ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜೈಲರ್'. ಸೆಟ್ಟೇರಿದಾಗಿನಿಂದಲೂ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ಆಗಸ್ಟ್ನಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಪ್ರಾರಂಭಿಸಲು ರೆಡಿಯಾಗಿದೆ. ಚೆನ್ನೈನಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಈವೆಂಟ್ ನಡೆಸುವ ಮೂಲಕ ತಲೈವಾ ಅಭಿಮಾನಿಗಳನ್ನು ಸಂತೋಷಪಡಿಸಲು ಚಿತ್ರ ತಯಾರಕರು ಸಿದ್ಧರಾಗಿದ್ದಾರೆ. 'ಜೈಲರ್'ನ ಸಂಗೀತವನ್ನು ತಮಿಳು ಚಿತ್ರರಂಗದ ಬಹುಬೇಡಿಕೆಯ ಸಂಯೋಜಕ ಅನಿರುಧ್ ರವಿಚಂದರ್ ಸಂಯೋಜಿಸಿದ್ದಾರೆ.
-
1000 FREE PASSES ready-ah irukku! Neengalum ready-ah irunga! Nalaiku 1 PM santhipom😎 #JailerAudioLaunch💥@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi #Jailer pic.twitter.com/h9cVfAZj6j
— Sun Pictures (@sunpictures) July 23, 2023 " class="align-text-top noRightClick twitterSection" data="
">1000 FREE PASSES ready-ah irukku! Neengalum ready-ah irunga! Nalaiku 1 PM santhipom😎 #JailerAudioLaunch💥@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi #Jailer pic.twitter.com/h9cVfAZj6j
— Sun Pictures (@sunpictures) July 23, 20231000 FREE PASSES ready-ah irukku! Neengalum ready-ah irunga! Nalaiku 1 PM santhipom😎 #JailerAudioLaunch💥@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi #Jailer pic.twitter.com/h9cVfAZj6j
— Sun Pictures (@sunpictures) July 23, 2023
ರಜನಿಕಾಂತ್ ಅಭಿನಯದ ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿದ್ದು, ಇಂದು ಚಿತ್ರದ ಆಡಿಯೋ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಜೈಲರ್ ಆಡಿಯೋ ಜುಲೈ 28ರಂದು ಅನಾವರಣಗೊಳ್ಳಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದೆ. ತಲೈವಾ ಅಭಿಮಾನಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಈವೆಂಟ್ ಅನ್ನು ಆಯೋಜಿಸಲಾಗುತ್ತಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಚಿತ್ರತಂಡ ನಿರೀಕ್ಷಿಸಿದೆ.
-
Nadakkura Nada Puyalaacchey 🤩
— Sun Pictures (@sunpictures) July 22, 2023 " class="align-text-top noRightClick twitterSection" data="
The wait is over! Get ready for the star-studded Grand Audio Launch of #Jailer on July 28th at Nehru Indoor Stadium, Chennai.
Alappara Kelapparom 💥⚡️🙌🏼@rajinikanth @Nelsondilpkumar @anirudhofficial @Mohanlal @NimmaShivanna @bindasbhidu… pic.twitter.com/7RjIitV6v8
">Nadakkura Nada Puyalaacchey 🤩
— Sun Pictures (@sunpictures) July 22, 2023
The wait is over! Get ready for the star-studded Grand Audio Launch of #Jailer on July 28th at Nehru Indoor Stadium, Chennai.
Alappara Kelapparom 💥⚡️🙌🏼@rajinikanth @Nelsondilpkumar @anirudhofficial @Mohanlal @NimmaShivanna @bindasbhidu… pic.twitter.com/7RjIitV6v8Nadakkura Nada Puyalaacchey 🤩
— Sun Pictures (@sunpictures) July 22, 2023
The wait is over! Get ready for the star-studded Grand Audio Launch of #Jailer on July 28th at Nehru Indoor Stadium, Chennai.
Alappara Kelapparom 💥⚡️🙌🏼@rajinikanth @Nelsondilpkumar @anirudhofficial @Mohanlal @NimmaShivanna @bindasbhidu… pic.twitter.com/7RjIitV6v8
ಜೈಲರ್ ಆಡಿಯೋ ಲಾಂಚ್ ಈವೆಂಟ್‌ಗೆ ನೀವೂ ಕೂಡ ಟಿಕೆಟ್ ಖರೀದಿಸಿ ಹೋಗಬಹುದು. ಟಿಕೆಟ್ ದರವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ, 500 ರೂ.ನಿಂದ ಪ್ರಾರಂಭವಾಗಬಹುದು ಎಂದು ಕೆಲ ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ಈವೆಂಟ್‌ಗೆ ಹೋಗಲು ಚಿತ್ರ ತಯಾರಕರು 1000 ಉಚಿತ ಪಾಸ್‌ಗಳನ್ನು ಘೋಷಿಸಿದ್ದಾರೆ. ಆಡಿಯೋ ಲಾಂಚ್ ಈವೆಂಟ್ನಲ್ಲಿ ಪಾಲ್ಗೊಳ್ಳಲು ಬಯಸುವ ಅಭಿಮಾನಿಗಳು ಉಚಿತ ಪಾಸ್‌ಗಳಿಗಾಗಿ, ಸೋಮವಾರ (ನಾಳೆ) ಮಧ್ಯಾಹ್ನ 1 ಗಂಟೆಗೆ ಟ್ವೀಟರ್ನಲ್ಲಿ ಚಿತ್ರ ತಯಾರಕರು ಒದಗಿಸುವ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಜೈಲರ್ ಆಡಿಯೋ ಲಾಂಚ್ ಈವೆಂಟ್ ವಿವರ:
- ದಿನಾಂಕ: ಜುಲೈ 28, 2023
- ಸ್ಥಳ: ನೆಹರು ಇಂಡೋರ್ ಸ್ಟೇಡಿಯಂ, ಚೆನ್ನೈ
- ಸಮಯ: ಸಂಜೆ 4 ಗಂಟೆಯಿಂದ ಪ್ರಾರಂಭ
- ಉಚಿತ ಪಾಸ್‌ಗಳಿಗಾಗಿ ನೋಂದಣಿ: ಜುಲೈ 24, ಮಧ್ಯಾಹ್ನ 1 ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ ಲಭ್ಯ
ಇದನ್ನೂ ಓದಿ: ಮಹಿಳೆಯೊಂದಿಗೆ ನಟಿ ರೇಖಾ ಲಿವ್ ಇನ್ ರಿಲೇಶನ್ಶಿಪ್ ವದಂತಿ: ಬಯೋಗ್ರಫಿ ಲೇಖಕ ಯಾಸರ್ ಉಸ್ಮಾನ್ ಆಕ್ರೋಶ
ಜೈಲರ್ ಕಥೆ ಬಗ್ಗೆ ಚಿತ್ರತಂಡ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಂಟೆಂಟ್ ಅನ್ನು ರಹಸ್ಯವಾಗಿಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಜೈಲರ್ ಒಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವಾಗಿದ್ದು, ಕನ್ನಡದ ಸೂಪರ್ ಸ್ಟಾರ್ ಶಿವರಾಜ್‌ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಜೊತೆಗೆ ತಮನ್ನಾ ಭಾಟಿಯಾ ಮತ್ತು ರಮ್ಯಾ ಕೃಷ್ಣನ್ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ತಿಂಗಳು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಆಗಸ್ಟ್ 10 ರಂದು ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆಗೊಳಿಸಲು ತಯಾರಿ ನಡೆಯುತ್ತಿದೆ.
ಇದನ್ನೂ ಓದಿ: Suriya Birthday: ಕಂಗುವ ಫಸ್ಟ್ ಗ್ಲಿಂಪ್ಸ್ ರಿಲೀಸ್; ರೋಮಾಂಚಕ ದೃಶ್ಯಗಳಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ!
ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲನಿತಿ ಮಾರನ್ ನಿರ್ಮಾಣ ಮಾಡಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆಡಿಯೋ ಬಿಡುಗಡೆ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಲಿದೆ. ರಜನಿಕಾಂತ್ ಅವರ ಕಟ್ಟಾ ಅಭಿಮಾನಿಗಳು ಇದರ ಸದುಪಯೋಗ ಪಡೆಯಬಹುದು.