ETV Bharat / entertainment

ಜೂಮೆ ಜೋ ಪಠಾಣ್​​ ಹಾಡಿಗೆ ಮೈ ಕುಣಿಸಿದ ಇರ್ಫಾನ್ ಪಠಾಣ್ ಪುತ್ರ.. ವಿಡಿಯೋ ಮೆಚ್ಚಿದ ಎಸ್​ಆರ್​ಕೆ - ಇರ್ಫಾನ್ ಪಠಾಣ್

ಇರ್ಫಾನ್ ಪಠಾಣ್ ಅವರ ಮಗ ಜೂಮೆ ಜೋ ಪಠಾಣ್​​ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ.

cricketer Irfan Pathan son dance
ಜೂಮೆ ಜೋ ಪಠಾಣ್​​ ಹಾಡಿಗೆ ಮೈ ಕುಣಿಸಿದ ಇರ್ಫಾನ್ ಪಠಾಣ್ ಪುತ್ರ
author img

By

Published : Mar 23, 2023, 7:04 PM IST

ಬಾಲಿವುಡ್ ಕಿಂಗ್​ ಖಾನ್​​ ಶಾರುಖ್ ಖಾನ್ ಅವರ ಮುದ್ದಾದ ಅಭಿಮಾನಿ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪುತ್ರ ಜೂಮೆ ಜೋ ಪಠಾಣ್​​ ಹಾಡಿಗೆ ಹೆಜ್ಜೆ ಹಾಕಿದ್ದು, ಇದಕ್ಕೆ ಸ್ವತಃ ಎಸ್​ಆರ್​ಕೆ ಪ್ರತಿಕ್ರಿಯಿಸಿದ್ದಾರೆ.

ಇರ್ಫಾನ್ ಪಠಾಣ್ ತಮ್ಮ ಟ್ವಿಟ್ಟರ್ ಪೇಜ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅಭಿನಯದ ಸೂಪರ್​ ಹಿಟ್ ಜೂಮೆ ಜೋ ಪಠಾಣ್​​ ಹಾಡಿಗೆ ಇರ್ಫಾನ್ ಪಠಾಣ್ ಅವರ ಮಗು ಮೈ ಕುಣಿಸಿರುವ ವಿಡಿಯೋವಿದು. ಮಗು ಫೋನ್‌ನಲ್ಲಿ ಹಾಡು ಕೇಳುವುದರೊಂದಿಗೆ ಮತ್ತು ಅದಕ್ಕೆ ನೃತ್ಯ ಮಾಡುವ ಮೂಲಕ ಎಸ್​ಆರ್​ಕೆ ಅವರ ಹಾಡಿಗೆ ಸ್ಪಂದಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ನೆಟ್ಟಿಗರ ಮೆಚ್ಚುಗೆ ಸಂಪಾದಿಸಿದೆ.

ವಿಡಿಯೋ ಹಂಚಿಕೊಂಡಿರುವ ಇರ್ಫಾನ್ ಪಠಾಣ್, ''ಖಾನ್​ ಸರ್, ನಿಮ್ಮ ಅಭಿಮಾನಿಗಳ ಪಟ್ಟಿಗೆ ಈ ಹೊಸ ಅಭಿಮಾನಿಯನ್ನೂ ಸೇರಿಸಿ'' ಎಂದು ಬರೆದುಕೊಂಡಿದ್ದಾರೆ. ಇರ್ಫಾನ್ ಪಠಾಣ್ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್​ ಸೆಕ್ಷನ್​ ಅಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಅವರ ಕಾಮೆಂಟ್​ ಸೆಕ್ಷನ್​ ಹಾರ್ಟ್ ಎಮೋಜಿಗಳಿಂದ ತುಂಬಿದೆ. ಅಸಲಿ ಪಠಾನ್​ ಇಲ್ಲಿದ್ದಾನೆ, ಮಗು ಬಹಳ ಮುದ್ದಾಗಿದೆ, ದೇವರು ಅವನನ್ನು ಯಾವಾಗಲೂ ಆಶೀರ್ವದಿಸಲಿ, ಛೋಟಾ ಪಠಾಣ್​ ಎಂದೆಲ್ಲಾ ಕಾಮೆಂಟ್​ ಮಾಡಿದ್ದಾರೆ.

ಶಾರುಖ್​ ಖಾನ್​​ ತಮ್ಮ ಟ್ವಿಟರ್​ ಪೇಜ್​ನಲ್ಲಿ ಈ ವಿಡಿಯೋ ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ. ''ನಿಮಗಿಂತ ಪ್ರತಿಭಾವಂತ, ಛೋಟಾ ಪಠಾಣ್'' ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್, ''ಪ್ರತಿ ತಂದೆಯಂದಿರೂ ಈ ಮಾತನ್ನು ಕೇಳಲಿಚ್ಛಿಸುತ್ತಾರೆ'' ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ಪ್ರಪಂಚದಾದ್ಯಂತ ಅನೇಕರು (ಪಠಾಣ್ ಅಥವಾ ಅಭಿಮಾನಿಗಳು) ಇದ್ದಾರೆ ಎಂದು ನಾನು ಭಾವಿಸುತ್ತೇನೆ, ನೀವು (ಶಾರುಖ್​ ಖಾನ್) ಬೆಳಕು, ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಬರೆದಿದ್ದಾರೆ

ಇದನ್ನೂ ಓದಿ: ಬಾಲಿವುಡ್​ ಕ್ವೀನ್‌ಗಿಂದು ಹುಟ್ಟುಹಬ್ಬದ ಸಂಭ್ರಮ​​: 'ನನ್ನಿಂದ ದುಃಖವಾಗಿದ್ದರೆ ಕ್ಷಮಿಸಿ'- ಕಂಗನಾ ರಣಾವತ್

ಫೆಬ್ರವರಿಯಲ್ಲಿ ಬಾರ್ಡರ್ ​ಗವಾಸ್ಕರ್​ ಟ್ರೋಫಿ ಟೆಸ್ಟ್​ ಪಂದ್ಯ ನಡೆಯಿತು. ಮೊದಲ ಟೆಸ್ಟ್​ ಪಂದ್ಯ ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ಫೆಬ್ರವರಿ 9ಕ್ಕೆ ಆರಂಭವಾಗಿ 11ಕ್ಕೆ ಮುಕ್ತಾಯವಾಗಿತ್ತು. ಈ ಪಂದ್ಯದ​ ಬ್ರೇಕ್​ ಸಮಯದಲ್ಲಿ ವಿರಾಟ್​ ಕೊಹ್ಲಿ ಮಾಡಿದ ಒಂದು ಡ್ಯಾನ್ಸ್​ ವೈರಲ್​ ಆಗಿ ಸದ್ದು ಮಾಡಿತ್ತು. ಅವರು ಜೂಮೆ ಜೋ ಪಠಾನ್ ಸ್ಟೆಪ್​​ ಹಾಕಿದ್ದರು. ಆ ವಿಡಿಯೋಗೂ ಶಾರುಖ್​ ಖಾನ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ನನಗಿಂತ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ, ಅದನ್ನು ವಿರಾಟ್ ಮತ್ತು ಜಡೇಜಾ ಅವರಿಂದ ಕಲಿಯಬೇಕು" ಎಂದು ತಿಳಿಸಿದ್ದರು.

ಇದನ್ನೂ ಓದಿ: ಸಿಹಿ ಸುದ್ದಿ ನೀಡಿದ ರಿಷಬ್ ಶೆಟ್ಟಿ: 'ಕಾಂತಾರ 2' ಸಿನಿಮಾದ ಬರವಣಿಗೆ ಪ್ರಾರಂಭ

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರ ಬಿಡುಗಡೆಗೂ ಮುನ್ನ ಭಾರೀ ವಿವಾದ ಎದುರಿಸಿತ್ತು. ಆದ್ರೆ ಚಿತ್ರ ಕಂಡ ಯಶಸ್ಸು ಮಾತ್ರ ಅಭೂತಪೂರ್ವ. ತೆರೆಕಂಡ ಒಂದು ತಿಂಗಳೊಳಗೆ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.