ETV Bharat / entertainment

ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಟ್ರೈಲರ್‌ ರಿಲೀಸ್​.. ಹೆಚ್ಚಿದ ಕುತೂಹಲ - ಹಿಂದಿ ದೃಶ್ಯಂ

ಹಿಂದಿ ದೃಶ್ಯಂ 2 ಟ್ರೈಲರ್‌ ರಿಲೀಸ್ ಆಗಿದ್ದು, ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.​

Drishyam 2 trailer released
ದೃಶ್ಯಂ 2 ಟ್ರೈಲರ್‌ ರಿಲೀಸ್
author img

By

Published : Oct 18, 2022, 3:02 PM IST

ಬಾಲಿವುಡ್​​ ನಟ ಅಜಯ್ ದೇವಗನ್ ಅವರು ದೃಶ್ಯಂ 2 ಟ್ರೈಲರ್‌ ಮೂಲಕ ತಮ್ಮ ಅಭಿಮಾನಿಗಳ ನಿರೀಕ್ಷೆ, ಕುತೂಹಲವನ್ನು ಹೆಚ್ಚಿಸಿದ್ದಾರೆ. ಸೋಮವಾರ ಅಜಯ್ ಅಭಿನಯದ ದೃಶ್ಯಂ 2 ಸಿನಿಮಾ ತಯಾರಕರು ಈ ಥ್ರಿಲ್ಲರ್ ಚಿತ್ರದ ಟ್ರೈಲರ್ ಅನ್ನು ಗೋವಾದ ಪಂಜಿಮ್‌ನಲ್ಲಿರುವ ಐನಾಕ್ಸ್‌ನಲ್ಲಿ ಬಿಡುಗಡೆ ಮಾಡಿದ್ದು, ಹೆಚ್ಚಿನ ವೀಕ್ಷಣೆ ಆಗುತ್ತಿದೆ.

ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರದ ದೃಶ್ಯಂ 2 ಸಿನಿಮಾದಲ್ಲಿ ಇಶಿತಾ ದತ್ತಾ, ಅಕ್ಷಯ್ ಖನ್ನಾ, ರಜತ್ ಕಪೂರ್ ಮತ್ತು ಶ್ರಿಯಾ ಸರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂದಿನ ನವೆಂಬರ್ 18ರಂದು ತೆರೆ ಕಾಣಲಿರುವ ದೃಶ್ಯಂ 2 ಚಿತ್ರದ ಟ್ರೈಲರ್ ಈಗ ಅಭಿಮಾನಿಗಳ ಕಾತರವನ್ನು ದುಪ್ಪಟ್ಟು ಮಾಡಿದೆ.​

ದೃಶ್ಯಂ 2 ಸಿನಿಮಾ 2015ರಲ್ಲಿ ತೆರೆಕಂಡ ಮಲಯಾಳಂನ ಕ್ರೈಂ ಥ್ರಿಲ್ಲರ್ ಸಿನಿಮಾ. ಇದು ದೃಶ್ಯಂ ಒಂದರ ಮುಂದುವರಿದ ಭಾಗ. ಮಲಯಾಳಂನ ಜನಪ್ರಿಯ ನಟ ಮೋಹನ್‌ಲಾಲ್​ ಅಭಿನಯದಲ್ಲಿ ಮೊದಲ ಬಾರಿಗೆ ಈ ಸಿನಿಮಾ ಚಿತ್ರ ನಿರ್ಮಾಣವಾಗಿತ್ತು. ನಂತರ ತೆಲುಗು, ಕನ್ನಡ, ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ, ಮಲಯಾಳಂನಲ್ಲಿದ್ದ ಹೆಸರನ್ನೇ ಎಲ್ಲ ಭಾಷೆಗಳಲ್ಲೂ ಇಡಲಾಗಿದೆ.

  • " class="align-text-top noRightClick twitterSection" data="">

ಹಿಂದಿ ದೃಶ್ಯಂ 2 ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್, ಕ್ರಿಶನ್ ಕುಮಾರ್ ನಿರ್ಮಿಸಿದ್ದು, ಸಂಜೀವ್ ಜೋಶಿ, ಆದಿತ್ಯ ಚೌಕ್ಸೆ ಮತ್ತು ಶಿವ ಚನಾನ ಸಹ ನಿರ್ಮಾಣ ಮಾಡಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್, ಟಿ - ಸೀರಿಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿವೆ. ಹಿಂದಿ ಭಾಷೆಯ ದೃಶ್ಯಂ ಮೊದಲ ಭಾಗವನ್ನು ನಿರ್ಮಾಪಕ ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು. ರಾಕ್‌ಸ್ಟಾರ್ ಡಿಎಸ್‌ಪಿ (ದೇವಿ ಶ್ರೀ ಪ್ರಸಾದ್) ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ-ಮಹೇಶ್ ಬಾಬು

ದೃಶ್ಯಂ 1 ಸಿನಿಮಾದಲ್ಲಿ ನಟ ಅಜಯ್ ದೇವಗನ್ ಕುಟುಂಬಸ್ಥ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ತಮ್ಮ ಕುಟುಂಬವನ್ನು ಕಾಪಾಡಲು ಐಜಿಪಿ ಮೀರಾ ದೇಶಮುಖ್ (ಟಬು) ಅವರೊಂದಿಗೆ ಹೋರಾಡಿದ್ದರು. ಈ ಚಿತ್ರದ ಮುಂದುವರಿದ ಭಾಗವೇ ದೃಶ್ಯಂ 2. ತನ್ನ ಕುಟುಂಬದ ರಕ್ಷಣೆಗೆ ಮನೆ ಯಜಮಾನ ಹೇಗೆಲ್ಲ ಹೋರಾಡುತ್ತಾನೆ ಎಂಬುದರ ಸಣ್ಣ ಝಲಕ್ ಅನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.