ETV Bharat / entertainment

ಇಟಲಿಯಲ್ಲಿ 'ಫೈಟರ್'​ ಶೂಟಿಂಗ್​ ಮುಗಿಸಿ ಮುಂಬೈಗೆ ಮರಳಿದ ದೀಪಿಕಾ ಪಡುಕೋಣೆ- ಹೃತಿಕ್​ ರೋಷನ್​ - etv bharat kannada

ಬಾಲಿವುಡ್​ ನಟರಾದ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ತಮ್ಮ 'ಫೈಟರ್​' ಚಿತ್ರದ ಇಟಲಿ ಶೂಟಿಂಗ್​ ಶೆಡ್ಯೂಲ್​​ ಪೂರ್ಣಗೊಳಿಸಿದ್ದು, ಇಂದು ಮುಂಬೈಗೆ ಮರಳಿದ್ದಾರೆ.

Hrithik Roshan, Deepika Padukone return to Mumbai in style after wrapping Fighter Italy schedule - watch
ಇಟಲಿಯಲ್ಲಿ 'ಫೈಟರ್'​ ಶೂಟಿಂಗ್​ ಮುಗಿಸಿ ಮುಂಬೈಗೆ ಮರಳಿದ ದೀಪಿಕಾ ಪಡುಕೋಣೆ- ಹೃತಿಕ್​ ರೋಷನ್​
author img

By ETV Bharat Karnataka Team

Published : Oct 6, 2023, 6:46 PM IST

ಬಾಲಿವುಡ್​ನ ಬಹುಬೇಡಿಕೆ ತಾರೆಯರಾದ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್‌'. ಸ್ಟಾರ್​​ ನಟ ನಟಿ ತಮ್ಮ ಮುಂಬರುವ ಚಿತ್ರದ ಇಟಲಿ ಶೂಟಿಂಗ್​ ಶೆಡ್ಯೂಲ್​​ ಪೂರ್ಣಗೊಳಿಸಿದ್ದು, ಇಂದು ಮುಂಬೈಗೆ ಮರಳಿದ್ದಾರೆ. ಇವರಿಬ್ಬರು ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡರು.

ಹೃತಿಕ್​ ಮತ್ತು ದೀಪಿಕಾ 'ಫೈಟರ್​' ಚಿತ್ರದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಇಟಲಿಗೆ ತೆರಳಿದ್ದರು. ಈಗಾಗಲೇ ಇಟಲಿಯಿಂದ ಫೈಟರ್ ಸೆಟ್‌ನ ಕೆಲ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದವು. ವೈರಲ್ ಆಗುತ್ತಿರುವ ಫೋಟೋ, ವಿಡಿಯೋಗಳನ್ನು ಡ್ಯಾನ್ಸಿಂಗ್​​ ಸ್ಟಾರ್​​ ಹೃತಿಕ್ ರೋಷನ್ ಅವರ ಫ್ಯಾನ್ಸ್​ ಪೇಜ್​ಗಳು ಶೇರ್ ಮಾಡುತ್ತಿವೆ. ಇದರಲ್ಲಿ ಸಿನಿಮಾದ ಸಾಂಗ್ ಶೂಟ್‌ನ ಫೋಟೋ ಕೂಡ ಇತ್ತು. ಚಿತ್ರದಲ್ಲಿ ಫೈಟರ್​ ತಂಡ ಕಡಲ ತೀರದಲ್ಲಿ ಕಾಣಿಸಿಕೊಂಡಿತ್ತು. ಅಪಾರ ಸಂಖ್ಯೆಯ ನೃತ್ಯಗಾರರು ಜೊತೆಗಿದ್ದರು.

ಇಟಲಿಯಲ್ಲಿ ಶೂಟಿಂಗ್​ ಮುಗಿಸಿದ ಚಿತ್ರತಂಡ ಇಂದು ಮುಂಬೈಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ, ಸರಳವಾದ ವೈಟ್​ ಶರ್ಟ್​, ಡೆನಿಮ್​ ಮತ್ತು ಬೀಜ್​ ಓವರ್​ಕೋಟ್​ನಲ್ಲಿ ಕಾಣಿಸಿಕೊಂಡರು. ಕೈಯಲ್ಲಿ ಸಣ್ಣ ಬ್ಯಾಗ್​ ಮತ್ತು ಸನ್​ಗ್ಲಾಸ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಇನ್ನೂ ಹೃತಿಕ್ ರೋಷನ್​ ಬಿಳಿ ಟೀ ಶರ್ಟ್​, ನೀಲಿ ಡೆನಿಮ್​ ಮತ್ತು ನೇವಿ ಬ್ಲೂ ಜಾಕೆಟ್​ ಧರಿಸಿದ್ದರು. ಸನ್​ಗ್ಲಾಸ್​ ಧರಿಸಿ ಕೂಲ್​ ಆಗಿ ಕಾಣುತ್ತಿದ್ದರು. ​ ​

ಮೋಷನ್​ ಪೋಸ್ಟರ್​ ಅನಾವರಣ: ಈ ವರ್ಷ ಸ್ವಾತಂತ್ರ್ಯೋತ್ಸವದಂದು 'ಫೈಟರ್'​ ಮೋಷನ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಗಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಂಡಿದ್ದ ಹೃತಿಕ್​ ರೋಷನ್​, "ಸ್ಪಿರಿಟ್​ ಆಫ್​ ಫೈಟರ್, ವಂದೇ ಮಾತರಂ, ಮುಂದಿನ ಗಣರಾಜ್ಯೋತ್ಸವ ಸಂದರ್ಭ ನಿಮ್ಮನ್ನು ಚಿತ್ರಮಂದಿರದಲ್ಲಿ ಭೇಟಿಯಾಗುತ್ತೇನೆ. 2024 ರ ಜನವರಿ 25 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಫೈಟರ್​ ಸಿನಿಮಾ ತೆರೆಕಾಣಲಿದೆ'' ಎಂದು ಬರೆದುಕೊಂಡಿದ್ದರು.

ಜನವರಿ 25 ರಂದು ರಿಲೀಸ್​: ಫೈಟರ್' ಸಿನಿಮಾ ಭಾರತದ ಮೊದಲ ವೈಮಾನಿಕ ಸಾಹಸಮಯ ಪ್ರೊಜೆಕ್ಟ್​ ಎಂದು ಹೇಳಲಾಗಿದ್ದು, ಬಾಲಿವುಡ್​ ಸ್ಟಾರ್ ಡೈರೆಕ್ಟರ್​ ಸಿದ್ಧಾರ್ಥ್ ಆನಂದ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. 2024ರ ಜನವರಿ 25 ರಂದು ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದೆ. ಸದ್ಯ ಶೂಟಿಂಗ್​ ಭರದಿಂದ ಸಾಗುತ್ತಿದೆ.

ವಯಾಕಾಂ 18 ಸ್ಟುಡಿಯೋಸ್, ಮಾರ್​ಫ್ಲಿಕ್ಸ್ ಪಿಕ್ಚರ್ಸ್ 'ಫೈಟರ್​' ಚಿತ್ರದ ನಿರ್ಮಾಣದ ಹೊಣೆ ಹೊತ್ತಿದೆ. ಫೈಟರ್ ಸಿನಿಮಾ ಭಾರತೀಯ ಶಸಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ಧೇಶಭಕ್ತಿಗೆ ಸೂಚಿಸುವ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ. ಬ್ಯಾಂಗ್​ ಬ್ಯಾಂಗ್​ ಸಿನಿಮಾ ನಂತರ ಹೃತಿಕ್​ ರೋಷನ್​ ಮತ್ತು ಸಿದ್ಧಾರ್ಥ್ ಆನಂದ್​ ಕಾಂಬೋದಲ್ಲಿ ಬರುತ್ತಿರುವ ಎರಡನೇ ಚಿತ್ರ. ಈ ವರ್ಷಾರಂಭದಲ್ಲಿ ಧೂಳೆಬ್ಬಿಸಿದ್ದ ಪಠಾಣ್​ ನಂತರ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಆನಂದ್​ ಕಾಂಬಿನೇಶನ್​ನಲ್ಲಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ: 'ಫೈಟರ್‌' ಇಟಲಿ ಶೂಟಿಂಗ್​ ಶೆಡ್ಯೂಲ್​​ ಕಂಪ್ಲೀಟ್​: ಹೃತಿಕ್​, ದೀಪಿಕಾ ಸಿನಿಮಾ ಸೆಟ್​ನ ಫೋಟೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.