ETV Bharat / entertainment

ನಟ ಹೃತಿಕ್ ರೋಷನ್ ಅಜ್ಜಿ ಪದ್ಮಾ ರಾಣಿ ಓಂ ಪ್ರಕಾಶ್ ನಿಧನ! - ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್

ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್ ಅವರ ತಾಯಿ ಪದ್ಮಾ ರಾಣಿ ಓಂ ಪ್ರಕಾಶ್ ನಿಧನ ಹೊಂದಿದ್ದಾರೆ.

Hrithik Roshan's maternal grandmother passes away
ನಟ ಹೃತಿಕ್ ರೋಷನ್ ಅಜ್ಜಿ ಪದ್ಮಾ ರಾಣಿ ಓಂ ಪ್ರಕಾಶ್ ನಿಧನ
author img

By

Published : Jun 17, 2022, 12:27 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ಅಜ್ಜಿ, ದಿವಂಗತ ಚಲನಚಿತ್ರ ನಿರ್ಮಾಪಕ ಜೆ ಓಂ ಪ್ರಕಾಶ್ ಅವರ ಪತ್ನಿ ಪದ್ಮಾ ರಾಣಿ ಓಂ ಪ್ರಕಾಶ್(91) ಅವರು ನಿಧನರಾಗಿದ್ದಾರೆ.

ಹೃತಿಕ್ ರೋಷನ್​​ ತಂಡಕ್ಕೆ ಹತ್ತಿರ ಇರುವ ಮೂಲವೊಂದು ಈ ದುರದೃಷ್ಟಕರ ಸುದ್ದಿಯನ್ನು ಖಚಿತಪಡಿಸಿದೆ. ಪದ್ಮಾ ರಾಣಿ ಓಂ ಪ್ರಕಾಶ್ ಅವರು ಗುರುವಾರ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಪದ್ಮಾ ರಾಣಿ ಓಂ ಪ್ರಕಾಶ್ ಅವರು ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್ ಅವರ ತಾಯಿ.

ವಿಷಯ ಹೊರಬಿದ್ದ ನಂತರ ಹೃತಿಕ್​ ರೋಷನ್​ ಅಭಿಮಾನಿಗಳು, ಚಿತ್ರ ರಂಗದವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ನಮ್ಮ ಪ್ರೀತಿಯನ್ನು ಅರ್ಪಿಸುತ್ತಿದ್ದೇವೆ. ಆ ಭಗವಂತನು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಓ ಶಾಂತಿ ಎಂದು ಸಂತಾಪ ಸಂದೇಶ ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ: ಮಕ್ಕಳೊಂದಿಗೆ ಆ್ಯನಿಮೇಟೆಡ್​ ಸಿನಿಮಾ ವೀಕ್ಷಿಸಿದ ಸನ್ನಿ ಲಿಯೋನ್

ಹೃತಿಕ್ ಅವರ ತಾಯಿ ಪಿಂಕಿ ರೋಷನ್ ತಾಯಿಯೊಂದಿಗಿನ ಫೋಟೋ ಹಂಚಿಕೊಂಡು, 'ನನ್ನ ತಾಯಿ ತಂದೆಯೊಂದಿಗೆ ಮತ್ತೆ ಒಂದಾಗಲು, ಅವರ ಮುಂದಿನ ಪ್ರಯಾಣಕ್ಕಾಗಿ ನಮ್ಮನ್ನು ಅಗಲಿದ್ದಾರೆ...ಪ್ರೀತಿ, ಶಾಂತಿ, ಕೃತಜ್ಞತೆ' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.