ETV Bharat / entertainment

ಗೆಳತಿ ಸಾಬಾ ಆಜಾದ್​ ಜೊತೆ ಬಾಲಿವುಡ್​​ ಸ್ಟಾರ್ ಹೃತಿಕ್​ ರೋಷನ್​ ವಿವಾಹ..? ​ - ಈಟಿವಿ ಭಾರತ ಕನ್ನಡ

ಹೃತಿಕ್ ರೋಷನ್​​ ಮತ್ತು ಅವರ ಗೆಳತಿ ಸಾಬಾ ಆಜಾದ್​ ಈ ವರ್ಷ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್​ ಆಗುತ್ತಿದೆ.

year
ಹೃತಿಕ್​ ರೋಷನ್​ ವಿವಾಹ
author img

By

Published : Mar 3, 2023, 7:32 PM IST

Updated : Mar 3, 2023, 7:41 PM IST

ಬಾಲಿವುಡ್​ ಸೂಪರ್​ ಸ್ಟಾರ್​ ಹೃತಿಕ್​ ರೋಷನ್ ಇತ್ತೀಚಿನ ದಿನಗಳಲ್ಲಿ​ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಹೃತಿಕ್​ ಮತ್ತು ಅವರ ಗೆಳತಿ ಸಾಬಾ ಆಜಾದ್​ 2023 ರಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್​ ಆಗುತ್ತಿದೆ. ಇವರಿಬ್ಬರು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ ಈ ವರ್ಷ ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ಇಂಟೀರಿಯರ್​ ಡಿಸೈನರ್​ ಸುಸೇನ್​ ಖಾನ್​ ಜೊತೆ ವಿವಾಹವಾಗಿ 14 ವರ್ಷ ಸಂಸಾರ ನಡೆಸಿದ್ದ ಹೃತಿಕ್​ ರೋಷನ್​ಗೆ ಇದು ಎರಡನೇ ಮದುವೆಯಾಗಲಿದೆ.

ಟ್ವಿಟರ್​ನಲ್ಲಿ ಮನರಂಜನಾ ಪೋರ್ಟಲ್​ ಈ ವರ್ಷವೇ ಇಬ್ಬರು ಮದುವೆಯಾಗುವ ಸುದ್ದಿಯನ್ನು ಪ್ರಕಟಿಸಿದೆ. ಆದರೆ, ಇದಕ್ಕೆ ಹೃತಿಕ್ ರೋಷನ್​​ ಅಥವಾ ಸಾಬಾ ಆಜಾದ್​ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಅಧಿಕೃತವಾಗಿ ತಾವಿಬ್ಬರು ಮದುವೆಯಾಗುತ್ತಿರುವುದಾಗಿ ಘೋಷಿಸಿಕೊಂಡಿಲ್ಲ. ಆದರೆ, ಈ ಜೋಡಿ ಎಲ್ಲಾ ಕಡೆಯಲ್ಲೂ ಜೊತೆಯಾಗಿ ಓಡಾಡುತ್ತಾ ಡೇಟಿಂಗ್​ನಲ್ಲಿರುವ ಕಾರಣ ಇಂತಹ ವದಂತಿಗಳು ಹಬ್ಬಿವೆ. ಅಲ್ಲದೇ ಸಬಾ ಆಜಾದ್​ ಆಗಾಗ ಹೃತಿಕ್ ರೋಷನ್​​ ಮನೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಜೊತೆಗೆ ಹೃತಿಕ್​ ಮಾಜಿ ಪತ್ನಿ ಸುಸೇನ್​ ಜೊತೆಗೂ ತುಂಬಾ ಕ್ಲೋಸ್​ ಆಗಿದ್ದಾರೆ.

  • Breaking News:- @iHrithik and #SabaAzad are going to get married in November 2023!

    — BollywoodKiNews (@BollywoodKiNews) March 2, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಸೆಬಿ ನಿರ್ಬಂಧ ಕುರಿತು ಬಾಲಿವುಡ್​ ನಟನ ಸ್ಪಷ್ಟನೆ: ಷೇರು ಬಗ್ಗೆ ಕಿಂಚಿತ್ತು ಜ್ಞಾನವಿಲ್ಲ ಎಂದ ಅರ್ಷದ್​ ವಾರ್ಸಿ

ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಹೃತಿಕ್ ​ -ಸಬಾ: ಕಳೆದ ವಾರ ಸಾಬಾ ಆಜಾದ್​ ಮತ್ತು ಹೃತಿಕ್​ ರೋಷನ್​ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಸಾಬಾ ಅವರು ಹೃತಿಕ್​ ಅವರನ್ನು ನೋಡಲೆಂದೇ ಏಪೋರ್ಟ್​ಗೆ ಬಂದಿದ್ದರು. ಈ ವೇಳೆ ಕಾರ್​​ನೊಳಗೆ ಕುಳಿತು ಇಬ್ಬರು ಪರಸ್ಪರ ಕಿಸ್​ ಮಾಡಿಕೊಂಡಿರುವ ವಿಡಿಯೋವನ್ನು ಸೆರೆಹಿಡಿಯಲಾಗಿತ್ತು. ಅಲ್ಲದೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋದಲ್ಲಿ ಹೃತಿಕ್ ಮತ್ತು ಸಬಾ ತಮ್ಮ ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡಿದ್ದರು.

ಹೃತಿಕ್ ಕಂದು ಬಣ್ಣದ ಕಾರ್ಗೋ ಪ್ಯಾಂಟ್‌ ಹಾಗೂ ಆಲಿವ್ ಹಸಿರು ಟೀ ಶರ್ಟ್‌ ಧರಿಸಿದ್ದರು. ಅದರ ಮೇಲೆ ಹಸಿರು ಜಾಕೆಟ್​ ಹಾಕಿಕೊಂಡಿದ್ದರು. ಅಲ್ಲದೇ ನಟ ತಲೆಗೆ ಕ್ಯಾಪ್​ ಹಾಗೂ ಹಳದಿ ಕನ್ನಡಕ ಹಾಕಿಕೊಂಡಿದ್ದರು. ಮತ್ತೊಂದೆಡೆ, ಸಬಾ ಆಜಾದ್ ಅವರು ಹಸಿರು ಪ್ಯಾಂಟ್ ಮತ್ತು ಬೂದು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದರು. ಹೃತಿಕ್ ರೋಷನ್​ ಮತ್ತು ಸಾಬಾ ಆಜಾದ್ ಡೇಟಿಂಗ್ ಬಗ್ಗೆ ಬಹಳ ದಿನಗಳಿಂದ ವದಂತಿ ಹರಿದಾಡುತ್ತಿದೆ. ಈ ನಡುವೆ ಕರಣ್ ಜೋಹರ್ ಅವರ 50 ನೇ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಇಬ್ಬರು ಕೈ-ಕೈ ಹಿಡಿದು ಪ್ರವೇಶ ಪಡೆದ ನಂತರ ವದಂತಿಗೆ ತೆರೆ ಬಿದ್ದಿತ್ತು. ಇದೀಗ ಇಬ್ಬರು ವಿವಾಹವಾಗಲಿದ್ದಾರಾ? ಎಂಬ ಸುದ್ದಿ ಬಾಲಿವುಡ್​ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: 'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು

Last Updated : Mar 3, 2023, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.