ಮುಂದಿನ ತಿಂಗಳು ಮೊದಲ ವಾರದಲ್ಲಿ ಅಬುಧಾಬಿಯಲ್ಲಿ ಐಐಎಫ್ಎ ಅವಾರ್ಡ್ -2022 ರ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಆಹ್ವಾನ ಬಂದಿದೆ. ಆದರೆ ಅವರು ಇಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು, ವಿದೇಶಕ್ಕೆ ತೆರಳಲು ಅಂದರೆ ಅಬುಧಾಬಿಗೆ ತೆರಳಲು ಅನುಮತಿ ನೀಡುವಂತೆ ದೆಹಲಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಅಬುಧಾಬಿ ಹಾಗೂ ಇತರ ದೇಶಗಳಿಗೆ ಭೇಟಿ ನೀಡಲು ಅನುಮತಿ ನೀಡಿದೆ.
ಸುಮಾರು 15 ದಿನಗಳ ಕಾಲ ತಾವು ಅಬುಧಾಬಿ ಸೇರಿ ವಿದೇಶಿ ಪ್ರವಾಸಕ್ಕೆ ತೆರಳಬೇಕಿರುವುದರಿಂದ ಇದಕ್ಕೆ ಅನುಮತಿ ನೀಡುವಂತೆ ದೆಹಲಿ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು. ಅವರ ಅರ್ಜಿಗೆ ಮಾನ್ಯತೆ ನೀಡಿರುವ ಕೋರ್ಟ್ ವಿದೇಶಕ್ಕೆ ತೆರಳಲು ಫರ್ಮಿಷನ್ ಸಿಕ್ಕಿದೆ. ಮೇ 31 ರಿಂದ ಜೂನ್ 6ರವರೆಗೆ ಐಐಎಫ್ಎ ಅವಾರ್ಡ್- 2022 ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ಸಿಕ್ಕಿದೆ.
ಇದನ್ನು ಓದಿ: ಇಬ್ಬರು ಗರ್ಭಿಣಿಯರು, ಎರಡು ಮಕ್ಕಳು ಸೇರಿ ಐವರ ಮೃತದೇಹ ಬಾವಿಯಲ್ಲಿ ಪತ್ತೆ.. ಕೊಲೆ ಶಂಕೆ!?