ETV Bharat / entertainment

ಬಾರ್ಬಿ ಮತ್ತು ಕೆನ್ ಪಾತ್ರದಲ್ಲಿ ಹೃತಿಕ್​ ರೋಷನ್ - ಕಂಗನಾ ರಣಾವತ್ ಮೋಡಿ: ವಿಡಿಯೋ ನೋಡಿ - etv bharat kannada

watch video: ಡೀಪ್‌ಫೇಕ್ ಕಲಾವಿದರು ತಯಾರಿಸಿರುವ ವಿಡಿಯೋದಲ್ಲಿ ಕಂಗನಾ ರಣಾವತ್​ ಮತ್ತು ಹೃತಿಕ್​ ರೋಷನ್​ ಅವರನ್ನು ಬಾರ್ಬಿ ಮತ್ತು ಕೆನ್​ ಪಾತ್ರಗಳಲ್ಲಿ ಚಿತ್ರಿಸಲಾಗಿದೆ.

Barbie universe
ಕಂಗನಾ ರಣಾವತ್​ ಮತ್ತು ಹೃತಿಕ್ ರೋಷನ್
author img

By

Published : Jul 29, 2023, 5:40 PM IST

ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್ ಕೆಲ ಕಾಲ ಡೇಟಿಂಗ್​ನಲ್ಲಿದ್ದರು ಎಂಬ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಈಗಲೂ ಕೇಳಿಬರುತ್ತಿದೆ. 'ಮದುವೆಯಾಗುವುದಾಗಿ ನಂಬಿಸಿ ನನಗೆ ಹೃತಿಕ್ ರೋಷನ್ ಮೋಸ ಮಾಡಿದ್ದಾರೆ' ಎಂದು ಕಂಗನಾ ಈ ಹಿಂದೆ ನೇರವಾಗಿಯೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಅದಾದ ಬಳಿಕ ಹೃತಿಕ್​ ಮತ್ತು ಕಂಗನಾ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಇದೀಗ ಇವರಿಬ್ಬರ ಬಾರ್ಬಿ ಮತ್ತು ಕೆನ್​ ವಿಡಿಯೋವೊಂದು ಟ್ರೆಂಡಿಂಗ್​ನಲ್ಲಿದೆ.

  • " class="align-text-top noRightClick twitterSection" data="">

'ದಿ ಇಂಡಿಯನ್ ಡೀಪ್‌ಫೇಕರ್' ಎಂದು ಕರೆಯಲ್ಪಡುವ ಡೀಪ್‌ಫೇಕ್ (ನಕಲು) ಕಲಾವಿದರು ಇತ್ತೀಚೆಗೆ ಒಂದು ವಿಡಿಯೋವನ್ನು ತಯಾರಿಸಿದ್ದಾರೆ. ಇದರಲ್ಲಿ ಕಂಗನಾ ರಣಾವತ್​ ಮತ್ತು ಹೃತಿಕ್​ ರೋಷನ್​ ಅವರನ್ನು ಬಾರ್ಬಿ ಮತ್ತು ಕೆನ್​ ಪಾತ್ರಗಳಲ್ಲಿ ಚಿತ್ರಿಸಲಾಗಿದೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕಿ ಗ್ರೆಟಾ ಗೆರ್ವಿಗ್ ನಿರ್ದೇಶನದ 'ಬಾರ್ಬಿ' ಚಿತ್ರ ಬಿಡುಗಡೆಯಾಗಿದೆ. ಇದರಲ್ಲಿ ಬಾರ್ಬಿ ಮತ್ತು ಕೆನ್​ ಪಾತ್ರಗಳಲ್ಲಿ ರಯಾನ್ ಗೊಸ್ಲಿಂಗ್ ಮತ್ತು ಮಾರ್ಗಾಟ್ ರಾಬಿ ನಟಿಸಿದ್ದಾರೆ. ಇದರ ಪ್ರಕಾರದಂತೆ ಡೀಪ್​ಫೇಕ್​ ಕಲಾವಿದರು ತಯಾರಿಸಿರುವ ವಿಡಿಯೋದಲ್ಲಿ ಬಾರ್ಬಿ ಮತ್ತು ಕೆನ್​ ಆಗಿ ಕಂಗನಾ ಮತ್ತು ಹೃತಿಕ್​ರನ್ನು ತೋರಿಸಲಾಗಿದೆ.

ವಿಡಿಯೋದಲ್ಲೇನಿದೆ?: ಡೀಪ್‌ಫೇಕ್ ಕಲಾವಿದರು ಮಾಡಿರುವ ವಿಡಿಯೋದಲ್ಲಿ ಕಂಗನಾ ರಣಾವತ್​ ಅವರು ಮಾರ್ಗಾಟ್ ರಾಬಿ ಅಂತೆಯೇ ಕಾಣುತ್ತಾರೆ. ತಮ್ಮ ಕೌಶಲ್ಯದಿಂದ ಕಂಗನಾಗೆ ಹೊಂಬಣ್ಣದ ಕೂದಲಿನ ಜೊತೆ ಗುಲಾಬಿ ಬಣ್ಣದ ದಿರಿಸಿನಲ್ಲಿ ಅದ್ಭುತವಾಗಿ ಕಾಣುವಂತೆ ಮಾಡಿದ್ದಾರೆ. ಬಿಳುಪಾಗಿಸಿದ ಹೊಂಬಣ್ಣದ ಕೂದಲಿನಿಂದ ಕೆನ್​ ಪಾತ್ರಕ್ಕೆ ಹೃತಿಕ್​ ರೋಷನ್​ ಸೂಕ್ತವಾದ ಆಯ್ಕೆಯಾಗಿದೆ. ಕಂಗನಾ ಮತ್ತು ಹೃತಿಕ್​ ರೋಷನ್​ ಅವರ ಈ ಮೋಡಿ ಮಾಡುವ ವಿಡಿಯೋ ಅನೇಕರ ಮನಸ್ಸನ್ನು ಗೆದ್ದಿದೆ.

ಏನಿದು ಡೀಪ್​ಫೇಕ್​?: 'ಡೀಪ್‌ಫೇಕ್' ಅನ್ನೋದು ಒಂದು ತಂತ್ರಜ್ಞಾನ. ಇದರ ಮೂಲಕ ಒಂದು ಚಿತ್ರಕ್ಕೆ ಮತ್ತೊಬ್ಬರನ್ನು ಎಡಿಟ್​ ಮಾಡಬಹುದು. ಧ್ವನಿ ಬದಲಾಯಿಸಬಹುದು. ಒಬ್ಬ ವ್ಯಕ್ತಿಯನ್ನು ಯಾವ ರೀತಿಯಲ್ಲಿ ಬೇಕಾದರೂ ತೋರಿಸಬಹುದು.

ಬಾರ್ಬಿ ಸಿನಿಮಾ... ಇನ್ನೂ ಹಾಲಿವುಡ್ ನಿರ್ದೇಶಕಿ ಗ್ರೆಟಾ ಗೆರ್ವಿಗ್ ನಿರ್ದೇಶನದ 'ಬಾರ್ಬಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜುಲೈ 21 ರಂದು (ಶುಕ್ರವಾರ) ವಿಶ್ವದಾದ್ಯಂತ ಓಪನ್‌ಹೈಮರ್ ಸಿನಿಮಾದೊಂದಿಗೆ ಬಿಡುಗಡೆಯಾಗಿ ಕಲೆಕ್ಷನ್​ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ. ಕೆನ್ ಆಗಿ ರಯಾನ್ ಗೊಸ್ಲಿಂಗ್ ಜೊತೆಗೆ ಮಾರ್ಗಾಟ್ ರಾಬಿ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿದೆ. ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್ ಅನ್ನು ಮೀರಿಸಿದೆ. ಬಾರ್ಬಿ ಭಾರತದಲ್ಲಿ ಕಡಿಮೆ ಕಲೆಕ್ಷನ್​ ಮಾಡಿದರೂ, ವಿಶ್ವಾದ್ಯಂತ ಉತ್ತಮ ಗಳಿಕೆ ಕಂಡಿದೆ.

ಇನ್ನೂ ಹೃತಿಕ್ ರೋಷನ್​ ಅವರ ಸಿನಿಮಾ ವಿಚಾರವಾಗಿ ಹೇಳುವುದಾದರೆ, ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿರುವ ಸಿದ್ಧಾರ್ಥ್ ಆನಂದ್ ಅವರ ಫೈಟರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ತೆರೆ ಹಂಚಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನಿಂದ ತಯಾರಾಗುತ್ತಿರುವ ವಾರ್ 2 ಸಿನಿಮಾದಲ್ಲೂ ಅಭಿನಯಿಸುತ್ತಿದ್ಧಾರೆ.

ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್​ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಲ್ಲದೇ, ಹೃತಿಕ್ ತನ್ನ ವಾರ್​ ಸಿನಿಮಾದ ಸಹ-ನಟಿ ವಾಣಿ ಕಪೂರ್ ಅವರೊಂದಿಗೆ ಸ್ಟಾರ್ಸ್ ಆನ್ ಫೈರ್ ಎಂಬ UK ಪ್ರವಾಸದ ತಂಡವನ್ನು ಸೇರಿಕೊಂಡಿದ್ದಾರೆ. ಇದು ಸೆಪ್ಟೆಂಬರ್ 1 ರಂದು OVO ಅರೆನಾ, ವೆಂಬ್ಲಿ, ಲಂಡನ್ ಮತ್ತು ಸೆಪ್ಟೆಂಬರ್ 2 ರಂದು ಲೀಡ್ಸ್‌ನ ಫಸ್ಟ್ ಡೈರೆಕ್ಟ್ ಅರೆನಾದಲ್ಲಿ ನಿಗದಿಯಾಗಿದೆ.

ಇದನ್ನೂ ಓದಿ: ಜೈಲರ್​ ಆಡಿಯೋ ಲಾಂಚ್ ಈವೆಂಟ್​: ತಲೈವಾ ಎಂಟ್ರಿ ಅದ್ಭುತ! ವಿಡಿಯೋ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.