ETV Bharat / entertainment

ಹಿಂದಿ ದೃಶ್ಯಂ 2 ಟೀಸರ್ ರಿಲೀಸ್.. ನ.18ಕ್ಕೆ ಸಿನಿಮಾ ತೆರೆಗೆ - Drishyam 2 release date

ಇಂದು ಹಿಂದಿ ದೃಶ್ಯಂ 2 ಟೀಸರ್ ರಿಲೀಸ್​ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ನವೆಂಬರ್ 18ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

Hindi Drishyam 2 Teaser Release
ಹಿಂದಿ ದೃಶ್ಯಂ 2 ಟೀಸರ್ ರಿಲೀಸ್
author img

By

Published : Sep 29, 2022, 4:36 PM IST

ಬಾಲಿವುಡ್‌ ನಟರಾದ ಅಜಯ್ ದೇವಗನ್, ಅಕ್ಷಯ್ ಖನ್ನಾ ಮತ್ತು ಟಬು ಮತ್ತು ಸೌತ್ ಸುಂದರಿ ಶ್ರಿಯಾ ಶರಣ್ ಅಭಿನಯದ ದೃಶ್ಯಂ 2 ಸಿನಿಮಾದ ಟೀಸರ್ ಇಂದು ರಿಲೀಸ್​ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ನಿನ್ನೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು.

ನವೆಂಬರ್ 18ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ. ಚಿತ್ರವು ಮೂಲತಃ 2015ರಲ್ಲಿ ತೆರೆಕಂಡ ಮಲಯಾಳಂನ ಕ್ರೈಂ ಥ್ರಿಲ್ಲರ್ ಆಗಿದೆ. ಇದು ದೃಶ್ಯಂ ಒಂದರ ಮುಂದುವರಿದ ಭಾಗ. ಮಲಯಾಳಂನ ಜನಪ್ರಿಯ ನಟ ಮೋಹನ್‌ಲಾಲ್​ ಅಭಿನಯದಲ್ಲಿ ಮೊದಲ ಬಾರಿಗೆ ಈ ಸಿನಿಮಾ ಚಿತ್ರ ನಿರ್ಮಾಣವಾಗಿತ್ತು. ನಂತರ ತೆಲುಗು, ಕನ್ನಡ, ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ, ಮಲಯಾಳಂನಲ್ಲಿದ್ದ ಹೆಸರನ್ನೇ ಎಲ್ಲ ಭಾಷೆಗಳಲ್ಲೂ ಇಡಲಾಗಿದೆ.

  • " class="align-text-top noRightClick twitterSection" data="">

ದೃಶ್ಯಂ 2 ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್, ಕ್ರಿಶನ್ ಕುಮಾರ್ ನಿರ್ಮಿಸಿದ್ದು, ಸಂಜೀವ್ ಜೋಶಿ, ಆದಿತ್ಯ ಚೌಕ್ಸೆ ಮತ್ತು ಶಿವ ಚನಾನ ಸಹ ನಿರ್ಮಾಣ ಮಾಡಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್, ಟಿ - ಸೀರಿಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿವೆ. ಹಿಂದಿ ಭಾಷೆಯ ದೃಶ್ಯಂ ಮೊದಲ ಭಾಗವನ್ನು ನಿರ್ಮಾಪಕ ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು.

ದೃಶ್ಯಂ 2 ಶೂಟಿಂಗ್ ಜೂನ್​ 21ರಂದು ಮುಕ್ತಾಯಗೊಂಡಿದೆ. ನವೆಂಬರ್ 18 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಈಗಾಗಲೇ ಘೋಷಿಸಿದ್ದಾರೆ. ಇಂದು ಬಿಡುಗಡೆ ಅದ ಟೀಸರ್ ಬಹಳ ಕುತೂಹಲ ಮೂಡಿಸಿದೆ. ಟೀಸರ್​ನಲ್ಲಿ ಮೊದಲ ಚಿತ್ರದ ಸಾರಾಂಶ ತೋರಿಸಲಾಗಿದ್ದು, ಈ ಬಾರಿ ನಾಯಕ ಅಜಯ್ ದೇವಗನ್ ಏನೋ ಒಪ್ಪಿಕೊಳ್ಳುವುದಾಗಿ ತಿಳಿಸಿರುವುದು ಪ್ರೇಕ್ಷಕರ ಕುತೂಹಲ ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: ಬ್ಲ್ಯಾಕ್​ ಹಾಟ್ ಡ್ರೆಸ್​ನಲ್ಲಿ ಬೋಲ್ಡ್ ಲುಕ್ ನೀಡಿದ ಸೌತ್​ ಸುಂದರಿ ಶ್ರಿಯಾ ಶರಣ್...ದೃಶ್ಯಂ 2 ಟೀಸರ್ ರಿಲೀಸ್

ಚಿತ್ರದ ಮೊದಲ ಭಾಗದಲ್ಲಿ ಅಜಯ್ ದೇವಗನ್ ಕುಟುಂಬಸ್ಥ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ತಮ್ಮ ಕುಟುಂಬವನ್ನು ಕಾಪಾಡಲು ಐಜಿಪಿ ಮೀರಾ ದೇಶಮುಖ್ (ಟಬು) ಅವರೊಂದಿಗೆ ಹೋರಾಡಿದ್ದರು. ಇದು ಚಿತ್ರದ ಮುಂದುವರಿದ ಭಾಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.