ETV Bharat / entertainment

Oppenheimer: ಭಗವದ್ಗೀತೆಗೆ ಓಪನ್‌ಹೈಮರ್ ಚಿತ್ರದಲ್ಲಿ ಅಪಮಾನ ಆರೋಪ; ಅಣುಬಾಂಬ್‌ ಪಿತಾಮಹನ ಸಿನಿಮಾಗೆ ವಿರೋಧ

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಓಪನ್‌ಹೈಮರ್’ ಚಲನಚಿತ್ರದಲ್ಲಿ ಹಿಂದೂಗಳ ಪವಿತ್ರ ಗ್ರಂಥ 'ಭಗವದ್ಗೀತೆ'ಯ ಪ್ರತಿಯನ್ನು ಅಶ್ಲೀಲ ದೃಶ್ಯದ ಸಂದರ್ಭದಲ್ಲಿ ಬಳಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಲಿವುಡ್ ಓಪನ್‌ಹೈಮರ್ ಚಿತ್ರ
ಹಾಲಿವುಡ್ ಓಪನ್‌ಹೈಮರ್ ಚಿತ್ರ
author img

By

Published : Jul 24, 2023, 8:34 AM IST

ಮುಂಬೈ (ಮಹಾರಾಷ್ಟ್ರ): ಹಾಲಿವುಡ್​​ನ ಬಿಗ್‌ ಬಜೆಟ್‌​ ಮೂವಿಗಳಲ್ಲಿ ಒಂದಾದ 'ಓಪನ್‌ಹೈಮರ್' ಇದೀಗ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಗಂಭೀರ ಆರೋಪ ಎದುರಿಸುತ್ತಿದ್ದು ವಿವಾದದಲ್ಲಿ ಸಿಲುಕಿದೆ. ಜುಲೈ 21ರಂದು ವಿಶ್ವಾದ್ಯಂತ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಓಪನ್‌ಹೈಮರ್’ ಅಭಿಮಾನಿಗಳು, ವಿಮರ್ಶಕರಿಂದ ಮೆಚ್ಚಗೆಯನ್ನೇನೋ ಪಡೆಯಿತು. ಆದರೆ ಅದಕ್ಕೂ ಮಿಗಿಲಾಗಿ ಹಿಂದುಗಳ ಪವಿತ್ರ ಗ್ರಂಥ 'ಭಗವದ್ಗೀತೆ'ಗೆ ಅವಮಾನ ಮಾಡಿರುವುದು ಭಾರತೀಯ ವೀಕ್ಷಕರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.

ಅಂಥದ್ದೇನಿದೆ? : ಸಾಮಾಜಿಕ ಮಾಧ್ಯಮದ ವರದಿಗಳ ಪ್ರಕಾರ, ಚಲನಚಿತ್ರದಲ್ಲಿ ಮಹಿಳೆಯು ಲೈಂಗಿಕ ಕ್ರಿಯೆಯ ದೃಶ್ಯದಲ್ಲಿ ಪುರುಷನಿಗೆ ಭಗವದ್ಗೀತೆಯನ್ನು ಜೋರಾಗಿ ಓದುವಂತೆ ಹೇಳುವಂತಿದೆ. ವಿಜ್ಞಾನಿಗಳ ಜೀವನವನ್ನು ಆಧರಿಸಿದ ಚಿತ್ರ ಇಗಿದ್ದು, ಅಶ್ಲೀಲ ದೃಶ್ಯದಲ್ಲಿ ಮಹಿಳೆ ಒಂದು ಕೈಯಲ್ಲಿ ಭಗವದ್ಗೀತೆಯ ಪ್ರತಿಯನ್ನು ಹಿಡಿದಿರುವುದು ಹಿಂದು ಧರ್ಮೀಯರ ಭಾವನೆಗಳನ್ನು ಘಾಸಿಗೊಳಿಸಿದೆ ಎಂಬುದು ಆಕ್ಷೇಪ.

  • MOVIE OPPENHEIMER’S ATTACK ON BHAGWAD GEETA

    Press Release of Save Culture Save India Foundation

    Date: July 22, 2023

    It has come to the notice of Save Culture Save India Foundation that the movie Oppenheimer which was released on 21st July contains scenes which make a scathing… pic.twitter.com/RmJI0q9pXi

    — Uday Mahurkar (@UdayMahurkar) July 22, 2023 " class="align-text-top noRightClick twitterSection" data=" ">

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, "ಇದು ಬಾಲಿವುಡ್ ಚಿತ್ರದಲ್ಲಿನ ದೃಶ್ಯವಾಗಿದ್ದರೆ ಪ್ರದರ್ಶಿಸುವ ಥಿಯೇಟರ್‌ಗಳನ್ನು ಸುಟ್ಟು ಹಾಕಲಾಗುತ್ತಿತ್ತು" ಎಂದು ಟ್ವೀಟ್​ ಮಾಡಿದ್ದಾರೆ. "ಕಲೆಗೆ ಯಾವುದೇ ಗಡಿ ಇಲ್ಲ, ಆದರೆ ಓಪನ್‌ಹೈಮರ್‌ನ ಭಗವದ್ಗೀತೆಯ ದೃಶ್ಯವು ಸೃಜನಶೀಲ ಅಭಿವ್ಯಕ್ತಿಯ ಮಿತಿಗಳನ್ನು ಪರೀಕ್ಷಿಸುತ್ತದೆ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್‌ನ ಉದಯ್ ಮಹೂರ್ಕರ್, ಓಪನ್‌ಹೈಮರ್‌ ನಿರ್ಮಾಣ ಮಾಡಿರುವ ತಯಾರಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ. "ಭಗವದ್ಗೀತೆ ಪ್ರತಿಯನ್ನು ಒಳಗೊಂಡಿರುವ ದೃಶ್ಯವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ. ಚಲನಚಿತ್ರವು ಹಿಂದೂ ಧರ್ಮದ ಮೇಲೆ ಕಟು ದಾಳಿ ಮಾಡಿದೆ. ಶತಕೋಟಿ ಸಹಿಷ್ಣು ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

“ಶತಕೋಟಿ ಹಿಂದೂಗಳ ಪರವಾಗಿ, ನಮ್ಮ ಪೂಜ್ಯ ಪುಸ್ತಕದ ಘನತೆಯನ್ನು ಎತ್ತಿಹಿಡಿಯಲು, ಚಲನಚಿತ್ರದಿಂದ ಈ ದೃಶ್ಯವನ್ನು ತೆಗೆದುಹಾಕಲು ಅಗತ್ಯವಿರುವ ಎಲ್ಲ ಪ್ರಯತ್ನಕ್ಕಾಗಿ ನಾವು ಒತ್ತಾಯಿಸುತ್ತೇವೆ. ನಮ್ಮ ಮನವಿಯನ್ನು ನೀವು ನಿರ್ಲಕ್ಷಿಸಿದರೆ, ಅದು ಭಾರತೀಯ ನಾಗರಿಕತೆಯ ಮೇಲೆ ಉದ್ದೇಶಪೂರ್ವಕ ಆಕ್ರಮಣ ಎಂದೇ ಪರಿಗಣಿಸಲಾಗುತ್ತದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಓಪನ್‌ಹೈಮರ್ ಎರಡನೇ ಮಹಾಯುದ್ಧದ ಸಂದರ್ಭದ ಸಿನಿಮಾ. ಮುಖ್ಯವಾಗಿ 'ಅಣು ಬಾಂಬ್‌ನ ಪಿತಾಮಹ' ಎಂದು ಕರೆಯಲ್ಪಡುವ ಅಣು ವಿಜ್ಞಾನಿ ಓಪನ್‌ಹೈಮರ್​ನ ಜೀವನಚರಿತ್ರೆಯನ್ನೇ ಪ್ರಮುಖ ಕಥೆಯಾಗಿ ಹೊಂದಿದೆ. ಸಿನಿಮಾದಲ್ಲಿ ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್, ಫ್ಲಾರೆನ್ಸ್ ಪಗ್ ಮತ್ತು ಜ್ಯಾಕ್ ಕ್ವೈಡ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಅವನು ನಿನ್ನ ಮೇಲೆ ಕಣ್ಣಿಟ್ಟಿದ್ದಾನೆ!'.. 'ಜವಾನ್'​ ಸಿನಿಮಾದ ನಿಗೂಢ ಪೋಸ್ಟರ್​ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.