ETV Bharat / entertainment

ಹೀರೋ ಆಫ್ ಹೀರೋಸ್: ದಿಲೀಪ್ ಕುಮಾರ್ ಸ್ಮರಣಾರ್ಥ ಚಲನಚಿತ್ರೋತ್ಸವ - ದಿಲೀಪ್ ಕುಮಾರ್ ಹೀರೋ ಆಫ್ ಹೀರೋಸ್

ನಟ ದಿಲೀಪ್ ಕುಮಾರ್ ಅವರ 100ನೇ ಜನ್ಮದಿನವನ್ನು ಆಚರಿಸಲು ಫಿಲ್ಮ್ ಹೆರಿಟೇಜ್ ಫೌಂಡೇಶನ್ ಶನಿವಾರ ಚಲನಚಿತ್ರೋತ್ಸವವನ್ನು ಘೋಷಿಸಿದೆ.

Hero Of Heroes
ಹೀರೋ ಆಫ್ ಹೀರೋಸ್
author img

By

Published : Nov 26, 2022, 4:53 PM IST

ದಿವಂಗತ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಅವರ 100ನೇ ಜನ್ಮದಿನ ಆಚರಿಸಲು ಫಿಲ್ಮ್ ಹೆರಿಟೇಜ್ ಫೌಂಡೇಶನ್ ಶನಿವಾರ ಚಲನಚಿತ್ರೋತ್ಸವವನ್ನು ಘೋಷಿಸಿದೆ. ದಿಲೀಪ್ ಕುಮಾರ್ ಹೀರೋ ಆಫ್ ಹೀರೋಸ್ ಎಂಬ ಶೀರ್ಷಿಕೆಯ ಈ ಉತ್ಸವವು ಡಿಸೆಂಬರ್ 10 ಮತ್ತು 11 ರಂದು ನಡೆಯಲಿದೆ ಎಂದು ಚಲನಚಿತ್ರ ನಿರ್ಮಾಪಕ ಮತ್ತು ಆರ್ಕೈವಿಸ್ಟ್ ಶಿವೇಂದ್ರ ಸಿಂಗ್ ದುಂಗರ್‌ಪುರ್ ಸ್ಥಾಪಿಸಿದ ನಾಟ್​ ಫಾರ್​ ಪ್ರಾಫಿಟ್ (ಲಾಭರಹಿತ) ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖ ಮಲ್ಟಿಪ್ಲೆಕ್ಸ್ PVR ಸಿನಿಮಾಸ್ ಸಹಭಾಗಿತ್ವದಲ್ಲಿ ದಿಲೀಪ್ ಕುಮಾರ್ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಾದ ಆನ್ (1952), ದೇವದಾಸ್ (1955), ರಾಮ್ ಔರ್ ಶ್ಯಾಮ್ (1967) ಮತ್ತು ಶಕ್ತಿ (1982)ಗಳು ದೇಶಾದ್ಯಂತ 20 ನಗರಗಳಲ್ಲಿ 30ಕ್ಕೂ ಹೆಚ್ಚು ಸಿನಿಮಾ ಹಾಲ್​ಗಳಲ್ಲಿ ಪ್ರದರ್ಶನಗೊಳ್ಳಲಿದೆ.

ದಿಲೀಪ್ ಕುಮಾರ್ ಅವರು ಜುಲೈ 2021ರಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರನ್ನು ದೊಡ್ಡ ಪರದೆಯ ಮೇಲೆ ಮರಳಿ ತರಲು ಈ ಉತ್ಸವವು ಒಂದು ಉತ್ತಮ ಅವಕಾಶವಾಗಿದೆ ಎಂದು ಶಿವೇಂದ್ರ ಸಿಂಗ್ ದುಂಗರ್‌ಪುರ್ ತಿಳಿಸಿದರು.

ಅವರು ನಿಜವಾಗಿಯೂ ಹೀರೋಗಳ ಹೀರೋ. ಇಂದಿಗೂ ಅವರು ದೊಡ್ಡ ತಾರೆಯರು ಎದುರು ನೋಡುವ ನಟರಾಗಿದ್ದಾರೆ. ಫಿಲ್ಮ್ ಹೆರಿಟೇಜ್ ಫೌಂಡೇಶನ್ ಈ ಮೈಲಿಗಲ್ಲನ್ನು ಆಚರಿಸಲು ಚಿತ್ರಮಂದಿರಗಳಲ್ಲಿ ಅವರ ಚಲನಚಿತ್ರಗಳ ಉತ್ಸವಕ್ಕಿಂತ ಉತ್ತಮವಾದ ಮಾರ್ಗವನ್ನು ಯೋಚಿಸುವುದಿಲ್ಲ.

ಈ ಚಿತ್ರಗಳು ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬಿಡುಗಡೆಯಾದವು. ದಿಲೀಪ್ ಕುಮಾರ್ ಅವರ ಅಭಿನಯದ ಶಕ್ತಿ, ಕಲೆ ಮತ್ತು ಅವರ ವರ್ಚಸ್ಸು ಅವರನ್ನು ವಯಸ್ಸಾಗದಂತೆ ಮಾಡಿತ್ತು ಎಂದು ಅಮಿತಾಭ್​ ಬಚ್ಚನ್ ಅವರ 80ನೇ ಜನ್ಮದಿನದಂದು ಚಲನಚಿತ್ರೋತ್ಸವವನ್ನು ಆಯೋಜಿಸಿದ್ದ ಶಿವೇಂದ್ರ ಸಿಂಗ್ ದುಂಗರ್‌ಪುರ್ ಹೇಳಿದರು.

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ಬಾಲಿವುಡ್​ ಹಿರಿಯ ನಟ ವಿಕ್ರಮ್​ ಗೋಖಲೆ ನಿಧನ

ದಿಲೀಪ್ ಕುಮಾರ್ ಚಿತ್ರಗಳನ್ನು ಏಕೆ ಸೇರಿಸಲಾಗಿಲ್ಲ ಎಂದು ಅನೇಕ ಜನರು ನನ್ನನ್ನು ಕೇಳಿದ್ದಾರೆ. ನಾನು ಈ ಚಲನಚಿತ್ರಗಳನ್ನು ಬಹಳ ಕಷ್ಟದಿಂದ ಒಟ್ಟಿಗೆ ಸೇರಿಸಿದ್ದೇನೆ. ಸಮಯ ಮೀರುತ್ತಿದೆ ಎಂಬುದನ್ನು ಅರಿತುಕೊಳ್ಳಲು ಇದು(ಚಿತ್ರೋತ್ಸವ, ಸಿನಿಮಾ ಸಂಗ್ರಹ) ಚಲನಚಿತ್ರ ನಿರ್ಮಾಪಕರಿಗೆ ಎಚ್ಚರಿಕೆಯ ಕರೆ ಎಂದು ನಾನು ಭಾವಿಸುತ್ತೇನೆ. ತಡವಾಗುವ ಮೊದಲು ಅವರು ತಮ್ಮ ಚಲನಚಿತ್ರಗಳನ್ನು ಸಂರಕ್ಷಿಸುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.