ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ ಬ್ಲಾಕ್ಬಸ್ಟರ್ ಸಿನಿಮಾಗಳು ಮೂಡಿಬಂದಿವೆ. ಕೆಜಿಎಫ್ 1, ಕೆಜಿಎಫ್ 2 ಮತ್ತು ಕಾಂತಾರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರೋ ನಿರ್ಮಾಪಕ ವಿಜಯ್ ಕಿರಗಂದೂರು ಕಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಚಾರ. 'ರಘು ತಾತಾ' ಎಂಬ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
-
#RaghuThatha, a rollicking, hilarious adventure is coming soon to a cinema near you.
— Hombale Films (@hombalefilms) December 19, 2023 " class="align-text-top noRightClick twitterSection" data="
வேடிக்கையும் வினோதமும் நிறைந்த நகைச்சுவை திரைப்படம், ரகு தாத்தா. விரைவில் உங்கள் அருகிலுள்ள திரையரங்குகளில்…
▶️ https://t.co/kTXp5FY4jV@KeerthyOfficial @hombalefilms @VKiragandur @sumank… pic.twitter.com/x3XXVCtl0U
">#RaghuThatha, a rollicking, hilarious adventure is coming soon to a cinema near you.
— Hombale Films (@hombalefilms) December 19, 2023
வேடிக்கையும் வினோதமும் நிறைந்த நகைச்சுவை திரைப்படம், ரகு தாத்தா. விரைவில் உங்கள் அருகிலுள்ள திரையரங்குகளில்…
▶️ https://t.co/kTXp5FY4jV@KeerthyOfficial @hombalefilms @VKiragandur @sumank… pic.twitter.com/x3XXVCtl0U#RaghuThatha, a rollicking, hilarious adventure is coming soon to a cinema near you.
— Hombale Films (@hombalefilms) December 19, 2023
வேடிக்கையும் வினோதமும் நிறைந்த நகைச்சுவை திரைப்படம், ரகு தாத்தா. விரைவில் உங்கள் அருகிலுள்ள திரையரங்குகளில்…
▶️ https://t.co/kTXp5FY4jV@KeerthyOfficial @hombalefilms @VKiragandur @sumank… pic.twitter.com/x3XXVCtl0U
ಕೆಲವು ತಿಂಗಳುಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಅಪ್ಡೇಟ್ ನೀಡಿತ್ತು. ಇದೀಗ 'ರಘು ತಾತಾ' ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅತ್ಯಂತ ಶೀಘ್ರದಲ್ಲೇ ಸಿನಿಮಾ ನಿಮ್ಮ ಮುಂದೆ ಬರಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಅದಕ್ಕಾಗಿ ಹಂಚಿಕೊಂಡಿರುವ ಝಲಕ್ ಕೂಡ ಚೆನ್ನಾಗಿದೆ. ಗ್ಲಿಂಪ್ಸ್ನಲ್ಲಿ ಯಾವುದೇ ಪಾತ್ರಗಳ ಪರಿಚಯ ಮಾಡದ ಚಿತ್ರತಂಡ ಸಿನಿಮಾದ ಕುತೂಹಲ ಹೆಚ್ಚಿಸಿದೆ. ಕೇವಲ ಸಿನಿಮಾ ಪೋಸ್ಟರ್ ತಳ್ಳುತ್ತಾ ಮೈಕ್ನಲ್ಲಿ ಅನೌನ್ಸ್ ಮಾಡುತ್ತಾ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ದಶಕಗಳ ಹಿಂದಿನ ಸಿನಿಮಾ ಪ್ರಮೋಷನ್ ಸ್ಟೈಲ್ ಅನ್ನು ಇದೀಗ ಬಳಸಿಕೊಂಡಿರುವ 'ರಘು ತಾತಾ' ಚಿತ್ರತಂಡ ಏನು ಹೇಳಲು ಹೊರಟಿದೆ ಎನ್ನುವುದನ್ನು ಥಿಯೇಟರ್ನಲ್ಲಿ ನೋಡಬೇಕಿದೆ. ಸಿನಿಮಾಗೆ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ. ಹಿರಿಯ ನಟ ಎಂ.ಎಸ್ ಭಾಸ್ಕರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 'ರಘು ತಥಾ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಯುವತಿಯೊಬ್ಬಳ ಸುತ್ತ ಕಥೆ ಹೆಣೆಯಲಾಗಿದೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಸೇರಿದಂತೆ ಇತರ ಸಿನಿಮಾಗಳಿಗೆ ಕಥೆ - ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ 'ರಘು ತಾತಾ'ವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಎಂ.ಎಸ್ ಭಾಸ್ಕರ್ ರೈತನಾಗಿ ಮತ್ತು ಅವರ ಮೊಮ್ಮಗಳಾಗಿ ಕೀರ್ತಿ ಸುರೇಶ್ ಅಭಿನಯಿಸಲಿದ್ದಾರೆ. ಸಮಾಜಕ್ಕೆ ಸಂದೇಶ ಕೊಡುವ ಚಿತ್ರವಿದು ಅನ್ನೋದು ಹೊಂಬಾಳೆ ಫಿಲ್ಮ್ಸ್ ಈ ಮೊದಲು ಶೇರ್ ಮಾಡಿರುವ ಪೋಸ್ಟರ್ ಸುಳಿವು. ಚಿತ್ರಕ್ಕೆ ಯಾಮಿನಿ ಯಜ್ಞಮೂರ್ತಿ ಕ್ಯಾಮರಾ ವರ್ಕ್ ಇದ್ದು, ಉಳಿದ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ. ಸದ್ಯ ಬಿಡುಗಡೆಯಾಗಿರುವ ಗ್ಲಿಂಪ್ಸ್ನಿಂದಾಗಿ 'ರಘು ತಾತಾ' ಅತ್ಯಂತ ಶೀಘ್ರದಲ್ಲೇ ತೆರೆ ಕಾಣಲಿದೆ.
ಇನ್ನೂ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಬ್ಲಾಕ್ಬಸ್ಟರ್ ಸಿನಿಮಾವನ್ನು ನೀಡಲು ತಯಾರಾಗಿದೆ. ಇದೇ ಡಿಸೆಂಬರ್ 22ರಂದು 'ಸಲಾರ್' ಬಿಡುಗಡೆಯಾಗಲಿದೆ. 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಈಗಾಗಲೇ ಅನಾವರಣಗೊಂಡಿರುವ ರಿಲೀಸ್ ಟ್ರೇಲರ್ ಸದ್ಯ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ: ಭರ್ಜರಿ ಅಡ್ವಾನ್ಸ್ ಟಿಕೆಟ್ಸ್ ಬುಕಿಂಗ್: ಮೊದಲ ದಿನವೇ ಸಲಾರ್ ₹ 100 ಕೋಟಿ ಗಳಿಸುವ ನಿರೀಕ್ಷೆ