ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಭಾರತೀಯ ಬಹುಬೇಡಿಕೆ ನಟಿಯರಲ್ಲೊಬ್ಬರು. ಹಲವು ಯಶಸ್ವಿ ಸಿನಿಮಾಗಳನ್ನು ಕೊಟ್ಟು, ಅಪಾರ ಸಂಖ್ಯೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಯಾರ ಹಂಗಿಲ್ಲದೇ ಜೀವನ ನಡೆಸುತ್ತಿರುವ ಇಂಡಿಪೆಂಡೆಂಟ್ ಸ್ಟ್ರಾಂಗ್ ಮಹಿಳೆ ಈಗ ''ನಿಮಗೆ ಬೇಕಾದಂತೆ ನೀವಿರಿ'' ಎಂದು ಹೇಳಿದ್ದಾರೆ. ಜೀವನ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
- ಕೋಪ ಕರಗಿಸಲು ವರ್ಕ್ಔಟ್: ನನಗೆ ಕೋಪ ಬಂದಾಗಲೆಲ್ಲ ಜಿಮ್‌ಗೆ ಹೋಗುತ್ತೇನೆ. ಉತ್ತಮ ವ್ಯಾಯಾಮ ಮಾಡಿದರೆ ಕೋಪವು ಶೀಘ್ರದಲ್ಲೇ ಕಡಿಮೆಯಾಗುತ್ತದೆ. ಉತ್ಸಾಹ ಮೂಡುತ್ತದೆ ಎಂದಿದ್ದಾರೆ.
- ಹಣ ಮತ್ತು ಖ್ಯಾತಿಗೆ ಹೆದರುವುದಿಲ್ಲ: ನನಗೆ ನಟನೆ ಬಹಳ ಮುಖ್ಯ. ಪ್ರತಿ ಪಾತ್ರವನ್ನು ಪ್ರೀತಿಸಿ ಅದಕ್ಕೆ ಜೀವ ತುಂಬುವ ಕೆಲಸ ಮಾಡುತ್ತೇನೆ. ನೀವು ಮಾಡುತ್ತಿರುವ ಕೆಲಸವನ್ನು ನೀವು ಪ್ರೀತಿಸದಿದ್ದರೆ ಅದರಲ್ಲಿ ಯಾವುದೇ ಸಂತೋಷ ಸಿಗುವುದಿಲ್ಲ ಅಥವಾ ಪ್ರಯೋಜನವೂ ಆಗುವುದಿಲ್ಲ ಎಂದಿದ್ದಾರೆ. ಹಣ ಮತ್ತು ಖ್ಯಾತಿಗೆ ಹೆದರುವುದಿಲ್ಲ. ನನ್ನ ಕೆಲಸ ಉತ್ತಮವಾಗಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
- ನಾನು ನನ್ನ ದೊಡ್ಡ ವಿಮರ್ಶಕ: ನಮ್ಮ ತಪ್ಪುಗಳನ್ನು ತಿಳಿದಾಗ ಮಾತ್ರ ನಾವು ನಮ್ಮ ವೃತ್ತಿಜೀವನದಲ್ಲಿ ಮುಂದೆ ಸಾಗಲು ಸಾಧ್ಯ. ನನಗೆ ನಾನೇ ದೊಡ್ಡ ವಿಮರ್ಶಕ ಎಂದಿದ್ದಾರೆ.
- ಸಮಯ ಸರಿಯಿಲ್ಲದಿದ್ದಾಗ..: ಸಮಯ ಸರಿಯಿಲ್ಲದಿದ್ದಾಗ ನಮಗೆ ಯಾವುದೂ ಸರಿ ಆಗುವುದಿಲ್ಲ. ಆ ಸಮಯದಲ್ಲಿ ನಾನು ಕುಳಿತು ಯೋಚಿಸಿ ಬಳಲುವುದಿಲ್ಲ. ಯೋಚಿಸುವುದನ್ನು ನಿಲ್ಲಿಸಿ, ನಿದ್ದೆ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.
- ನೀವು ನೀವಾಗಿರಿ: ನೀವು ಈ ಭೂಮಿಗೆ ಬಂದಿರುವುದು ಇತರರನ್ನು ಮೆಚ್ಚಿಸಲು ಅಲ್ಲ. ನೀವು ನೀವಾಗಿರಿ, ನಿಮಗೆ ಬೇಕಾದಂತೆ ಬದುಕಿ ಎಂದು ತಿಳಿಸಿದ್ದಾರೆ
- ಪ್ರೀತಿ: ನಮ್ಮಲ್ಲಿರುವುದನ್ನು ಪ್ರೀತಿಸಲು ಆರಂಭಿಸಿದರೆ ನಮಗೆ ಬೇಕಾದುದೆಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನೀವು ನಿಮ್ಮ ಜೀವನವನ್ನು ಪ್ರೀತಿಸಿ, ನಿಮ್ಮ ಕೆಲಸವನ್ನು ಪ್ರೀತಿಸಿ ಎಂದಿದ್ದಾರೆ.
ಇದನ್ನೂ ಓದಿ: ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು: ದೀಪಿಕಾ ಪರ ನಿಂತ ನಟಿ ರಮ್ಯಾ
ಸಮಂತಾ ಅವರು ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಸಾಕಷ್ಟು ಭಾರೀ ಟ್ರೋಲ್ಗೊಳಗಾದರು. ಇತ್ತೀಚೆಗೆ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿದ್ದು, ಆ ವಿಷಯವಾಗಿಯೋ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಯಿತು. ಅದಾಗ್ಯೂ, ಯಾವುದಕ್ಕೂ ಕುಗ್ಗದೇ ತಮ್ಮ ವೃತ್ತಿಜೀವನದಲ್ಲಿ ಸಮಂತಾ ಉತ್ತಮವಾಗಿ ಮುನ್ನಡೆಯುತ್ತಿದ್ದಾರೆ.
ನಟಿ ರಮ್ಯಾ ಟ್ವೀಟ್: ಇನ್ನೂ ಪಠಾಣ್ ಚಿತ್ರದ ಬೇಶರಂ ರಂಗ್ ವಿವಾದದ ಕುರಿತು ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸುವ ವೇಳೆ ನಟಿ ಸಮಂತಾ ಅವರ ಹೆಸರನ್ನು ಉಲ್ಲೇಖಿಸಿದ್ದರು. ''ಡಿವೋರ್ಸ್ ವಿಚಾರಕ್ಕೆ ಸಮಂತಾ ರುತ್ ಪ್ರಭು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಯಿಪಲ್ಲವಿ, ಪ್ರೀತಿಸಿ ಬೇರೆಯಾಗಿದ್ದಕ್ಕೆ ರಶ್ಮಿಕಾ, ಬಟ್ಟೆ ವಿಚಾರಕ್ಕೆ ದೀಪಿಕಾ ಅವರನ್ನು ಟ್ರೋಲ್ ಮಾಡಲಾಗಿದೆ.
ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲ ಹಕ್ಕು. ಮಹಿಳೆಯರು ಮಾ ದುರ್ಗೆಯ ಸ್ವರೂಪ. ಸ್ತ್ರೀ ದ್ವೇಷಿಗಳ ವಿರುದ್ಧ ನಾವು ಹೋರಾಡಬೇಕಿದೆ'' ಎಂದು ಹೇಳುವ ಮೂಲಕ ದೀಪಿಕಾ ಪಡುಕೋಣೆ ಪರ ನಟಿ ರಮ್ಯಾ ಟ್ವೀಟ್ ಮಾಡಿದ್ದರು.