ETV Bharat / entertainment

ರಶ್ಮಿಕಾ - ರಣ್​ಬೀರ್ ಸಿನಿಮಾದ​ ರೊಮ್ಯಾಂಟಿಕ್​ ಸೀನ್ಸ್​ ಕಟ್: 'ಅನಿಮಲ್​​'ಗೆ A ಸರ್ಟಿಫಿಕೇಟ್!

ಅನಿಮಲ್​ ಸಿನಿಮಾದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಚಿತ್ರಕ್ಕೆ 'ಎ' ಸರ್ಟಿಫಿಕೇಟ್​ ಕೊಟ್ಟಿದೆ.

Animal movie
ಅನಿಮಲ್​ ಸಿನಿಮಾ
author img

By ETV Bharat Karnataka Team

Published : Nov 29, 2023, 7:45 PM IST

ರಣ್​​ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಬಹುನಿರೀಕ್ಷಿತ ಸಿನಿಮಾ ಅನಿಮಲ್ ಡಿಸೆಂಬರ್ 1 ರಂದು ತೆರೆಗಪ್ಪಳಿಸಲಿದೆ. ಭರ್ಜರಿ ಪ್ರಚಾರದ ಮೂಲಕ ಗಮನ ಸೆಳೆಯುತ್ತಿರುವ 'ಅನಿಮಲ್'​ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ 'A' ಸರ್ಟಿಫಿಕೇಟ್​​ ಪಡೆದಿದೆ ಎಂದು ಚಿತ್ರನಿರ್ಮಾಪಕರು ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ, ಸಿಬಿಎಫ್​​ಸಿ ಸಲಹೆ ಪ್ರಕಾರ ಪ್ರಮಾಣೀಕರಣಕ್ಕೂ ಮುನ್ನ ಸಿನಿಮಾದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ತೀರಾ ಆತ್ಮೀಯ ದೃಶ್ಯಗಳನ್ನೂ (intimate scene) ಕಟ್​​ ಮಾಡಲಾಗಿದೆ.

  • " class="align-text-top noRightClick twitterSection" data="">

ವರದಿಗಳ ಪ್ರಕಾರ, ಚಿತ್ರದಲ್ಲಿನ ಕೆಲ ಪದಗಳಲ್ಲಿ ಬದಲಾವಣೆ ತರಲಾಗಿದೆ. ಬ್ಲ್ಯಾಕ್​ ಮತ್ತು ಕಾಸ್ಟೂಮ್​ ವರ್ಡ್ಸ್​ ನಲ್ಲಿ ಮಾರ್ಪಾಡು ಮಾಡಲಾಗಿದೆ. ಬ್ಲ್ಯಾಕ್​ ಪದವನ್ನು ಹೇಗೆ ಮಾರ್ಪಡಿಸಲಾಗಿದೆ ಎಂಬುದನ್ನು ವಿವರಿಸದಿದ್ದರೂ, 'ಕಾಸ್ಟ್ಯೂಮ್​​' ಬದಲಿಗೆ 'ವಸ್ತ್ರ' ಎಂದು ಬಳಸಲಾಗಿದೆ. ಅಲ್ಲದೇ, "ಕಭಿ ನಹಿ" ಮತ್ತು "ಕ್ಯಾ ಬೋಲ್ ರಹೇ ಹೋ ಆಪ್" ನಂತಹ ಕೆಲ ಡೈಲಾಗ್ಸ್​ನಲ್ಲಿಯೂ ಬದಲಾವಣೆಗಳಾಗಿವೆ. ಡೈಲಾಗ್‌ಗಳಿಗೆ ತಕ್ಕಂತೆ ಸಿನಿಮಾದ ಸಬ್​ ಟೈಟಲ್ಸ್​ ಅನ್ನೂ ಬದಲಾಯಿಸಲಾಗಿದೆ. "ನಾಟಕ್" ಪದವನ್ನು ಮ್ಯೂಟ್ ಮಾಡಲಾಗಿದೆ. ಸಬ್​ ಟೈಟಲ್​ಗಳಲ್ಲಿ ಒಂದನ್ನು "ನೀವು ತಿಂಗಳಿಗೆ ನಾಲ್ಕು ಬಾರಿ ಪ್ಯಾಡ್ ಬದಲಾಯಿಸುತ್ತೀರಿ" ಎಂದು ಬದಲಾಯಿಸಲಾಗಿದೆ. ಮೊದಲಿದ್ದ ಸಬ್​ಟೈಟಲ್​ ಏನೆಂಬುದು ಸ್ಪಷ್ಟವಾಗಿಲ್ಲ.

ವಿಜಯ್ ಮತ್ತು ಜೋಯಾ ಪಾತ್ರಗಳ ಇಂಟಿಮೇಟ್ ಸೀನ್​ಗಳನ್ನೂ ಡಿಲೀಟ್​ ಮಾಡಲಾಗಿದೆ. ಚಿತ್ರದಲ್ಲಿ ಈ ಪಾತ್ರಗಳ ಪ್ರಾಮುಖ್ಯತೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಸಿನಿಮಾದ ಫೈನಲ್​ ಕಟ್ ಸುಮಾರು 203 ನಿಮಿಷಗಳಿವೆ. ಅಂದರೆ 3 ಗಂಟೆ 21 ನಿಮಿಷಗಳಿವೆ. ಯುನೈಟೆಡ್ ಕಿಂಗ್‌ಡಂನಲ್ಲಿ ಸಿನಿಮಾ 18+ ರೇಟಿಂಗ್ ಪಡೆದುಕೊಂಡಿದೆ. ಸಿನಿಮಾವನ್ನು "strong bloody violence" ಎಂದು ವಿವರಿಸಲಾಗಿದೆ. ಚಿತ್ರದಲ್ಲಿ ಹಿಂಸೆ, ಲೈಂಗಿಕ ಹಿಂಸೆ, ಲೈಂಗಿಕ ಬೆದರಿಕೆ, ಗಾಯಗಳ ದೃಶ್ಯಗಳು ಹೆಚ್ಚಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್​ ಬೆದರಿಕೆ: ಸಲ್ಮಾನ್ ಖಾನ್ ಭದ್ರತೆ ಪರಿಶೀಲಿಸಿದ ಪೊಲೀಸರು!

ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ನಟ ಅನಿಲ್ ಕಪೂರ್ ಮತ್ತು ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಣ್​ಬೀರ್ ತಂದೆಯಾಗಿ ಅನಿಲ್ ಕಪೂರ್ ನಟಿಸಿದ್ದರೆ, ರಣ್​​ಬೀರ್ ಪತ್ನಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಬಾಬಿ ಡಿಯೋಲ್​ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಡಿಸೆಂಬರ್ 1 ರಂದು ಅಂದರೆ ನಾಡಿದ್ದು ತಮಿಳು, ಮಲಯಾಳಂ, ತೆಲುಗು, ಹಿಂದಿ, ಮತ್ತು ಕನ್ನಡ ಸೇರಿ ಪಂಚಭಾಷೆಗಳಲ್ಲಿ ಅನಿಮಲ್​ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: 17 ವರ್ಷಗಳ ಮುನಿಸು: ನಿರ್ದೇಶಕ ಅಮೀರ್​ ಬಳಿ ಕ್ಷಮೆಯಾಚಿಸಿದ ನಿರ್ಮಾಪಕ ಜ್ಞಾನವೇಲ್ ರಾಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.