ETV Bharat / entertainment

ಗಂಧದಗುಡಿ ಶೂಟಿಂಗ್​ ವೇಳೆ ಪುನೀತ್​ ಜೊತೆ ನಾನೂ ಟ್ರಕ್ಕಿಂಗ್​ ಮಾಡಿದ್ದೆ.. ಅಶ್ವಿನಿ ಪುನೀತ್​ ರಾಜ್​ಕುಮಾರ್​ - ಪುನೀತ್ ರಾಜ್‍ಕುಮಾರ್ ಸ್ಟಾರ್ ಡಮ್

ಅಪ್ಪು ಕನಸಿನ‌ ಗಂಧದ ಗುಡಿ ಚಿತ್ರದ ಬಗ್ಗೆ ಮಡದಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನದಾಳದ ಮಾತು..

Ashwini Puneeth Rajkumar
ಅಶ್ವಿನಿ ಪುನೀತ್​ ರಾಜ್​ಕುಮಾರ್​
author img

By

Published : Oct 27, 2022, 6:48 AM IST

ಕನ್ನಡ ಚಿತ್ರರಂಗದ ನಗು‌‌ಮುಖದ ರಾಜಕುಮಾರ ಅಭಿಮಾನಿಗಳ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸ್ಟಾರ್ ಡಮ್ ಪಕ್ಕಕ್ಕೆ ಇಟ್ಟು ನಟಿಸಿರುವ ಚಿತ್ರ ಗಂಧದ ಗುಡಿ. ಡಾ ರಾಜ್ ಕುಮಾರ್, ‌ಡಾ ಶಿವರಾಜ್ ಕುಮಾರ್ ಬಳಿಕ ಡಾ ಪುನೀತ್ ರಾಜ್‍ಕುಮಾರ್ ಅಭಿನಯಿಸಿರೋ ಗಂಧದ ಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಬಾಕಿ ಇದೆ. ಈ ಸಿನಿಮಾ ಬಗ್ಗೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಎಲ್ಲಿಯೂ ಕ್ಯಾಮರಾ ಮುಂದೆ ಮಾತನಾಡಿರಲಿಲ್ಲ. ಆದರೆ, ಅಪ್ಪು ಡ್ರೀಮ್​​ ಪ್ರಾಜೆಕ್ಟ್ ಗಂಧದ ಗುಡಿ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದಾರೆ‌. ನಿರ್ದೇಶಕ ಸಂತೋಷ್ ಆನಂದ ರಾಮ್‌ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಸಂದರ್ಶನ ಮಾಡಿದ್ದಾರೆ‌. ಸಂತೋಷ್ ಕೇಳಿದ ಪ್ರಶ್ನೆಗಳಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉತ್ತರಿಸಿದ್ದಾರೆ‌. ಪುನೀತ ಪರ್ವ ಎಂಬ ಕಾರ್ಯಕ್ರಮ ಮಾಡಿದ್ದು ಅಭಿಮಾನಿಗಳಿಗಾಗಿ, ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್​ಗಳು ಬಂದಿದ್ದು, ಸ್ವತಃ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಬಹಳ‌ ತೃಪ್ತಿ ತಂದಿದೆ ಎಂದರು.

ಗಂಧದ ಗುಡಿ ಚಿತ್ರದ ಸಮಯದಲ್ಲಿ ಕಾಳಿನದಿಯಲ್ಲಿ ಚಿತ್ರೀಕರಣ ಮಾಡುವಾಗ, ಅಪ್ಪು ಈ ಜಾಗಕ್ಕೆ ನೀನು ಬರಬೇಕು ಅಂತಾ ಹೇಳಿ ಬಲವಂತ ಮಾಡಿ ಕರೆಯಿಸಿಕೊಂಡರು. ಆಗ ನಾನು ಅವರು ಮತ್ತು ಅಮೋಘ ವರ್ಷ ಸೇರಿದಂತೆ ನಾವು ಬೆಟ್ಟ ಹತ್ತುವ ಟ್ರಕ್ಕಿಂಗ್ ಮಾಡಿದ್ದೆವು ಎಂದು ನೆನಪುಗಳನ್ನು ಹಂಚಿಕೊಂಡರು.

ಪುನೀತ್ ರಾಜ್‍ಕುಮಾರ್ ಅವ್ರಿಗೆ ನಮ್ಮ‌ ರಾಜ್ಯದ ಅರಣ್ಯ ಸಂಪತ್ತನ್ನು ತೋರಿಸುವ ಹಂಬಲ ಜಾಸ್ತಿ. ಈ ಕಾರಣಕ್ಕೆ ಅವರು ಯಾವುದೇ ಸ್ಟಾರ್​ಗಿರಿ ಇಲ್ಲದೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಎಲ್ಲರೂ ಬಂದು ನೋಡಿ ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಪೂರ್ಣ ಪ್ರಮಾಣದ ನಾಯಕನಾದ ಅಪ್ಪು ಸಿನಿಮಾವನ್ನು ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಪುನೀತ್ ಅವರು ಸಾಮಾನ್ಯ ವ್ಯಕ್ತಿಯಾಗಿ ಇರುವ ಚಿತ್ರವನ್ನು ಅವರ ಮಡದಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿರೋದು ಕಾಕತಾಳೀಯ. ಆದರೆ, ಪವರ್ ಸ್ಟಾರ್ ಅಗಲಿ ಇದೇ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗುತ್ತಿದೆ. ಅವರು ಅಭಿನಯಿಸಿರೋ ಈ ಗಂಧದ ಗುಡಿ ಭಾರತೀಯ ಚಿತ್ರರಂಗದಲ್ಲಿ ಹೊಸ‌ ಮೈಲಿಗಲ್ಲು ಸಾಧಿಸುವ ಎಲ್ಲಾ ಲಕ್ಷಣಗಳು ಕಾಣ್ತಾ ಇವೆ.

ಇದನ್ನೂ ಓದಿ: ತೆಲುಗು ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹ್ಯಾಟ್ರಿಕ್ ಹೀರೋ.. ಹೊಸ ಲುಕ್​ನಲ್ಲಿ ಮಿಂಚಲಿರುವ ಶಿವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.