ETV Bharat / entertainment

ಹೊಯ್ಸಳ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ - ಹೊಯ್ಸಳ ಚಿತ್ರದ ಬಿಡಗಡೆ

ಹೊಯ್ಸಳ ಚಿತ್ರದ ಶೂಟಿಂಗ್​ ಸ್ಥಳಕ್ಕೆ ಟೀಂ ಇಂಡಿಯಾದ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ ಭೇಟಿ-​ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡ ಡಾಲಿ ಧನಂಜಯ್

Indian Cricketer Veda Krishnamurthy Visits Hoysala Shooting Spot

author img

By

Published : Jul 7, 2022, 4:56 PM IST

ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ್ ಹೊಯ್ಸಳ ಎಂಬ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಬಿಡುಗಡೆಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ. ಧನಂಜಯ್ ಅಭಿನಯಿಸುತ್ತಿರುವ 25ನೇ ಸಿನಿಮಾ ಇದಾಗಿದ್ದು, ಕಳೆದ ಕೆಲವು ದಿನಗಳಿಂದ ಭರದಿಂದ ಚಿತ್ರೀಕರಣ ನಡೆಯುತ್ತಿದೆ.

ಇದೀಗ ಚಿತ್ರೀಕರಣದ ಸ್ಥಳದಲ್ಲಿ ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್​ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಹೊಯ್ಸಳ ಸಿನಿಮಾ ಸೆಟ್​​ನಲ್ಲಿ ವೇದಾ ಕೃಷ್ಣಮೂರ್ತಿ ಅವರು ಕಾಣಿಸಿಕೊಂಡಿರುವ ಫೋಟೋವನ್ನು ಸ್ವತಃ ಧನಂಜಯ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿಗೆ ಏನು ಬರೆಯದ ಅವರು ಭೇಟಿ ನೀಡಿರುವುದನ್ನು ಮಾತ್ರ ಉಲ್ಲೇಖಿಸಿ ಪೋಸ್ಟ್​ ಮಾಡಿದ್ದಾರೆ. ಆದರೆ, ಈ ಭೇಟಿ ಸಿನಿಮಾ ವಲಯದಲ್ಲಿ ಕುತೂಹಲ ಮೂಡಿಸಿದೆ. ಕಾರಣ ವೇದಾ ಕೃಷ್ಣಮೂರ್ತಿ ಇತ್ತೀಚೆಗೆ ಸಿನಿಮಾ ನಟರನ್ನು ಹೆಚ್ಚು ಭೇಟಿ ಮಾಡುತ್ತಿದ್ದು, ಹೊಯ್ಸಳ ಚಿತ್ರದಲ್ಲೇನಾದರೂ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಹುಟ್ಟುಹಾಕಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇತ್ತೀಚೆಗೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ವೇದಾ ಸಖತ್ ಸ್ಟೆಪ್ ಹಾಕಿದ್ದರು. ಆ ವಿಡಿಯೋ ವೈರಲ್ ಕೂಡ ಆಗಿದೆ.

Indian Cricketer Veda Krishnamurthy Visits Hoysala Shooting Spot
ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಾ ಕೃಷ್ಣಮೂರ್ತಿ

ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್​ ನೀಡುವ ಯೋಜನೆಗೆ ಚಾಮರಾಜನಗರ ಮತ್ತು ದಕ್ಷಿಣ ಕನ್ನಡದಲ್ಲಿ ಚಾಲನೆ ನೀಡಲಾಗಿದ್ದು, ಈ ಕಾರ್ಯಕ್ರಮದಲ್ಲಿಯೂ ಸಹ ವೇದಾ ಕೃಷ್ಣಮೂರ್ತಿ ಕಾಣಿಸಿಕೊಂಡಿದ್ದರು. ಸ್ವತಃ ಅವರೇ ಪೋಸ್ಟರ್ ಬಿಡುಗಡೆಗೊಳಿಸಿ ವಿದ್ಯಾರ್ಥಿನಿಯರಿಗೆ ಮೆನ್ಸ್ಟ್ರುವಲ್ ಕಪ್​​ಗಳನ್ನು ವಿತರಿಸಿದ್ದರು‌. ನಟಿ ಅಮೃತಾ ಅಯ್ಯಂಗಾರ್ ಕೂಡ ಹಾಜರಿದ್ದರು.

ಡಾಲಿ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಖತ್​ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಗಣೇಶ್ ಅಭಿನಯದ ಗೀತಾ ಚಿತ್ರವನ್ನ ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಾಹಸ ನಿರ್ದೇಶಕರಾದ ದಿಲೀಪ್ ಸುಬ್ರಹ್ಮಣ್ಯ ಹಾಗೂ ಅರ್ಜುನ್ ಮಾಸ್ಟರ್ ಸಾಹಸ ಸಂಯೋಜನೆಯಲ್ಲಿ ಸಾಹಸ ಸನ್ನಿವೇಶಗಳನ್ನ ಚಿತ್ರೀಕರಣ ಮಾಡುತ್ತಿದೆ. ಸದ್ಯ ಬೈರಾಗಿ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ಧನಂಜಯ್ ಹೆಡ್ ಬುಷ್, Once upon a time in ಜಮಾಲಿಗುಡ್ಡ ಎಂಬ ಚಿತ್ರದಲ್ಲಿಯೂ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.