಲಬ್​ ಪ್ರವೇಶಿಸಿತ್ತು. ಅದರಲ್ಲೂ ಈ ಎರಡೂ ಚಿತ್ರಗಳು ಕೂಡ ರಜನಿ ಅವರದ್ದೇ ಅನ್ನೋದು ವಿಶೇಷ.

'ಜೈಲರ್'​ ಸಿನಿಮಾ ಮೊದಲ ವಾರದಲ್ಲಿ 450 ಕೋಟಿ ರೂ., ಎರಡನೇ ವಾರದಲ್ಲಿ 124 ಕೋಟಿ ರೂ., ಮೂರನೇ ವಾರದ ಮೊದಲ ದಿನ 7.67 ಕೋಟಿ ರೂ., ಎರಡನೇ ದಿನ 6.03 ಕೋಟಿ ರೂ., ಮೂರನೇ ದಿನ 8.36 ಕೋಟಿ ರೂ. ಮತ್ತು ನಾಲ್ಕನೇ ದಿನ 10.25 ಕೋಟಿ ರೂ. ಗಳಿಸಿದೆ. ಈ ಮೂಲಕ ವಿಶ್ವದಾದ್ಯಂತ ಚಿತ್ರವು 607.29 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇನ್ನು ಜೈಲರ್​ ಸಿನಿಮಾ ಮೂರನೇ ಭಾನುವಾರ ಹೌಸ್​ಫುಲ್​ ಆಗಿತ್ತು ಎಂದು ಹೇಳಲಾಗುತ್ತಿದೆ. ಜೈಲರ್​ ಕ್ರೇಜ್​ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ.

600 ಕೋಟಿ ಕ್ಲಬ್​ ದಾಟಿದ ಸೌತ್​ ಸಿನಿಮಾಗಳಿವು..

  • ಬಾಹುಬಲಿ 2 - 1810.59 ಕೋಟಿ ರೂ.
  • ಆರ್​ಆರ್​ಆರ್​ - 1276.20 ಕೋಟಿ ರೂ.
  • ಕೆಜಿಎಫ್​ ಅಧ್ಯಾಯ 2 - 1259.14 ಕೋಟಿ ರೂ.
  • ರೋಬೋಟ್​ 2 - 800 ಕೋಟಿ ರೂ.
  • ಬಾಹುಬಲಿ - 650 ಕೋಟಿ ರೂ.
  • ಜೈಲರ್​ - 607.29 ಕೋಟಿ ರೂ.

ಜೈಲರ್​ ಚಿತ್ರತಂಡ.. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ಚಿತ್ರವು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರ ಪತ್ನಿಯಾಗಿ ರಮ್ಯಾ ಕೃಷ್ಣ ನಟಿಸಿದ್ದು, ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜ್ ಕುಮಾರ್, ತಮನ್ನಾ, ಸುನೀಲ್ ಮತ್ತು ಯೋಗಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರದ ವಿಶೇಷ ಆಕರ್ಷಣೆ.

ಇದನ್ನೂ ಓದಿ: Thalaivar 170: ಜೈಲರ್​ ಸಕ್ಸಸ್​ ಸೆಲೆಬ್ರೇಶನ್ - ರಜನಿಕಾಂತ್​ ಮುಂದಿನ ಸಿನಿಮಾ ಶೂಟಿಂಗ್​​ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.