ETV Bharat / entertainment

ಭಾರತದ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದ ಕಾಂತಾರ! - ಕಾಂತಾರ ಚಿತ್ರದ ಕಲೆಕ್ಷನ್​

ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ರಿಷಬ್​ ಶೆಟ್ಟಿ ನಟನೆಯ ಕನ್ನಡದ ಕಾಂತಾರ ಚಿತ್ರ ಮೊದಲ ಸ್ಥಾನ ಪಡೆದಿದೆ.

imdb top 250 films kantara first place
ಕಾಂತಾರ ಚಿತ್ರದ ಪೋಸ್ಟರ್​
author img

By

Published : Oct 18, 2022, 9:12 PM IST

ರಿಷಬ್​ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರ ಮತ್ತೊಂದು ದಾಖಲೆ ಬರೆದಿದೆ. ಸಿನಿಮಾ, ಟಿವಿ ಹಾಗೂ ರಿಯಾಲಿಟಿ ಶೋಗಳಿಗೆ ಅಧಿಕೃತ ರೇಟಿಂಗ್‌ ಮತ್ತು ವಿಮರ್ಶೆ ನೀಡುವ ವಿಶ್ವದ ಅತ್ಯಂತ ಜನಪ್ರಿಯ ಸಂಸ್ಥೆ IMDb ಪ್ರಕಟಿಸಿದ 'ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ‘ಕಾಂತಾರ’ ಅಗ್ರಸ್ಥಾನದಲ್ಲಿದೆ.

IMDb ತನ್ನ ಬಳಕೆದಾರರು ನೀಡಿದ ರೇಟಿಂಗ್‌ಗಳ ಆಧಾರದ ಮೇಲೆ ಈ ಪಟ್ಟಿಯನ್ನು ರಚಿಸಿದೆ. ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪಟ್ಟಿಯು 17ನೇ ಅಕ್ಟೋಬರ್, 2022 ರಂತೆ ಎಂದು IMDb ಸೋಮವಾರ ಟ್ವೀಟ್ ಮಾಡಿದೆ.

ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಕಾಂತಾರ ದಿನಕಳೆದಂತೆ ಹಣ ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು ಹಲವು ದಾಖಲೆಯನ್ನು ಬರೆಯುತ್ತಿದೆ. ಸದ್ಯ 'ಭಾರತದ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಈ ಚಿತ್ರಕ್ಕೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

imdb top 250 films kantara first place
ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿ

ಕಾಂತಾರ 1ನೇ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಅನಿಮೇಟೆಡ್ ಚಲನಚಿತ್ರ ರಾಮಾಯಣ (1993), ಮಾಧವನ್​ ನಟನೆಯ ರಾಕೆಟ್ರಿ (2022), ನಾಯಕನ್ (1987) ಅಂಬೆ ಶಿವಂ (2003), ಗೋಲ್ಮಾಲ್ (1979), ಜೈ ಭೀಮ್, 777 ಚಾರ್ಲಿ, ಪರಿಯೆರುಮ್ ಪೆರುಮಾಳ್ (2018) ಮತ್ತು ಮಣಿಚಿತ್ರತಾಜು (1993) ಸ್ಥಾನ ಪಡೆದಿದೆ. ಸದ್ಯ IMDb ಹೊರಡಿಸಿದ (Top 10) ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನ ಪಡೆದಿದ್ದನ್ನು ಇಲ್ಲಿ ಗಮನಿಸಬಹುದು.

  • India’s Current Top 250 Films:

    What are your favourites from this list?🤔

    Regularly updated, the IMDb Top 250 is a collection of the most loved & highest-rated Indian films by fans. This list is as of 17th October, 2022.#IMDbTop250 pic.twitter.com/02sYGdDZHL

    — IMDb India (@IMDb_in) October 17, 2022 " class="align-text-top noRightClick twitterSection" data=" ">

ಇನ್ನು ತೆಲುಗು ಚಲನಚಿತ್ರಗಳ ವಿವರಗಳನ್ನು ನೋಡುವುದಾದರೆ ಕೇರಾಫ್ ಕಂಚರಪಾಲೆಂ (17ನೇ), ಜರ್ಸಿ (22), ಸೀತಾರಾಮ್ (39), ಮಹಾನಟಿ (44), ಏಜೆಂಟ್ ಸಾಯಿ ಶ್ರೀನಿವಾಸ್​ ಆತ್ರೇಯ (48), ಬಾಹುಬಲಿ: ದಿ ಕನ್‌ಕ್ಲೂಷನ್ (101), ಬೊಮ್ಮರಿಲ್ಲು (125), ರಂಗಸ್ಥಳಂ (129), ಅಹು (134), ಪೆಲ್ಲಿ ಘೋಸ್ಲು (146), ಆರು (155), ಕಿಷ್ಮಾ (156), ಮೇಜರ್ (165), ವೇದ (176), ಅರ್ಜುನ್ ರೆಡ್ಡಿ (179), ಬಾಹುಬಲಿ: ದಿ ಬಿಗಿನಿಂಗ್ (182), RRR ( 190), ಒಕ್ಕಡು (209), ರೋಗ್ (212), ಮನಮ್ (217), ಊಪಿರಿ (220), ಹ್ಯಾಪಿಡೇಸ್ (236), ಗುಡಾಚಾರಿ (244ನೇ ಸ್ಥಾನ). ಪಟ್ಟಿಯಲ್ಲಿ ಇನ್ನುಳಿದಂತೆ ಕನ್ನಡದ ಕೆಜಿಎಫ್​ (ಭಾಗ 1), ಕಮಲ್ ಹಾಸನ್ ನಟನೆಯ ನಾಯಕನ್ ಮತ್ತು ಅಮೀರ್ ಖಾನ್ ನಟನೆಯ 3 ಈಡಿಯಟ್ಸ್ ಸೇರಿದಂತೆ ಹಲವು ಸಿನಿಮಾಗಳಿವೆ.

(ಓದಿ: ಕಾಂತಾರ ಸಿನಿಮಾದ ಶಿವನ ಪಾತ್ರಕ್ಕೆ ಇವರಲ್ಲಿ ಯಾರು ಸೂಕ್ತ? ಯಶ್​ರಂತೆ ಗಡ್ಡ ಬಿಟ್ಟು ರುಮಾಲು ಸುತ್ತಿ ಗೆದ್ದ ಶೆಟ್ರು)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.