ETV Bharat / entertainment

ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದ ಬಾಯ್​ಫ್ರೆಂಡ್​ ಹೃತಿಕ್ ರೋಷನ್​ಗೆ ಧನ್ಯವಾದ ಹೇಳಿದ ಯುವ ನಟಿ ಸಬಾ ಆಜಾದ್ - ಹೃತಿಕ್ ರೋಷನ್‌ ಮತ್ತು ಸಬಾ ಆಜಾದ್ ರೋಮ್ಯಾಂಟಿಕ್​ ಫೋಟೋಗಳು

ಗರ್ಲ್​ಫ್ರೆಂಡ್​ ಸಬಾ ಆಜಾದ್ ಹುಟ್ಟುಹಬ್ಬವನ್ನು ಆಚರಿಸಿದ ನಟ ಹೃತಿಕ್ ರೋಷನ್‌ ಅವರ ರೋಮ್ಯಾಂಟಿಕ್​ ಫೋಟೋ ಹಂಚಿಕೊಂಡಿದ್ದರು. ಇದೀಗ ಧನ್ಯವಾದ ಹೇಳಿರುವ ಸಬಾ, ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದೆ ಎಂದಿದ್ದಾರೆ.

how saba azad celebrated her 37th birthday with beau hrithik roshan

author img

By

Published : Nov 3, 2022, 6:10 PM IST

ಮುಂಬೈ (ಮಹಾರಾಷ್ಟ್ರ):​​ ನಟ ಹೃತಿಕ್ ರೋಷನ್‌ ಜೊತೆ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯುವ ನಟಿ ಸಬಾ ಆಜಾದ್ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟಿರುವ ಗರ್ಲ್​ಫ್ರೆಂಡ್​ ಸಬಾ​ಗೆ ಹೃತಿಕ್ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದರು. ಪ್ರತಿಯಾಗಿ ಸಬಾ ಧನ್ಯವಾದ ಹೇಳಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದ ಎಂದು ತಾರೆಯು ವಿಸ್ತೃತವಾಗಿ ಶೀರ್ಷಿಕೆ ಬರೆದುಕೊಂಡಿದ್ದಾರೆ.

'ನಾನು ನನ್ನ ಜನ್ಮದಿನವನ್ನು ಖುಷಿಯಾಗಿ ಕಳೆಯಲು ಇಷ್ಟಪಡುತ್ತೇನೆ. ಜೊತೆಗೆ ಈ ದಿನ ಒಳ್ಳೆಯ ಪಾರ್ಟಿಯನ್ನು ಮಾಡಲು ಇಷ್ಟಪಡುತೇನೆ. ಈ ದಿನ ನನ್ನ ಹೃದಯ ತುಂಬಿದೆ. ಈ ದಿನಕ್ಕಾಗಿ ನಾನು ಮತ್ತೆ ಒಂದು ವರ್ಷ ಕಾಯಬೇಕು. ಆದರೆ, ಭೂಮಿಯ ಮೇಲಿನ ನನ್ನ ಎಲ್ಲ ದಿನಗಳು ಹೀಗಿರಬೇಕು ಎಂಬ ಬಯಕೆ. ಸಹಜವಾಗಿ ಇಂತಹ ದಿನಗಳನ್ನು ನಾನು ನನ್ನ ಪ್ರೀತಿಪಾತ್ರರ ಜೊತೆ ಕಳೆಯಲು ಇಚ್ಛಿಸುತ್ತೇನೆ. ಈ ದಿನವನ್ನು ಖುಷಿಯಾಗಿಸಿದ್ದಕ್ಕೆ ಧನ್ಯವಾದಗಳು ರೋ...' ಎಂದು ಸಬಾ ಬರೆದುಕೊಂಡಿದ್ದಾರೆ.

ಇದೇ ವೇಳೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಅಭಿಮಾನಿಗಳಿಗೂ ಅವರು ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರೀತಿಯ ಮಾತುಗಳು ನನ್ನ ಮನೆ ಮತ್ತು ಮನವನ್ನು ಉದ್ಯಾನದಂತೆ ಮಾಡಿವೆ. ನಿಮ್ಮ ಅಭಿಮಾನಕ್ಕೆ ನನ್ನ ಹೃದಯ ತುಂಬಿದೆ ಎಂದು ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಬಿ ಟೌನ್‌ನಲ್ಲಿ ಮುದ್ದಾದ ಜೋಡಿಗಳಲ್ಲಿ ಒಂದು. ಹಲವು ದಿನಗಳಿಂದ ಈ ಜೋಡಿ​ ಡೇಟಿಂಗ್ ಮಾಡುತ್ತಿದ್ದು, ಆಗಾಗ ಪಾರ್ಟಿ ಮತ್ತು ಡಿನ್ನರ್​ಗಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಇಬ್ಬರು ಕೈಕೈ ಹಿಡಿದುಕೊಂಡು ರೆಸ್ಟೋರೆಂಟ್​ವೊಂದರಿಂದ ಒಟ್ಟಿಗೆ ಹೊರ ಬರುತ್ತಿದ್ದ ಫೋಟೋ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಹೃತಿಕ್ ಅವರಿಗಿಂತ 16 ವರ್ಷ ಚಿಕ್ಕವಳಾಗಿರುವ ಸಬಾ ಆಜಾದ್, ಸಂಗೀತ ಮತ್ತು ನಟನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಗರ್ಲ್​ಫ್ರೆಂಡ್​​ ಸಬಾ ಆಜಾದ್ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.