ಬಾಲಿವುಡ್ ನಟರಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅವರ ಮುಂಬರುವ ಚಿತ್ರ 'ವಿಕ್ರಮ್ ವೇದ' ವಿಶ್ವದಾದ್ಯಂತ ಸೆಪ್ಟೆಂಬರ್ 30ರಂದು 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ.
ಭಾರತದ ಹೊರತಾಗಿ, ಉತ್ತರ ಅಮೆರಿಕಾ, ಯುಕೆ, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಕೆಲವೆಡೆ ಬಾಲಿವುಡ್ ಚಲನಚಿತ್ರಗಳು ಸಾಮಾನ್ಯವಾಗಿ ಬಿಡುಗಡೆಯಾಗುತ್ತವೆ. 'ವಿಕ್ರಂ ವೇದ' ಯುರೋಪ್‌ನ 22 ದೇಶಗಳಲ್ಲಿ ಮತ್ತು ಜಪಾನ್, ರಷ್ಯಾ, ಪನಾಮ ಮತ್ತು ಪೆರು ಸೇರಿದಂತೆ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ 27 ದೇಶ ಸೇರಿದಂತೆ ಬಾಲಿವುಡ್‌ಗೆ ಸಾಂಪ್ರದಾಯಿಕವಲ್ಲದ ಪ್ರಾಂತ್ಯಗಳಲ್ಲಿಯೂ ಬಿಡುಗಡೆಯಾಗಲಿದೆ.
ಈ ಚಿತ್ರವು 2017 ರ ತಮಿಳಿನ ಹಿಟ್ ಸಿನಿಮಾ 'ವಿಕ್ರಮ್ ವೇದ'ದ ರಿಮೇಕ್ ಆಗಿದೆ. ಇದನ್ನು ನಿರ್ದೇಶಕರಾದ ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶಿಸಿದ್ದಾರೆ ಮತ್ತು ಆರ್.ಮಾಧವನ್ ಮತ್ತು ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳು ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಇದರ ಹಿಂದಿ ರಿಮೇಕ್‌ನ ನಿರ್ದೇಶಕರೂ ಆಗಿದ್ದಾರೆ. ಇದನ್ನು ಎಸ್ ಶಶಿಕಾಂತ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ವೇದ ಪಾತ್ರದಲ್ಲಿ, ಸೈಫ್ ಅಲಿ ಖಾನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
'ವಿಕ್ರಮ್ ವೇದ' ಸಿನಿಮಾ ಭಾರತದ ಜಾನಪದ ಕಥೆಯಾದ ವಿಕ್ರಮ ಮತ್ತು ಬೇತಾಳ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದರೋಡೆಕೋರನನ್ನು ಪತ್ತೆಹಚ್ಚಲು ಹೊರಡುವ ಕಠಿಣ ಪೊಲೀಸ್ ಅಧಿಕಾರಿಯಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದರೆ, ದರೋಡೆಕೋರನ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಬಿಡುಗಡೆಯಾದ ಮೊದಲ ವಾರದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನಿಮಾ ಯಾವುದು ಗೊತ್ತೇ?
ಫ್ರೈಡೆ ಫಿಲ್ಮ್‌ವರ್ಕ್ಸ್, ಜಿಯೋ ಸ್ಟುಡಿಯೋಸ್ ಮತ್ತು ವೈಎನ್‌ಒಟಿ ಸ್ಟುಡಿಯೋಸ್ ಸಹಯೋಗದಲ್ಲಿ ಟಿ-ಸೀರೀಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಈ ಚಿತ್ರವನ್ನು ನಿರ್ಮಿಸಿದೆ. ಭೂಷಣ್ ಕುಮಾರ್, ಎಸ್.ಶಶಿಕಾಂತ್ ಚಿತ್ರದ ನಿರ್ಮಾಪಕರು.