ಭಾರತೀಯ ಚಿತ್ರರಂಗದ ಲೆಂಜಂಡರಿ ಆ್ಯಕ್ಟರ್ ಮತ್ತು ಬಹುಭಾಷಾ ನಟ ಕಮಲ್ ಹಾಸನ್, ವಿಶ್ವರೂಪಂ 2 ಸಿನಿಮಾ ನಂತರ 'ವಿಕ್ರಮ್'ನಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ನಾಳೆ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕಾಗಿ ಕಮಲ್ ಹಾಸನ್ ಬೆಂಗಳೂರಿಗೆ ಬಂದಿದ್ದಾರೆ. ಸದ್ಯ ವಿಕ್ರಮ್ ಸಿನಿಮಾದ ಭರ್ಜರಿ ಪ್ರಚಾರ ಮಾಡುತ್ತಿರುವ ಕಮಲ್ ಹಾಸನ್, ಬೆಂಗಳೂರು ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಕೆಲ ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ನನಗೆ ಬೆಂಗಳೂರು ಹಾಗೂ ಕನ್ನಡ ಚಿತ್ರರಂಗದ ಜೊತೆ ಒಳ್ಳೆ ನಂಟು ಇದೆ. ಜೊತೆಗೆ ಕರ್ನಾಟಕದಲ್ಲಿ ಸಾಕಷ್ಟು ಗುರುಗಳು ಇದ್ದಾರೆ. ನಾನು ಪುಟ್ಟಣ್ಣ ಕಣಗಾಲ್ ಸಿನಿಮಾ ರಿಲೀಸ್ ಆದಾಗ, ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಚೆನ್ನೈನಿಂದ ಬೆಂಗಳೂರಿಗೆ ಬಾಲಚಂದರ್ ಸಾರ್ ಜೊತೆ ಬರುತ್ತಿದ್ದೆ. ಹಾಗೆ ನಾನು ಗಿರೀಶ್ ಕಾರ್ನಾಡ್ ಅವರ ಫ್ಯಾನ್. ಬಿ.ವಿ. ಕಾರಂತ್ ಅವರನ್ನು ಮಾತನಾಡಿಸಲು ಬೆಂಗಳೂರಿಗೆ ಬರುತ್ತಿದ್ದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದರ ಜೊತೆ ವರನಟ ಡಾ.ರಾಜ್ ಕುಮಾರ್ ಕುಟುಂಬ ಜೊತೆ ಕಮಲ್ ಹಾಸನ್ಗೆ ಇರುವ ಒಡನಾಟವನ್ನ, ಈ ಸುಂದರ ವೇದಿಕೆಯಲ್ಲಿ ಹಂಚಿಕೊಂಡರು. ನಾನು ರಾಜ್ ಕುಮಾರ್ ಅವ್ರಿಂದ ಸರಳತೆ ಹಾಗೂ ಬೇರಯವರಿಗೆ ಅವರು ಕೊಡುತ್ತಿದ್ದ ಗೌರವವನ್ನ ನೋಡಿ ಕಲಿತ್ತೀದ್ದೇನೆ. ರಾಜ್ ಕುಮಾರ್ ಅವರದ್ದು, ಎಷ್ಟು ದೊಡ್ಡ ಗುಣ ಎಂದರೆ, ನಾನು 21ನೇ ವಯಸ್ಸಿನಲ್ಲಿ ಇದ್ದಾಗ, ರಾಜ್‌ಕುಮಾರ್ ಅವರು ನನ್ನ ನಟನೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ಹಾಗೆಯೇ ಪುಷ್ಪಕ ವಿಮಾನ ಸಿನಿಮಾದ ಶೂಟಿಂಗ್ ವೇಳೆ ಅವರು ಬಂದು ನನ್ನನ್ನ ಬೆನ್ನು ತಟ್ಟಿದರು.
ಇನ್ನು ರಾಜ್ ಕುಮಾರ್ ಅವರ ಸರಳತೆ ಹಾಗೂ ಅವ್ರ ಆದರ್ಶಗಳನ್ನ ಅವರ ಮಕ್ಕಳಿಗೆ ಕಲಿಸಿ ಕೊಟ್ಟು ಹೋಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅಗಲಿಕೆ ಬಗ್ಗೆ ಮಾತನಾಡಿದ ಕಮಲ್ ಹಾಸನ್, ಪುನೀತ್ ರಾಜ್‍ಕುಮಾರ್ ಕುಟುಂಬ ನನ್ನ ಕುಟುಂಬ ಇದ್ದಂಗೆ. ಪುನೀತ್ ಇಲ್ಲದ ಮೇಲೆ ನಾನು ಅವರ ಮೆನೆಗೆ ಭೇಟಿ ಕೊಟ್ಟು ಧೈರ್ಯದ ತುಂಬುವ ಕೆಲಸ ಮಾಡಿದೆ. ನಾನು ಪುನೀತ್ ಹಾಗೂ ಅಣ್ಣಾವ್ರು ಇಬ್ಬರನ್ನೂ ಮೀಸ್ ಮಾಡಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: 'ಸಾಮ್ರಾಟ್ ಪೃಥ್ವಿರಾಜ್'ಗೆ ಸಿಎಂ ಯೋಗಿ ಫುಲ್ ಫಿದಾ.. ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯ್ತಿ ಘೋಷಣೆ
ಇದರ ಜೊತೆಗೆ ಕಮಲ್ ಮೊದಲ ಬಾರಿಗೆ ಅಭಿಯಿಸಿದ, ಕೋಕಿಲ ಸಿನಿಮಾ ಬಗ್ಗೆ ಮಾತನಾಡಿದರು. ಕೋಕಿಲ ಚಿತ್ರವನ್ನು ಕನ್ನಡದಲ್ಲೇ ಮಾಡಲಾಗಿತ್ತು. ಶೂಟಿಂಗ್ಗಾಗಿ ಬೆಂಗಳೂರಿಗೆ ಬಂದಾಗ ನಾನು ಪರಾಗ್ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದೆ ಎಂದು ಕಮಲ್ ಹಾಸನ್ ಹೇಳಿದರು. ಇದರ ಜೊತೆಗೆ ರಮೇಶ್ ಅರವಿಂದ್ ನಿರ್ದೇಶನದ ರಾಮ ಭಾಮ ಶ್ಯಾಮ ಸಿನಿಮಾದಲ್ಲಿ, ಉತ್ತರ ಕರ್ನಾಟಕದ ವೈದ್ಯನಾಗಿ ಕಮಲ್ ಹಾಸನ್ ಅಭಿನಯಿಸಿದ್ದರು. ಈ ಚಿತ್ರದ ಡೈಲಾಗ್ನನ್ನ ಕಮಲ್ ಹಾಸನ್ ಹೇಳುವ ಮೂಲಕ ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನ ರಂಜಿಸಿದರು.