ETV Bharat / entertainment

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್​ಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ವಿಸ್ತರಿಸಿದ ನ್ಯಾಯಾಲಯ - ಅಕ್ರಮ ಹಣ ವರ್ಗಾವಣೆ ಪ್ರಕರಣ

ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆ ಕೋರ್ಟ್‌ಗೆ ಹಾಜರಾಗಿದ್ದ ನಟಿ ಜಾಕ್ವೆಲಿನ್​ಗೆ ಮಧ್ಯಂತರ ಜಾಮೀನನ್ನು ವಿಸ್ತರಿಸಿದೆ.

Jacqueline Fernandez arrives at Patiala House Court

author img

By

Published : Oct 22, 2022, 2:28 PM IST

Updated : Oct 22, 2022, 4:58 PM IST

ನವದೆಹಲಿ: ಸುಕೇಶ್ ಚಂದ್ರಶೇಖರ್ ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿದ್ದ ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡೀಸ್​ಗೆ ಈ ಮೊದಲು ನೀಡಲಾಗಿದ್ದ ಮಧ್ಯಂತರ ಜಾಮೀನು ಅವಧಿಯನ್ನು ಮತ್ತೆ ವಿಸ್ತರಿಸಿದೆ. ತನ್ನ ಸಾಮಾನ್ಯ ಜಾಮೀನು ಅರ್ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯು ಶನಿವಾರ ಕೋರ್ಟ್‌ಗೆ ಹಾಜರಾಗಿದ್ದು ನ್ಯಾಯಾಲಯವು ನವೆಂಬರ್ 10 ರವರೆಗೆ ಈ ಮಧ್ಯಂತರ ಜಾಮೀನನ್ನು ವಿಸ್ತರಿಸಿದೆ.

  • #WATCH | Actor Jacqueline Fernandez leaves from Delhi's Patiala House Court after ED extends her interim bail & protection till November 10th, in the Rs 200 crore money laundering case. pic.twitter.com/sGdHtG8TsD

    — ANI (@ANI) October 22, 2022 " class="align-text-top noRightClick twitterSection" data=" ">

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್‌ಗೆ ಈ ಹಿಂದೆ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಲಾಗಿತ್ತು. ಅದಕ್ಕೂ ಮುನ್ನ ನೀಡಲಾಗಿದ್ದ ಸಮನ್ಸ್​ಗೆ ಸಂಬಂಧಿಸಿದಂತೆ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಸದ್ಯ ತಮ್ಮ ವಕೀಲ ಪ್ರಶಾಂತ್ ಪಾಟೀಲ್ ಜೊತೆ ಇಂದು ಮತ್ತೆ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿದ್ದರು.

  • #WATCH | Actor Jacqueline Fernandez arrives at Delhi's Patiala House Court in connection with her regular bail plea over the Rs 200 crore money laundering case involving conman Sukesh Chandrashekar pic.twitter.com/1odhntu1R4

ಸಾಮಾನ್ಯ ಜಾಮೀನು ಮತ್ತು ಇತರ ಬಾಕಿ ಇರುವ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 10ಕ್ಕೆ ನಿಗದಿಪಡಿಸಲಾಗಿದೆ. ಅಲ್ಲದೇ ನ್ಯಾಯಾಲಯವು ಎಲ್ಲ ಕಕ್ಷಿದಾರರಿಗೆ ಚಾರ್ಜ್ ಶೀಟ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಇಡಿಗೆ ಸೂಚನೆ ನೀಡಿದೆ. ನಟಿಯ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಇಂದು ನಿಗದಿಪಡಿಸಿತ್ತು. ಹಾಗಾಗಿ ನಟಿಯೂ ಇಂದು ವಕೀಲ ಪ್ರಶಾಂತ್ ಪಾಟೀಲ್ ಅವರೊಂದಿಗೆ ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ರಕ್ಕಮ್ಮನಿಗೆ ಮಧ್ಯಂತರ ಜಾಮೀನು

Last Updated : Oct 22, 2022, 4:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.