ETV Bharat / entertainment

'ಭಾರತ ಅಂದ್ರೆ ಕೇವಲ ಹಿಂದಿ, ಬಾಲಿವುಡ್ ಮಾತ್ರವಲ್ಲ': ಆಸ್ಕರ್‌ ಸಾಧನೆ ಮೆಚ್ಚಿ ನಟಿ ರಮ್ಯಾ ಟ್ವೀಟ್‌ - ನಟಿ​ ರಮ್ಯಾ ಟ್ವೀಟ್​

ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ‘ದ ಎಲಿಫೆಂಟ್‌ ವಿಸ್ಪರರ್ಸ್‌’ ಮತ್ತು ಆರ್​ಆರ್​ಆರ್​ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಕನ್ನಡ ನಟಿ ರಮ್ಯಾ ಇದೇ ಸಂದರ್ಭದಲ್ಲಿ ಹಿಂದಿ ಹೇರಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ramya
ನಟಿ ರಮ್ಯಾ
author img

By

Published : Mar 15, 2023, 7:18 AM IST

'ಹಿಂದಿ ಭಾಷೆಯ ಹೇರಿಕೆ'ಯ ಕುರಿತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುತ್ತದೆ. ಇದೀಗ ಸ್ಯಾಂಡಲ್​ವುಡ್​ ನಟಿ​ ರಮ್ಯಾ ಅವರು ಕೂಡ ಸಾಂದರ್ಭಿಕವಾಗಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ತೆಲುಗಿನ ಆರ್​ಆರ್​ಆರ್ ಸಿನಿಮಾ ಮತ್ತು ದ ಎಲಿಫೆಂಟ್‌ ವಿಸ್ಪರರ್ಸ್‌ ಕಿರು ಸಾಕ್ಷ್ಯಚಿತ್ರ ಆಸ್ಕರ್ ಅವಾರ್ಡ್​ ಗೆದ್ದ ದಿನದಂದು ಟ್ವೀಟ್ ಮಾಡಿರುವ ನಟಿ, "ಭಾರತ ಅಂದರೆ ಕೇವಲ ಹಿಂದಿಯಲ್ಲ, ಬಾಲಿವುಡ್ ಮಾತ್ರವಲ್ಲ" ಎಂದಿದ್ದಾರೆ. ಜೊತೆಗೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಟೋ ಚಾಲಕ ಮತ್ತು ಹಿಂದಿ ಮಾತನಾಡುವ ಯುವತಿಯ ವಿಡಿಯೋವೊಂದನ್ನು ಸಹ ಟ್ವೀಟ್‌ನೊಂದಿಗೆ ಲಗತ್ತಿಸಿದ್ದಾರೆ.

  • I’m also really glad Naatu Naatu was performed in Telugu - about time the world knows that India is a diverse country of different cultures and languages. India is not just Hindi. India is not just Bollywood. Stereotyping is lazy thinking. https://t.co/fGPhAMwkzX

    — Ramya/Divya Spandana (@divyaspandana) March 13, 2023 " class="align-text-top noRightClick twitterSection" data=" ">

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಮ್ಯಾ, ಪ್ರಸಕ್ತ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಹಿಂದಿ ಹೇರಿಕೆಯ ವಿರುದ್ಧ ಅಭಿಪ್ರಾಯ ಹಂಚಿಕೊಂಡಿದ್ದು, ರಮ್ಯಾ ಟ್ವೀಟ್​ಗೆ ನೆಟ್ಟಿಗರಿಂದ ಬೆಂಬಲ ವ್ಯಕ್ತವಾಗಿದೆ.

  • Many many congratulations from a fellow Hildite Kartiki! @EarthSpectrum I haven’t watched the documentary, I have a very fragile heart when it comes to animals- I hope to find the strength to watch it soon ♥️♥️🌻🌻😽😽 https://t.co/DBASg7UhLR

ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾಟು ನಾಟು ಹಾಡನ್ನು ತೆಲುಗಿನಲ್ಲಿ ಪ್ರದರ್ಶನ ಮಾಡಿರುವುದು ನನಗೆ ಖುಷಿಯಾಯಿತು ಎಂದು ‘RRR’ ಚಿತ್ರತಂಡಕ್ಕೆ ಅಭಿನಂದಿಸಿದ ರಮ್ಯಾ, "ಭಾರತವು ಹಲವು ಭಾಷೆ, ಸಂಸ್ಕೃತಿಯುಳ್ಳ ವೈವಿಧ್ಯಮಯ ದೇಶ ಎಂದು ಇಡೀ ವಿಶ್ವವೇ ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ. ಭಾರತ ಎಂದರೆ ಕೇವಲ ಹಿಂದಿ ಭಾಷೆಯಲ್ಲ. ಭಾರತ ಅಂದರೆ ಕೇವಲ ಬಾಲಿವುಡ್ ಮಾತ್ರವಲ್ಲ. ಈ ರೀತಿಯ ರೂಢಿಗತ ಚಿಂತನೆ ಸರಿಯಲ್ಲ" ಎಂದು ಹೇಳಿದ್ದಾರೆ. ಇದರ ಜೊತೆಗೆ, ಬೆಂಗಳೂರಿನ ಇತ್ತೀಚೆಗೆ ಆಟೋ ಚಾಲಕನೊಬ್ಬ ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವತಿಯೊಂದಿಗೆ ಕನ್ನಡಾಭಿಮಾನ ಮೆರೆದ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ಇದನ್ನೂ ಓದಿ: RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಗರಿ!

ವಿಡಿಯೋದಲ್ಲೇನಿದೆ?: ಈ ವಿಡಿಯೋದಲ್ಲಿ ಯುವತಿಯೊಬ್ಬಳು ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಚಾಲಕ​, ನಾನು ಯಾಕೆ ಹಿಂದಿಯಲ್ಲಿ ಮಾತನಾಡಲಿ?, ನೀವು ಇರುವುದು ಕರ್ನಾಟಕದಲ್ಲಿ, ಮೊದಲು ಕನ್ನಡ ಮಾತನಾಡಿ ಎಂದು ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾನೆ. ಆ ಬಳಿಕ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಯುವತಿ ಆಟೋದಿಂದ ಕೆಳಕ್ಕಿಳಿದಿರುವುದನ್ನು ಕಾಣಬಹುದು.

ಇದನ್ನೂ ಓದಿ: 'ದ ಎಲಿಫೆಂಟ್‌ ವಿಸ್ಪರರ್ಸ್‌' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್‌ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?

ಇದೇ ವೇಳೆ ಆಸ್ಕರ್ ಪ್ರಶಸ್ತಿ ಗೆದ್ದ 'ದ ಎಲಿಫೆಂಟ್ ವಿಸ್ಪರರ್ಸ್' ಕಿರು ಸಾಕ್ಷ್ಯಚಿತ್ರದ ಕುರಿತಾಗಿಯೂ ಟ್ವೀಟ್ ಮಾಡಿರುವ ನಟಿ, ಈ ಡಾಕ್ಯುಮೆಂಟರಿಯ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್​ ಅವರಿಗೆ ಅಭಿನಂದನೆಗಳು. ನಾನು ಇನ್ನೂ ಈ ಡಾಕ್ಯುಮೆಂಟರಿ ನೋಡಿಲ್ಲ. ಪ್ರಾಣಿಗಳ ವಿಷಯಕ್ಕೆ ಬಂದಾಗ ತುಂಬಾ ದುರ್ಬಲ ಹೃದಯ ಹೊಂದಿದ್ದೇನೆ, ಬೇಗ ಕರಗಿ ಹೋಗುತ್ತೇನೆ. ಶೀಘ್ರದಲ್ಲೇ 'ದ ಎಲಿಫೆಂಟ್ ವಿಸ್ಪರರ್ಸ್' ನೋಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ''ನಾವು ಗೆದ್ದೆವು'' - ಭಾರತದ ಆಸ್ಕರ್​ ಸಾಧನೆಯನ್ನು ಕೊಂಡಾಡಿದ ನಟ ಅಮಿತಾಭ್​ ಬಚ್ಚನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.