ETV Bharat / entertainment

'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಟ್ರೇಲರ್​ ಅನಾವರಣಕ್ಕೆ ದಿನ ನಿಗದಿ - Hostel Hudugaru Bekagiddare

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೇಲರ್​ ಸೋಮವಾರ ಸಂಜೆ 6 ಗಂಟೆಗೆ ಅನಾವರಣಗೊಳ್ಳಲಿದೆ.

Hostel Hudugaru Bekagiddare Trailer
ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಟ್ರೇಲರ್
author img

By

Published : Jul 8, 2023, 3:52 PM IST

ಕನ್ನಡ ಚಿತ್ರರರಂಗದಲ್ಲಿ ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಚಿತ್ರ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ'. ಶೀರ್ಷಿಕೆ ಮಾತ್ರವಲ್ಲ ವಿಭಿನ್ನ ಪ್ರಚಾರದ ಮೂಲಕವೂ ಕನ್ನಡಿಗರ ಗಮನವನ್ನು ತನ್ನತ್ತ ಕೇಂದ್ರೀಕರಿಸಿದೆ. ಈ ತಿಂಗಳಾಂತ್ಯಕ್ಕೆ ತೆರೆ ಕಾಣಲು ಸಜ್ಜಾಗಿರುವ ಈ ಸಿನಿಮಾದ ಟ್ರೇಲರ್​ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಿನಿಪ್ರಿಯರು ಹೆಚ್ಚು ಕಾಯಬೇಕೆಂದಿಲ್ಲ. ಇನ್ನೆರಡು ದಿನಗಳಲ್ಲಿ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಟ್ರೇಲರ್​​ ನಿಮ್ಮ ಮುಂದೆ ಬರಲಿದೆ.

ರಿಷಬ್​ ಶೆಟ್ಟಿ ಪೋಸ್ಟ್: 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರದ ಸ್ಪೆಷಲ್​ ವಿಡಿಯೋ ಒಂದು ಅನಾವರಣಗೊಂಡಿದೆ. ಟ್ರೇಲರ್​ನ ಪ್ರೋಮೋ ಎಂದೇ ಹೇಳಬಹುದು. ಈ ವಿಡಿಯೋವನ್ನು ಸ್ಟಾರ್ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ನನ್ನ ತುಂಗ ಬಾಯ್ಸ್ ಹಾಸ್ಟೆಲ್​ಗೆ ಹೃತ್ಪೂರ್ವಕ ಸ್ವಾಗತ. ನನ್ನ ಶಿಷ್ಯಂದಿರ ನವರಂಗಿ ಆಟಗಳ ಅನಾವರಣ ಇದೇ ಸೋಮವಾರ ಸಂಜೆ 6ಕ್ಕೆ' ಎಂದು ಬರೆದುಕೊಂಡಿದ್ದಾರೆ. ಟ್ರೇಲರ್ ದಿನಾಂಕ 10, ಸೋಮವಾರ ಸಂಜೆ ಅನಾವರಣಗೊಳ್ಳಲಿದೆ.

ಈ ಸ್ಪೆಷಲ್​ ವಿಡಿಯೋ ನೋಡಿದವರು ತಮ್ಮ ಪ್ರತಿಕ್ರಿಯೆ ಕೊಡಲು ಪ್ರಾರಂಭಿಸಿದ್ದಾರೆ. ಸಿನಿಮಾ ಕುರಿತು ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಟ್ರೇಲರ್​, ಸಿನಿಮಾ ವೀಕ್ಷಿಸಲು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಪ್ರೇಕ್ಷಕರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ಕಾಂತಾರ 2 ಅಪ್​ಡೇಟ್ಸ್ ಕೊಡುವಂತೆ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಅವರಲ್ಲಿ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: Megha Shetty Photo: ಹಸೆಮಣೆ ಏರಲಿದ್ದಾರಾ 'ಜೊತೆ ಜೊತೆಯಲಿ ಅನು ಸಿರಿಮನೆ'?

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡಿದೆ. ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್, ವಿಡಿಯೋ ಯುವಕರನ್ನು ಹೆಚ್ಚು ಆಕರ್ಷಿಸಿದೆ. ಈ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ಕಥೆ ಬರೆದು, ಆ್ಯಕ್ಷನ್​ ಕಟ್​​ ಹೇಳಿದ್ದಾರೆ. ಚಿತ್ರೀಕರಣ ಪೂರ್ಣಗೊಂಡು, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಸಹ ಬಹುತೇಕ ಮುಗಿದಿದೆ. ರಂಗಭೂಮಿ ಪ್ರತಿಭೆಗಳು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ವರುಣ್ ಸ್ಟುಡಿಯೋಸ್, ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ನಿತಿನ್ ಕೃಷ್ಣಮೂರ್ತಿ, ವರುಣ್ ಕುಮಾರ್ ಗೌಡ, ಅರವಿಂದ್ ಕೆ. ಕಶ್ಯಪ್ ಅವರು ಹೊಸಬರ ಚಿತ್ರಕ್ಕೆ ಪ್ರೋತ್ಸಾಹ ನೀಡಿ ಸಿನಿಮಾ ನಿರ್ಮಾಣ ಮಾಡಿದೆ.

ಇದನ್ನೂ ಓದಿ: Rishab Shetty birthday Photos: 'ಸಾಯುವವರೆಗೂ ಸಿನಿಮಾಗಳ ಮೂಲಕ ನಿಮ್ಮ ಋಣ ತೀರುಸುತ್ತೇನೆ' - ರಿಷಬ್ ಶೆಟ್ಟಿ

ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಪಿಕ್ಚರ್ಸ್ ಮೂಲಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕ್ಯಾಮರಾ ವರ್ಕ್, ಸುರೇಶ್ ಸಂಕಲನ ಈ ಚಿತ್ರಕ್ಕಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕನ್ನಡ ನಟರು ಈ ಚಿತ್ರಕ್ಕೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. ಸಿನಿಮಾ ಇದೇ ಜುಲೈ 21 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.