ETV Bharat / entertainment

₹600 ಕೋಟಿ ದಾಟಿದ 'ಅನಿಮಲ್​': ಚಿರಂಜೀವಿ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ನಿರ್ದೇಶಕ - ಈಟಿವಿ ಭಾರತ ಕನ್ನಡ

Sandeep Reddy Vanga About Chiranjeevi: 'ಅನಿಮಲ್​' ಸಿನಿಮಾ ಸಕ್ಸಸ್​ ಖುಷಿಯಲ್ಲಿರುವ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ, ಮೆಗಾಸ್ಟಾರ್​ ಚಿರಂಜೀವಿ ಜೊತೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Sandeep Reddy Vanga About Chiranjeevi
₹600 ಕೋಟಿ ದಾಟಿದ 'ಅನಿಮಲ್​': ಚಿರಂಜೀವಿ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ನಿರ್ದೇಶಕ
author img

By ETV Bharat Karnataka Team

Published : Dec 9, 2023, 9:52 PM IST

ಟಾಲಿವುಡ್​ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ 'ಅನಿಮಲ್​' ಚಿತ್ರದ ಮೂಲಕ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದ್ದಾರೆ. ಬಾಲಿವುಡ್​ ನಟ ರಣ್​ಬೀರ್​ ಕಪೂರ್​ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಡಿಸೆಂಬರ್​ 1ರಂದು ತೆರೆ ಕಂಡ ಸಿನಿಮಾ ಈಗಾಗಲೇ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಭಾರತ ಮಾತ್ರವಲ್ಲದೇ, ವಿಶ್ವದಾದ್ಯಂತ ಈ ಸಿನಿಮಾ ವೇಗವಾಗಿ ಓಡುತ್ತಿದೆ.

ಇತ್ತೀಚೆಗೆ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಸಿನಿ ಪ್ರೇಮಿಗಳನ್ನು ಕೆಲಕಾಲ ರಂಜಿಸಿದರು. ಜೊತೆಗೆ ಮೆಗಾಸ್ಟಾರ್​ ಚಿರಂಜೀವಿ ಜೊತೆ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಅವಕಾಶ ಸಿಕ್ಕರೆ ಖಂಡಿತಾ ಚಿರಂಜೀವಿ ಜೊತೆ ಆ್ಯಕ್ಷನ್​ ಡ್ರಾಮಾ ಮಾಡುತ್ತೇನೆ ಎಂದು ಹೇಳಿದರು. ಇದು ಸಿನಿ ಪ್ರೇಮಿಗಳಿಗೆ ಹೆಚ್ಚು ಸಂತಸ ತಂದಿದೆ. ಈ ವಿಚಾರ ಸೋಷಿಯಲ್​ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

'ನೀವು ಸಿನಿಮಾವನ್ನು ಸಿನಿಮಾದಂತೆ ನೋಡಿದ್ದೀರಿ'; ಯುಎಸ್​ ಪ್ರೇಕ್ಷಕರ ಜೊತೆ 'ಅನಿಮಲ್​' ಸಿನಿಮಾ ವಿಚಾರವಾಗಿ ಕೆಲವು ಕಮೆಂಟ್​ಗಳನ್ನು ಮಾಡಿದರು. "ಈವರೆಗಿನ ಸಿನಿಮಾ ಬಗೆಗಿನ ಎಲ್ಲಾ ಚರ್ಚಾ ಕಾರ್ಯಕ್ರಮದಲ್ಲಿ ನನಗೆ ಇಷ್ಟವಾಗಿದ್ದು ಅಂದ್ರೆ ಎಲ್ಲವೂ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳಿದ್ದಾರೆ. ಯಾರೂ ನನ್ನನ್ನು ಸ್ತ್ರೀ ದ್ವೇಷದ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಯಾಕೆಂದರೆ ಇಲ್ಲಿ ಎಲ್ಲರೂ ಸಿನಿಮಾವನ್ನು ಸಿನಿಮಾದಂತೆ ನೋಡಿದ್ದೀರಿ. ಅದಕ್ಕೆ ಖುಷಿಯಾಗಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಮೈಂಡ್​ ಬ್ಲೋಯಿಂಗ್': 'ಅನಿಮಲ್​​' ಸಿನಿಮಾ, ನಟರನ್ನು ಕೊಂಡಾಡಿದ ಅಲ್ಲು ಅರ್ಜುನ್

'ಅನಿಮಲ್'​ ಕಲೆಕ್ಷನ್: ​ಬಿಡುಗಡೆಯಾಗಿ ಒಂದು ವಾರದ ನಂತರವೂ 'ಅನಿಮಲ್' ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಟಿ-ಸೀರೀಸ್​ ಪ್ರಕಾರ ವಿಶ್ವದಾದ್ಯಂತ 600.67 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಗದರ್​ 2, ಪಠಾಣ್​ ಮತ್ತು ಜವಾನ್​ ನಂತರ ಈ ವರ್ಷದ ನಾಲ್ಕನೇ ಅತಿ ಹೆಚ್ಚಿ ಗಳಿಕೆಯ ಹಿಂದಿ ಸಿನಿಮಾವಾಗಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. 'ಸಂಜು'ವನ್ನು ಹಿಂದಿಕ್ಕಿ 'ಅನಿಮಲ್​' ರಣ್​ಬೀರ್​ ನಟನೆಯ ಅತಿ ದೊಡ್ಡ ಬ್ಲಾಕ್​ಬಸ್ಟರ್​ ಎನಿಸಿಕೊಂಡಿದೆ. ​

  • What I really like about the crowd is that I didn't hear any questions on misogyny. I'm so happy, you are the right crowd. You saw #Animal just as a film - Sandeep Reddy Vanga pic.twitter.com/cChYivMn49

    — RKᴬ (@seeuatthemovie) December 9, 2023 " class="align-text-top noRightClick twitterSection" data=" ">

'ಅನಿಮಲ್​' ತೆರೆ ಕಂಡು ಎಂಟನೇ ದಿನದಲ್ಲಿ ಭಾರತದಲ್ಲಿ 23.34 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಮೂಲಕ ದೇಶದಲ್ಲಿನ ಈವರೆಗಿನ ಕಲೆಕ್ಷನ್​ 362.11 ಕೋಟಿ ರೂಪಾಯಿ ಆಗಿದೆ ಎಂದು ಉದ್ಯಮದ ಟ್ರಾಕರ್​ ಸ್ಯಾಕ್ನಿಲ್​ ವರದಿ ಮಾಡಿದೆ. ಈ ಚಿತ್ರದಲ್ಲಿ ರಣ್​ಬೀರ್​, ರಶ್ಮಿಕಾ ಜೊತೆಗೆ ಬಾಬಿ ಡಿಯೋಲ್​, ಅನಿಲ್​ ಕಪೂರ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ಅನಿಮಲ್​' ಅಬ್ಬರ: 'ಗೀತಾಂಜಲಿ' ಪಾತ್ರ ವರ್ಣಿಸಿದ ರಶ್ಮಿಕಾ ಮಂದಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.