ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳ ಕ್ರೇಜ್ ಕೊಂಚ ಹೆಚ್ಚೇ ಇದೆ. ಶಾರುಖ್, ಸಲ್ಮಾನ್ ಅವರಂತಹ ಸೂಪರ್ ಸ್ಟಾರ್ಗಳ ಸಿನಿಮಾ ಅಲ್ಲಿನ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಹಾಗೇ, ಅಲ್ಲಿ ಅನೇಕ ಭಾರತೀಯ ಚಲನಚಿತ್ರಗಳನ್ನು ನಿಷೇಧಿಸಿದ ಸಂದರ್ಭಗಳೂ ಇವೆ. ಆದ್ರೆ ಕೆಲ ಚಿತ್ರಗಳು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಸಖತ್ ಸದ್ದು ಮಾಡಿ ಗಮನ ಸೆಳೆದಿವೆ. ಬಾಲಿವುಡ್ ಸಿನಿಮಾಗಳು ಅಲ್ಲಿನ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿವೆ. ಪಾಕಿಸ್ತಾನಿ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆಯನ್ನು ಹೊಂದಿರುವ ಭಾರತೀಯ ಚಿತ್ರವೊಂದು ಇದೆ.
'ಸಂಜು' ಚಿತ್ರ.. 2018 ರಲ್ಲಿ ಭಾರತದಲ್ಲಿ ಧೂಳೆಬ್ಬಿಸಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಜೀವನಾಧಾರಿತ 'ಸಂಜು' ಚಿತ್ರ ಪಾಕಿಸ್ತಾನದಲ್ಲಿ ಸದ್ದು ಮಾಡಿತ್ತು. ಹಿರಿಯ ನಟ ಸಂಜಯ್ ದತ್ ಪಾತ್ರವನ್ನು ರಣ್ಬೀರ್ ಕಪೂರ್ ನಿರ್ವಹಿಸಿದ್ದರು. ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಭಾರತದಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಂಜು ಸಿನಿಮಾ ಮೊದಲ ದಿನವೇ 34.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಭಾರತದಲ್ಲಿ ಈ ಸಿನಿಮಾ ಸುಮಾರು 342 ಕೋಟಿ ರೂ. ಗಳಿಸಿತ್ತು. ಜಾಗತಿಕವಾಗಿ 588.50 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಇದೇ ಚಿತ್ರ ಪಾಕಿಸ್ತಾನ ಬಾಕ್ಸ್ ಆಫೀಸ್‌ನಲ್ಲಿ 37.60 ಕೋಟಿ ರೂ. ಗಳಿಸಿತ್ತು.
ಸಂಜು ಸಿನಿಮಾ: ತ್ರೀ ಈಡಿಯಟ್ಸ್, ಪಿಕೆಯಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ರಣ್ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 100 ಕೋಟಿ ಬಜೆಟ್ನ ಈ ಸಿನಿಮಾ ವಿಶ್ವದಾದ್ಯಂತ 588.50 ಕೋಟಿ ರೂ. ಸಂಪಾದನೆ ಮಾಡಿತ್ತು. ಪಾಕಿಸ್ತಾನದ ಬಾಕ್ಸ್ ಆಫೀಸ್ನಲ್ಲೂ ಸಂಚಲನ ಸೃಷ್ಟಿಸಿತ್ತು. ಭಾರತದ ಸೂಪರ್ ಹಿಟ್ ಸಿನಿಮಾಗಳಾದ ಧೂಮ್-3 ಸಿನಿಮಾ 25 ಕೋಟಿ ರೂ., ಭಜರಂಗಿ ಭಾಯಿಜಾನ್ 23 ಕೋಟಿ ರೂ., ಪಿ.ಕೆ 22 ಕೋಟಿ ರೂ., ದಿಲ್ವಾಲೆ 20 ಕೋಟಿ ರೂ. ಸಂಗ್ರಹಿಸಿದ್ದರೆ ಸಂಜಯ್ ದತ್ ಜೀವನಾಧಾರಿತ 'ಸಂಜು' ಸಿನಿಮಾ 37.60 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಡ್ರಗ್ಸ್ ಕೇಸ್: ಆರೋಪಗಳಿಂದ ಭಾರತೀಯ ನಟಿ ದೋಷಮುಕ್ತ - ಯುಎಇನಿಂದ ತವರಿಗೆ ಮರಳಿದ ಪೆರೇರಾ
ಇನ್ನು ರಣ್ಬೀರ್ ಅವರ ಕೊನೆಯ ಸಿನಿಮಾ 'ತು ಜೂಟಿ ಮೆ ಮಕ್ಕರ್'. ಮಾರ್ಚ್ 8ರಂದು ತೆರೆಕಂಡ ಈ ಸಿನಿಮಾ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಲವ್ ರಂಜನ್ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಶ್ರದ್ಧಾ ಕಪೂರ್ ಅವರು ರಣ್ಬೀರ್ ಜೊತೆ ತೆರೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ತೆರೆಕಂಡ ಬ್ರಹ್ಮಾಸ್ತ್ರ ಸಿನಿಮಾ ಯಶಸ್ವಿಯಾಗಿದ್ದು, ಮುಂದಿನ 'ಅನಿಮಲ್' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ರಣ್ಬೀರ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಅನಂತ್ ನಾಗ್ ಸಿನಿ ಪಯಣಕ್ಕೆ 50ರ ಸಂಭ್ರಮ.. ಎವರ್ ಗ್ರೀನ್ ಹೀರೋನ ಅಪರೂಪದ ಫೋಟೋಗಳು ನಿಮಗಾಗಿ