ಮೋಹಕ ತಾರೆ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಮತ್ತು ರಾಜ್ ಬಿ.ಶೆಟ್ಟಿ ನಟಿಸಿ, ನಿರ್ದೇಶನ ಹೇಳಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ನಾಯಕಿ ಪಾತ್ರದ ಪರಿಚಯವನ್ನು ಚಿತ್ರ ತಂಡ ಇಂದು (ಸೋಮವಾರ) ಅನಾವರಣ ಮಾಡಿದೆ.
-
Presenting the talented #SiriRavikumar as Prerana in Swathi Mutthina Male Haniye.
— Applebox Studios (@StudiosApplebox) December 5, 2022 " class="align-text-top noRightClick twitterSection" data="
Prerana, which has its origin in Sanskrit, means inspiration. Tell us what inspires you. #SMMH @divyaspandana #RajBShetty pic.twitter.com/p5oJ09TSAK
">Presenting the talented #SiriRavikumar as Prerana in Swathi Mutthina Male Haniye.
— Applebox Studios (@StudiosApplebox) December 5, 2022
Prerana, which has its origin in Sanskrit, means inspiration. Tell us what inspires you. #SMMH @divyaspandana #RajBShetty pic.twitter.com/p5oJ09TSAKPresenting the talented #SiriRavikumar as Prerana in Swathi Mutthina Male Haniye.
— Applebox Studios (@StudiosApplebox) December 5, 2022
Prerana, which has its origin in Sanskrit, means inspiration. Tell us what inspires you. #SMMH @divyaspandana #RajBShetty pic.twitter.com/p5oJ09TSAK
ಇತ್ತೀಚೆಗೆ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಲ್ಲೀನವಾಗಿದೆ. ಇದರ ನಡುವೆ ಇಂದು ‘ಪ್ರೇರಣಾ’ ಎಂಬ ಪಾತ್ರವನ್ನು ಪರಿಚಯ ಮಾಡಿಕೊಂಡಿದೆ. ಪಾತ್ರ ಪರಿಚಯಕ್ಕೆ ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.
ನಟಿ ಸಿರಿ ರವಿಕುಮಾರ್ ಈ ಚಿತ್ರದಲ್ಲಿ ‘ಪ್ರೇರಣಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ರಾಜ್ ಬಿ.ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಪ್ರೇರಣಾ’ಳನ್ನು ಪರಿಚಯಿಸಿದ್ದಾರೆ. ನೀವು ಎಷ್ಟು ಅದ್ಭುತವಾದ ನಟಿ ಎನ್ನುವುದನ್ನು ಪ್ರೇಕ್ಷಕರಿಗೆ ತೋರಿಸಲು ಕಾತರದಿಂದಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.
'ಸಕುಟುಂಬ ಸಮೇತ’, ‘ಆಬ್ರಕಡಾಬ್ರ’ ಸಿನಿಮಾದಲ್ಲಿ ನಟಿಸಿದ್ದ ಸಿರಿ ರವಿಕುಮಾರ್, ಸದ್ಯ ಅಭಿಜಿತ್ ಮಹೇಶ್ ನಿರ್ದೇಶನದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ. ದಿಗಂತ್, ರಿಷಬ್ ಶೆಟ್ಟಿ, ಅಚ್ಯುತಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಈ ಚಿತ್ರ ತೆರೆಗೆ ಬರಲಿದೆ.
ಚಿತ್ರದ ಪ್ರತಿಭಾವಂತೆ ನಟಿ ಸಿರಿ ರವಿಕುಮಾರ್ ಅವರನ್ನು ಪ್ರೇರಣಾ ಎಂಬ ಪಾತ್ರದಲ್ಲಿ ಪರಿಚಯ ಮಾಡಲು ಖುಷಿಯಾಗುತ್ತಿದೆ. ಸಂಸ್ಕೃತದಲ್ಲಿ ಪ್ರೇರಣಾ ಎಂದರೆ ಸ್ಫೂರ್ತಿ ಎಂದರ್ಥ. ನಿಮಗೆ ಏನು ಸ್ಫೂರ್ತಿ ಎಂದು ನಮಗೆ ತಿಳಿಸಿ ಎಂದು ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಪೋಸ್ಟ್ ಮಾಡಿದೆ.
ಇದನ್ನೂ ಓದಿ: ದಿಟ್ಟ ಮಹಿಳೆಯ ಕಾಮಿಡಿ ಡ್ರಾಮಾ 'ರಘು ತಥಾ'.. ವಿಜಯ್ ಕಿರಗಂದೂರು ಏನ್ ಹೇಳಿದ್ದಾರೆ ಗೊತ್ತಾ?