ETV Bharat / entertainment

ಯಶ್ ಜನ್ಮದಿನ: ರಾಕಿಂಗ್​ ಸ್ಟಾರ್​​ ಜೊತೆ ಹೊಸ ಸಿನಿಮಾ ಮಾಡಲಿರುವ ಹೊಂಬಾಳೆ ಫಿಲ್ಸ್ಮ್? - ನಟ ಯಶ್​

ಜನ್ಮದಿನನದ ಸಂಭ್ರಮದಲ್ಲಿರುವ ನಟ ಯಶ್​ ಅವರಿಗೆ ಹೊಂಬಾಳೆ ಫಿಲ್ಮ್ಸ್ ಇಂದ ವಿಶೇಷವಾಗಿ ಶುಭಾಶಯ- ಮತ್ತೊಂದು ಚಿತ್ರದ ಸುಳಿವು- ರಾಕಿಂಗ್​ ಸ್ಟಾರ್​ ಅಭಿಮಾನಿಗಳಿಗೆ ಖುಷಿ ಸುದ್ದಿ

yash birthday
ಯಶ್ ಜನ್ಮದಿನ
author img

By

Published : Jan 8, 2023, 7:15 PM IST

ರಾಕಿಂಗ್​​ ಸ್ಟಾರ್ ಯಶ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ 37ನೇ ಜನ್ಮ ದಿನವನ್ನು ಆತ್ಮೀಯರೊಂದಿಗೆ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ ಸ್ಯಾಂಡವುಡ್​ ಸೂಪರ್​ ಸ್ಟಾರ್. ಮೆಚ್ಚಿನ ನಟನಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರ ರಂಗದವರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸೂಪರ್​ ಹಿಟ್ ಕೆಜಿಎಫ್ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ನಟ ಯಶ್ ಅವರಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಸ್ಟಾರ್​ ನಟನಿಗೆ ಮತ್ತೊಂದು ಚಿತ್ರದ ಸುಳಿವು ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ ಹೊಂಬಾಳೆ ಫಿಲ್ಮ್ಸ್.

ಶೀಘ್ರದಲ್ಲೇ ಮತ್ತೊಂದು ಸಿನಿಮಾಗಾಗಿ ಕಾಯುತ್ತಿದ್ದೇವೆ: ಕೆಜಿಎಫ್ 1 ಮತ್ತು ಕೆಜಿಎಫ್ 2 ಮೂಲಕ ಯಶ್ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವನ್ನೇ ನೀಡಿದ ಹೊಂಬಾಳೆ ಫಿಲ್ಸ್ಮ್ ನಟ ಯಶ್​ ಅವರಿಗೆ ವಿಶೇಷವಾಗಿ ಶುಭ ಕೋರಿದೆ. 'ಕೆಜಿಎಫ್‌ ಚಾಪ್ಟರ್ 2 ಅದ್ಭುತ ಸಿನಿಮಾ. ''ಶೀಘ್ರದಲ್ಲೇ ಮತ್ತೊಂದು ಸಿನಿಮಾಗಾಗಿ ಕಾಯುತ್ತಿದ್ದೇವೆ''. ಕನಸನ್ನು ರೂಪಿಸಿದ ಮತ್ತು ಅದನ್ನು ಮೀರಿದ ವ್ಯಕ್ತಿಯಾದ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅದ್ಭುತವಾದ ವರ್ಷ ನಿಮ್ಮದಾಗಲಿ, ರಾಕಿಂಗ್​ ಅಗಿರಿ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.

ಹೊಂಬಾಳೆ ಫಿಲ್ಮ್ಸ್ 'ಯಶ'ಸ್ಸು: ಕೆಜಿಎಫ್​ ಚಾಪ್ಟರ್​ 1, ಕೆಜಿಎಫ್​ ಚಾಪ್ಟರ್​ 2 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಚಿತ್ರಗಳು. 2022ರಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು ಕೇವಲ ಎರಡು ಚಿತ್ರಗಳಾದರೂ ಗಲ್ಲಾ ಪೆಟ್ಟಿಗೆಯಲ್ಲಿ ಲೂಟಿ ಮಾಡಿದ್ದು ಸಾವಿರಾರು ಕೋಟಿ. ಕಳೆದ ವರ್ಷ ತೆರೆ ಕಂಡ ಕೆಜಿಎಫ್ 2 ಮತ್ತು ಕಾಂತಾರ ಸೂಪರ್​ ಹಿಟ್ ಚಿತ್ರಗಳಾಗಿ ಹೊರಹೊಮ್ಮಿವೆ. ಈ ಸಾಧನೆಯೊಂದಿಗೆ ಸ್ಯಾಂಡಲ್​ವುಡ್​ ಕೀರ್ತಿ ಹೆಚ್ಚಿಸಿದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೊಂಬಾಳೆ ಫಿಲ್ಮ್ಸ್ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದು, ಹೊಸ ಯೋಜನೆಗೆ ಮತ್ತೆ ಕೈಜೋಡಿಸುವ ಸುಳಿವು ನೀಡಿದ್ದಾರೆ.

ಕೆಜಿಎಫ್ ಯಶಸ್ಸು: ಯಶ್ ನಟನೆಯ ಕೆಜಿಎಫ್ 2 ಸಿನಿಮಾವು 2022ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹ ಮಾಡಿತು. ಒಟ್ಟು 1,200 ಕೋಟಿ ರೂ. ಸಂಗ್ರಹಿಸುವ ಮೂಲಕ ದೊಡ್ಡ ಸಿನಿಮಾವಾಗಿ ಗುರುತಿಸಿಕೊಂಡಿತು. ಇನ್ನೂ ಹೊಂಬಾಳೆ ಫಿಲ್ಮ್ಸ್ 2023 ರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ನಟ ಪ್ರಭಾಸ್ ಅಭಿನಯದ 'ಸಲಾರ್' ಮೂಲಕ ಮತ್ತೊಂದು ಬ್ಲಾಕ್ಬಸ್ಟರ್ ಅನ್ನು ನೀಡಲು ಸಿದ್ಧವಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಜಿಎಫ್‌ ಸ್ಟಾರ್‌!​ ಫೋಟೋಗಳಲ್ಲಿ ನೋಡಿ 'ಯಶ'ಸ್ಸಿನ ಹಾದಿ..

ದುಬೈ ಪ್ರವಾಸ: ಈ ಸಾಲಿನ ಹುಟ್ಟುಹಬ್ಬವನ್ನು ರಾಕಿಂಗ್​ ಸ್ಟಾರ್ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಮಕ್ಕಳು ಹಾಗೂ ಆಪ್ತ ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಎರಡು ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗಾಗಿ ನಟ ಯಶ್​ ವಿಶೇಷ ಪತ್ರ ಬರೆದಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಯಶ್, ಜನ್ಮದಿನದಂದು ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಭೇಟಿಯಾಗಲು ಅಂದು ಯಾರೂ ಬರಬೇಡಿ, ಶೀಘ್ರದಲ್ಲೇ ಹೆಮ್ಮೆ ಪಡುವಂತಹ ಸುದ್ದಿಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ವಿನಂತಿಸಿದ್ದರು.

ಇದನ್ನೂ ಓದಿ: ದುಬೈನಲ್ಲಿ ಜನ್ಮದಿನ ಆಚರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.