ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಇಂದು (ಸೋಮವಾರ) ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ತಮಗೆ ಜಾಮೀನು ನೀಡುವಂತೆ ನಟಿಯು ಇಂದು ತಮ್ಮ ವಕೀಲರೊಂದಿಗೆ ದೆಹಲಿಯ ಪಟಿಯಾಲ ಕೋರ್ಟ್ ಮೆಟ್ಟಿಲೇರಿದ್ದರು.
ಇವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು 50,000 ರೂಪಾಯಿಗಳ ಭದ್ರತಾ ಬಾಂಡ್ ಜೊತೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಈ ಮೂಲಕ ಬಂಧನದ ಭೀತಿ ಎದುರಿಸುತ್ತಿದ್ದ ಜಾಕ್ವೆಲಿನ್ ಕೊಂಚ ನಿರಾಳರಾಗಿದ್ದಾರೆ.
ಸುಕೇಶ್ ಚಂದ್ರಶೇಖರ್ ಮತ್ತು ಇತರರು ಒಳಗೊಂಡಿರುವ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ವಂಚಕ ಸುಕೇಶ್‌ನಿಂದ ದುಬಾರಿ ಬೆಲೆಯುಳ್ಳ ಉಡುಗೊರೆಗಳನ್ನು ಸ್ವೀಕರಿಸಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿತ್ತು. ಹಾಗಾಗಿ ತನಿಖೆ ತೀವ್ರಗೊಳಿಸಿದ್ದ ಜಾರಿ ನಿರ್ದೇಶನಾಲಯ ಈ ವರ್ಷ ಆಗಸ್ಟ್ 17 ರಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೆಸರನ್ನು ಉಲ್ಲೇಖಿಸಿ ದೆಹಲಿ ನ್ಯಾಯಾಲಯಕ್ಕೆ ಪೂರಕ ಆರೋಪ ಪಟ್ಟಿಯಲ್ಲಿ ಸಲ್ಲಿಸಿತ್ತು.
-
Jacqueline Fernandez gets interim bail in Rs 200 crore extortion case
— ANI Digital (@ani_digital) September 26, 2022 " class="align-text-top noRightClick twitterSection" data="
Read @ANI Story | https://t.co/9N0GP7mtX4#JacquelineFernandez #ED #SukeshChandrasekhar pic.twitter.com/g8UvJ01j4p
">Jacqueline Fernandez gets interim bail in Rs 200 crore extortion case
— ANI Digital (@ani_digital) September 26, 2022
Read @ANI Story | https://t.co/9N0GP7mtX4#JacquelineFernandez #ED #SukeshChandrasekhar pic.twitter.com/g8UvJ01j4pJacqueline Fernandez gets interim bail in Rs 200 crore extortion case
— ANI Digital (@ani_digital) September 26, 2022
Read @ANI Story | https://t.co/9N0GP7mtX4#JacquelineFernandez #ED #SukeshChandrasekhar pic.twitter.com/g8UvJ01j4p
ಇದಕ್ಕೂ ಮುನ್ನ ತನಿಖೆಗೆ ಹಾಜರಾಗುವಂತೆ ನಟಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ಹಲವು ಬಾರಿ ಕೆಲವು ಕಾರಣಗಳನ್ನು ನೀಡಿ ಜಾಕ್ವೆಲಿನ್ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಬುಧವಾರ ಪೂರಕ ಆರೋಪ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸೆಪ್ಟೆಂಬರ್ 26, 2022(ಇಂದು) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪ್ರಸ್ತುತ ಪ್ರಕರಣದ ಎಲ್ಲ ಆರೋಪಿಗಳಿಗೆ ದೋಷಾರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆಯೂ ನ್ಯಾಯಾಲಯವು ಇಡಿಗೆ ಸೂಚಿಸಿತ್ತು.
ಸದ್ಯ ನಟಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ನ್ಯಾಯಾಂಗ ಬಂಧನದಲ್ಲೇ ಮುಂದುವರೆದಿದ್ದಾರೆ. ಕಳೆದ ವಾರವಷ್ಟೇ ಜಾಕ್ವೆಲಿನ್ ಅವರನ್ನು ಇಡಿ ಇರಾನಿ ಬಗೆಗಿನ ಪ್ರಶ್ನೆ ಸೇರಿದಂತೆ ಎಂಟು ಗಂಟೆಗಳ ಕಾಲ ವಿಚಾರಣೆಗೊಳಿಸಿತ್ತು. ಆ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರಿಗೆ 100 ಪ್ರಶ್ನೆಗಳನ್ನು ಕೇಳಿದ್ದರು ಎಂದು ಹೇಳಲಾಗುತ್ತಿದೆ.
ವಂಚಕ ಚಂದ್ರಶೇಖರ್, ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಅನೇಕರಿಂದ ಹಣ ವಸೂಲಿ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಇದೇ ವ್ಯಕ್ತಿ ಜಾಕ್ವೆಲಿನ್ ಸೇರಿದಂತೆ ಅನೇಕ ನಟಿಯರಿಗೆ ದುಬಾರಿ ಬೆಲೆಯ ವಸ್ತುಗಳನ್ನು ನೀಡಿರುವುದು ತನಿಖೆಯಿಂದ ಬಯಲಾಗಿದೆ.
ಹಿಂದಿನ ಚಾರ್ಜ್‌ಶೀಟ್ ಪ್ರಕಾರ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಅವರು ಆರೋಪಿ ಸುಕೇಶ್‌ನಿಂದ ಬಿಎಂಡಬ್ಲ್ಯು ಕಾರುಗಳು, ದುಬಾರಿ ಬ್ಯಾಗ್, ಬಟ್ಟೆಗಳು, ವಾಚ್ ಮತ್ತಿತರ ವಸ್ತುಗಳನ್ನೂ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸುಕೇಶ್ ಉಡುಗೊರೆ ನೀಡಿದ್ದು ನಿಜ.
ಆದರೆ, ಅವುಗಳೆನ್ನೆಲ್ಲ ನಾನು ಮರಳಿಸಿರುವುದಾಗಿ ನಟಿ ಜಾಕ್ವೆಲಿನ್ ಹೇಳಿಕೆ ನೀಡಿದ್ದಳು. ಸುಕೇಶ್ ಚಂದ್ರಶೇಖರ್ ಮೋಸದ ದುಡ್ಡಿನಲ್ಲಿ ಈ ಉಡುಗೊರೆಗಳನ್ನು ಕೊಡುತ್ತಿರುವುದು ಗೊತ್ತಿದ್ದರೂ ನಟಿ ಉಡುಗೊರೆ ಸ್ವೀಕರಿಸಿದ್ದರು ಎಂಬುವುದು ನಟಿಯ ಮೇಲಿರುವ ಗುರುತರ ಆರೋಪ. ಸದ್ಯ ಈ ಪ್ರಕರಣದ ಸಂಬಂಧ ಅಕ್ಟೋಬರ್ 22ರಂದು ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಸೌಮ್ಯ ಸ್ವಭಾವ, ಸೌಜನ್ಯದ ವರ್ತನೆ.. ಐಸಿಸ್ ಜೊತೆ ನಂಟು ಹೊಂದಿದವರ ಸಂಪರ್ಕದಿಂದ ಆಗಿದ್ದೇನು?