ETV Bharat / entertainment

ಬಹುನಿರೀಕ್ಷಿತ ​​'ಇಂಡಿಯನ್ ಪೊಲೀಸ್ ಫೋರ್ಸ್‌' ಟೀಸರ್​ ರಿಲೀಸ್ - Indian Police Force teaser

ಬಹುನಿರೀಕ್ಷಿತ ​​'ಇಂಡಿಯನ್ ಪೊಲೀಸ್ ಫೋರ್ಸ್‌'ನ ಟೀಸರ್​ ಅನಾವರಣಗೊಂಡಿದೆ.

Indian Police Force
ಇಂಡಿಯನ್ ಪೊಲೀಸ್ ಫೋರ್ಸ್‌
author img

By ETV Bharat Karnataka Team

Published : Dec 16, 2023, 2:26 PM IST

ಬಾಲಿವುಡ್​​ನ ಹ್ಯಾಡ್ಸಂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್​​ 'ಇಂಡಿಯನ್ ಪೊಲೀಸ್ ಫೋರ್ಸ್‌'. ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲು ಸಜ್ಜಾಗಿರುವ ಈ ವೆಬ್​ ಸೀರಿಸ್​ನ ಟೀಸರ್​​ ಅನಾವರಣಗೊಂಡಿದೆ. ಮುಂದಿನ ತಿಂಗಳು ಒಟಿಟಿ ಪ್ಲಾಟ್​ಫಾರ್ಮ್​​ನಲ್ಲಿ ಪ್ರಸಾರ ಪ್ರಾರಂಭಿಸಲು ಸಜ್ಜಾಗಿರುವ ಈ ಸೀರಿಸ್​​ನ ಟೀಸರ್​ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಸೂಪರ್​​ ಹಿಟ್​​ ಶೇರ್ಷಾ ಸಿನಿಮಾದ ಯಶಸ್ಸಿನ ನಂತರ ಖಾಕಿ ತೊಟ್ಟ ಮತ್ತೊಂದು ಪಾತ್ರ ಚಿತ್ರಿಸಲು ಸಜ್ಜಾಗಿದ್ದಾರೆ. ಈ ಬಾರಿ, ರೋಹಿತ್ ಶೆಟ್ಟಿ ನಿರ್ದೇಶನದ ವೆಬ್ ಸರಣಿ 'ಇಂಡಿಯನ್ ಪೊಲೀಸ್ ಫೋರ್ಸ್‌'ನಲ್ಲಿ ಖಡಕ್​ ಕುಕ್​ನೊಂದಿಗೆ ಬರಲಿದ್ದಾರೆ. ಖ್ಯಾತ ಕಲಾವಿದರಾದ ಶಿಲ್ಪಾ ಶೆಟ್ಟಿ ಮತ್ತು ವಿವೇಕ್ ಒಬೆರಾಯ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಸೀರಿಸ್​ ನಿರ್ಮಾಪಕರು ಇಂದು ತಮ್ಮ ಇಂಡಿಯನ್ ಪೊಲೀಸ್ ಫೋರ್ಸ್‌ನ ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಅನ್ನು ಅನಾವರಣಗೊಳಿಸಿ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದ್ದಾರೆ. SWAT ತಂಡದ ನಾಯಕ, ಎಸ್‌ಪಿ ಕಬೀರ್ ಮಲಿಕ್ ಪಾತ್ರವನ್ನು ಸಿದ್ಧಾರ್ಥ್ ಮಲ್ಹೋತ್ರಾ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಅಮಿತಾಭ್​, ಐಶ್ವರ್ಯಾ, ಶಾರುಖ್​​​ ಡ್ಯಾನ್ಸ್ ವಿಡಿಯೋ ವೈರಲ್​​; ಅಭಿಮಾನಿಗಳಿಂದ ಪ್ರೀತಿಯ ಮಳೆ

'ಇಂಡಿಯನ್ ಪೊಲೀಸ್ ಫೋರ್ಸ್‌' ಟಿಸರ್​ ಒಂದು ನಿಮಿಷ, ಹನ್ನೆರಡು ಸೆಕೆಂಡುಗಳಿವೆ. ಸರಣಿ ಬಾಂಬ್ ಸ್ಟೋಟದ ಚಿತ್ರಣದೊಂದಿಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಂತರದ ದೃಶ್ಯಗಳಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್ ಒಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಅವರ ಆ್ಯಕ್ಷನ್​ ಸೀನ್​ಗಳು ಕಂಡುಬರುತ್ತವೆ. ರೋಹಿತ್ ಶೆಟ್ಟಿಯವರ ನಿರ್ದೇಶನ ಶೈಲಿ ಈ ಟೀಸರ್​ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಟೀಸರ್​ ಉತ್ತಮ ವೀಕ್ಷಣೆ ಪಡೆದುಕೊಳ್ಳುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ 'ಸಲಾರ್​'ನ ಮೊದಲ ಟಿಕೆಟ್ ಖರೀದಿಸಿದ ಬಾಹುಬಲಿ ನಿರ್ದೇಶಕ ರಾಜಮೌಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.