ETV Bharat / entertainment

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ಸೌತ್​ ಸುಂದರಿ ಕೀರ್ತಿ ಸುರೇಶ್​

author img

By

Published : Dec 4, 2022, 1:48 PM IST

Updated : Dec 5, 2022, 12:24 PM IST

ಹೊಂಬಾಳೆ ಫಿಲ್ಮ್ಸ್ ನಟಿ ಕೀರ್ತಿ ಸುರೇಶ್​ ಅವರ ಮುಂದಿನ ಸಿನಿಮಾ ನಿರ್ಮಾಣ ಮಾಡಲಿದೆ.

Hombale Films new movie with Keerthy Suresh
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ಕೀರ್ತಿ ಸುರೇಶ್​

ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಬಾಳೆ ಫಿಲ್ಮ್ಸ್​​ ಸಂಸ್ಥೆ ಶಾರುಖ್​ ಖಾನ್​​​ ಅವರ ಸಿನಿಮಾ ನಿರ್ಮಿಸಲಿದೆ ಎನ್ನುವ ಮಾಹಿತಿ ನಿನ್ನೆಯಷ್ಟೇ ಹೊರಬಿದ್ದಿತ್ತು. ಕೆಜಿಎಫ್ 1, ಕೆಜಿಎಫ್ 2 ಮತ್ತು ಕಾಂತಾರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರೋ ನಿರ್ಮಾಪಕ ವಿಜಯ್ ಕಿರಂಗದೂರ್ ಈಗ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ಸೌತ್​ ಸುಂದರಿ ಕೀರ್ತಿ ಸುರೇಶ್​ ಅವರ ಮುಂದಿನ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನುವ ಮತ್ತೊಂದು ಸುದ್ದಿ ಕೊಟ್ಟಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​​ ಟ್ವಿಟರ್​ ಖಾತೆಯಲ್ಲಿ ಅಧಿಕೃತ ಘೋಷಣೆ ಮಾಡಿದೆ. ಕೀರ್ತಿ ಸುರೇಶ್​ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, 'ಮನೆಯಿಂದಲೇ ಕ್ರಾಂತಿ ಆರಂಭವಾಗಬಹುದು, ತಯಾರಾಗಿರಿ' ಎಂದು ಕ್ಯಾಪ್ಷನ್ ಕೊಟ್ಟಿದೆ.

ಸದ್ಯ ಚಿತ್ರಕ್ಕೆ ರಘು ತಥಾ (Raghu Thatha) ಎಂದು ಶೀರ್ಷಿಕೆ ಕೊಟ್ಟಿದೆ. ನಟಿ ಕೀರ್ತಿ ಸುರೇಶ್​ ಅಭಿನಯದ ಚಿತ್ರದಲ್ಲಿ ಹಿರಿಯ ನಟ ಎಂ ಎಸ್​ ಭಾಸ್ಕರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ವಿಜಯ್​ ಕಿರಂಗದೂರ್​ ನಿರ್ಮಾಣದ ಚಿತ್ರವನ್ನು ಸುಮನ್​ ಭಾಸ್ಕರ್ ನಿರ್ದೇಶಿಸಲಿದ್ದಾರೆ. ಯಾಮಿನಿ ಯಜ್ಞಮೂರ್ತಿ ಕ್ಯಾಮರಾ ವರ್ಕ್ ಇದ್ದು, ಉಳಿದ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.

ಇದನ್ನೂ ಓದಿ: ಶಾರುಖ್​​ ಸಿನಿಮಾ ನಿರ್ಮಿಸಲಿದೆ ಹೊಂಬಾಳೆ ಫಿಲ್ಮ್ಸ್​​​: ಕಿಂಗ್​ ಖಾನ್ ಜೊತೆ ಸ್ಯಾಂಡಲ್​ವುಡ್ ಶೆಟ್ರು

ನಟಿ ಕೀರ್ತಿ ಸುರೇಶ್​ ಸಹ ಈ ಬಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರತಂಡದೊಂದಿಗಿನ ಫೋಟೋ ಶೇರ್ ಮಾಡಿರುವ ಅವರು Yek gaav mein yek kisan ಅಂದರೆ ಒಂದು ಹಳ್ಳಿಯಲ್ಲಿ ಓರ್ವ ರೈತ ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ಫೋಸ್ಟರ್ ಕ್ಯಾಪ್ಷನ್​ ನೋಡುತ್ತಿದ್ದರೆ, ಒಂದು ಹಳ್ಳಿಯ ಮತ್ತು ರೈತನ ಕಥೆ ಎನಿಸುತ್ತಿದೆ. ಎಂ ಎಸ್​ ಭಾಸ್ಕರ್ ರೈತನಾಗಿ ಮತ್ತು ಅವರ ಮೊಮ್ಮಗಳಾಗಿ ಕೀರ್ತಿ ಸುರೇಶ್​ ಅಭಿನಯಿಸಲಿದ್ದಾರೆ, ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ಚಿತ್ರವಿದು ಅನ್ನೋದು ಹೊಂಬಾಳೆ ಫಿಲ್ಮ್ಸ್​ ಶೇರ್ ಮಾಡಿರುವ ಪೋಸ್ಟರ್ ಸುಳಿವು.

Last Updated : Dec 5, 2022, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.